ಒಂದೇ ಸಿನಿಮಾದಲ್ಲಿ ಬಾಲಿವುಡ್‌ನ ಐದು ಸ್ಟಾರ್ಸ್ , ಕನ್ನಡದಲ್ಲಿ ಇದೆಲ್ಲ ಸಾಧ್ಯನಾ..?

ಬಾಲಿವುಡ್‌ನ ಪ್ರತಿಭಾವಂತ ಸ್ಟಾರ್ ರಣ್ವೀರ್ ಸಿಂಗ್. ಝೀರೋದಿಂದ ಹೀರೋ ಆದ ರಣ್ವೀರ್, ಪಾತ್ರ ಎಂತಹದ್ದೇ ಇರಲಿ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ. ಕಾಲ ಕಾಲಕ್ಕೆ ತಮ್ಮ ಅಭಿನಯದಿಂದ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದಾರೆ.

ಆದರೂ ಅದ್ಯಾಕೋ ರಣ್ವೀರ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದರು. ರಣ್ವೀರ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತಿದ್ದವು. ಕರಣ್ ಜೋಹರ್ ನಿರ್ಮಾಣದ ತಖ್ತ್‌ , ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ಅನ್ನಿಯನ್ ಚಿತ್ರದ ರಿಮೇಕ್, ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ರಾಕ್ಷಸ್, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬೈಜೂ ಬವರಾ, ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಒಂದಿಲ್ಲೊಂದು ವಿಘ್ನಗಳಿಂದಾಗಿ ನಿಂತು ಹೋದವು.

ranveer-singh-announces-exciting-new-project-with-aditya-dhar-cast-details-unveiled

ಇದೆಲ್ಲದರಿಂದ ಖುದ್ದು ರಣ್ವೀರ್ ಸಿಂಗ್ ಬೇಸತ್ತು ಹೋಗಿದ್ದರು. ಇದಕ್ಕೆ ಕೈಗನ್ನಡಿ ಎಂಬಂತೆ ರಣ್ವೀರ್ ಸಿಂಗ್ ತಮ್ಮ ಜೊತೆ ತಾಳ್ಮೆಯಿಂದ ಕಾದ ತಮ್ಮೆಲ್ಲ ಅಭಿಮಾನಿಗಳಿಗೆ ಈಗ ಧನ್ಯವಾದ ಹೇಳಿದ್ದಾರೆ. ಹೊಸ ಚಿತ್ರವನ್ನು ಘೋಷಿಸಿದ್ಧಾರೆ. ಇದು ನನ್ನ ಅಭಿಮಾನಿಗಳಿಗೆ, ನನ್ನೊಂದಿಗೆ ತುಂಬಾ ತಾಳ್ಮೆಯಿಂದಿರುವ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಈ ಬಾರಿ ಹಿಂದೆಂದೂ ಇಲ್ಲದಂತಹ ಸಿನಿಮೀಯ ಅನುಭವವನ್ನು ನಾನು ನಿಮಗೆ ನೀಡುತ್ತೇನೆ ಎನ್ನುವ ಭರವಸೆಯನ್ನು ನಾನು ನೀಡುತ್ತೇನೆ" ಎಂದಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಜೊತೆ ಸಂಜಯ್ ದತ್ ಇದ್ದಾರೆ. ಆರ್.ಮಾಧವನ್ ಕೂಡ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇಷ್ಟೇ ಅಲ್ಲ ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಕೂಡ ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಜೊತೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ.

ಇನ್ನೂ ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಖ್ಯಾತಿಯ ಆದಿತ್ಯ ಧಾರ್‌ ಈ ಮಲ್ಟಿ ಸ್ಟಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಉರಿ ಮೂಲಕ 350 ಕೋಟಿ ರೂಪಾಯಿಯನ್ನೂ ಬಾಲಿವುಡ್‌ಗೆ ನೀಡಿದ್ದ ಆದಿತ್ಯ ತಮ್ಮ ಎರಡನೇ ಪ್ರಯತ್ನಕ್ಕೆ ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಒಂದ್ಕಡೆ ಸೇರಿಸಿದ್ದಾರೆ. ಈ ಮೂಲಕ ಕುತೂಹಲವನ್ನೂ ಕೆರಳಿಸಿದ್ದಾರೆ.

ಜಿಯೋ ಸ್ಟುಡಿಯೋಸ್‌ನಿಂದ ಜ್ಯೋತಿ ದೇಶಪಾಂಡೆ, ಲೋಕೇಶ್ ಧಾರ್ ಮತ್ತು ಆದಿತ್ಯ ಧಾರ್ ಅವರ ಬ್ಯಾನರ್ B62 ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.

ranveer-singh-announces-exciting-new-project-with-aditya-dhar-cast-details-unveiled

ಉಳಿದಂತೆ ರಣ್ವೀರ್ ಸಿಂಗ್ ಈ ಚಿತ್ರವನ್ನು ಘೋಷಿಸಿದ ಬೆನ್ನಲ್ಲಿಯೇ, ಕನ್ನಡದಲ್ಲಿ ಈ ತರಹದ ಪ್ರಯತ್ನಗಳು ನಡೆಯುವುದು ಯಾವಾಗ ಎನ್ನುವ ಪ್ರಶ್ನೆ ಅನೇಕರನ್ನೂ ಕಾಡುತ್ತಿದೆ. ನಮ್ಮಲ್ಲಿಯೂ ಅವರ ಅವರ ಪ್ರತಿಷ್ಠೆ ಪಕ್ಕಕ್ಕೆ ಇಟ್ಟು ಹೀಗೆ ಜೊತೆ ಜೊತೆಯಾಗಿ ಸಿನಿಮಾ ಮಾಡಿದರೆ ಚೆನ್ನಾಗಿರುತ್ತೆ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಮಲ್ಟಿ ಸ್ಟಾರ್‌ ಸಿನಿಮಾವನ್ನು ಯಾವ ಕಾಲದಲ್ಲಿ ನೋಡಿದ್ದು ಎನ್ನುವ ಚರ್ಚೆಯನ್ನೂ ಅನೇಕರು ಮಾಡುತ್ತಿದ್ದಾರೆ. ಕನ್ನಡದಲ್ಲಿ ಈ ತರಹದ ಸಿನಿಮಾಗಳೆಲ್ಲ ಅಸಾಧ್ಯ ಅನ್ನುವ ಮಾತು ಕೂಡ ಕೇಳಿ ಬರುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X