ರಣ್ವೀರ್ ಸಿಂಗ್ ದೊಡ್ಡ ಸ್ಟಾರ್ ಆಗಲು ಸುಶಾಂತ್ ಸಿಂಗ್ ಕಾರಣ!?

ನಟ ರಣ್ವೀರ್ ಸಿಂಗ್ ಬಾಲಿವುಡ್‌ನ ಸ್ಟಾರ್ ನಟ. ರಣ್ವೀರ್ ನಟನೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಆದರೆ ರಣ್ವೀರ್ ಸಿಂಗ್ ಇಂದು ಇಷ್ಟು ದೊಡ್ಡ ಸ್ಟಾರ್ ಆಗಿ ಬೆಳೆಯಲು ಸುಶಾಂತ್ ಸಿಂಗ್ ಪರೋಕ್ಷ ಕಾರಣ ಎಂದರೆ ನಂಬಲೇಬೇಕು.

Recommended Video

Sushanth is one of the main reasons for Ranveer's Success | Filmibeat Kannada

ರಣ್ವೀರ್ ಸಿಂಗ್ ಗಿಂತಲೂ ಮೂರು ವರ್ಷ ತಡವಾಗಿ ಸಿನಿಮಾರಂಗಕ್ಕೆ ಬಂದವರು ಸುಶಾಂತ್ ಸಿಂಗ್. ರಣ್ವೀರ್‌ ನಷ್ಟು ವೇಗವಾಗಿ ಖ್ಯಾತಿಗಳಿಸಲು ಸುಶಾಂತ್‌ ಗೆ ಕಾರಣವಾಗಲಿಲ್ಲ. ಆದರೆ ರಣ್ವೀರ್ ಸಿಂಗ್ ಗಳಿಸಿದ ಯಶಸ್ಸಿನಲ್ಲಿ ಸುಶಾಂತ್ ಸಿಂಗ್ ಪಾತ್ರ ಇದೆ ಎನ್ನುತ್ತಿದೆ ಬಾಲಿವುಡ್‌.

ಸುಶಾಂತ್ ಹಾಗೂ ರಣ್ವೀರ್ ಸಿಂಗ್ ಇಬ್ಬರೂ ಸಮಾನ ಪ್ರತಿಭಾವಂತರು, ಇಬ್ಬರೂ ಗಾಡ್ ಫಾದರ್ ಇಲ್ಲದೆ ಬಾಲಿವುಡ್‌ ಗೆ ಬಂದವರು. ಆದರೆ ರಣ್ವೀರ್ ಸಿಂಗ್‌ ಗೆ ಅದೃಷ್ಟ ಕೈಹಿಡಿಯಿತು, ಆದರೆ ಸುಶಾಂತ್‌ ಗೆ ಇಲ್ಲ. ರಣ್ವೀರ್‌ಗೆ ಅದೃಷ್ಟ ಕೈಹಿಡಿಯುವ ಹಿಂದೆ ಸುಶಾಂತ್ ಪಾತ್ರವೂ ಇದೆ!

ರಣ್ವೀರ್ ಹೆಸರು ಮಾಡಿದ್ದ ಬನ್ಸಾಲಿ ಸಿನಿಮಾ ಮೂಲಕ

ರಣ್ವೀರ್ ಹೆಸರು ಮಾಡಿದ್ದ ಬನ್ಸಾಲಿ ಸಿನಿಮಾ ಮೂಲಕ

ರಣ್ವೀರ್ ಸಿಂಗ್ ಹೆಸರು ಮಾಡಿದ್ದು ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳ ಮೂಲಕ. ರಾಮ್‌ಲೀಲಾ, ಪದ್ಮಾವತ್, ಬಾಜಿರಾವ್ ಮಸ್ತಾನಿ ಸಿನಿಮಾಗಳು ರಣ್ವೀರ್‌ ಗೆ ಭಾರಿ ಹೆಸರು, ಪ್ರಶಸ್ತಿ ಹೆಚ್ಚಿನ ಅವಕಾಶಗಳನ್ನು ಗಳಿಸಿಕೊಟ್ಟವು. ಇಲ್ಲೇ ಸುಶಾಂತ್‌ ಗೆ ಅದೃಷ್ಟ ಕೈಕೊಟ್ಟಿದ್ದಿದ್ದು.

ಬನ್ಸಾಲಿ ನೆಚ್ಚಿನ ನಟ ಸುಶಾಂತ್ ಸಿಂಗ್

ಬನ್ಸಾಲಿ ನೆಚ್ಚಿನ ನಟ ಸುಶಾಂತ್ ಸಿಂಗ್

ಬಾಲಿವುಡ್‌ ಮೂಲಗಳ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ಅವರ ಮೆಚ್ಚಿನ ನಟರಂತೆ ಸುಶಾಂತ್ ಸಿಂಗ್ ರಜಪೂತ್. ರಣ್ವೀರ್ ನಟಿಸಿದ ಸಂಜಯ್ ಲೀಲಾ ಬನ್ಸಾಲಿ ಅವರ ಮೂರೂ ಸಿನಿಮಾಗಳಿಗೆ ನಾಯಕನಾಗಬೇಕಾಗಿದ್ದುದು ಸುಶಾಂತ್. ಮೊದಲ ಆಫರ್ ಸುಶಾಂತ್‌ಗೆ ಹೋಗಿತ್ತು ಆದರೆ ಕಾರಣಾಂತರಗಳಿಂದ ಸುಶಾಂತ್‌ಗೆ ಆ ಸಿನಿಮಾಗಳಲ್ಲಿ ನಟಿಸಲಾಗಿರಲಿಲ್ಲ.

ನಾಲ್ಕು ಸಿನಿಮಾಗಳಲ್ಲಿ ನಟಿಸಬೇಕಿತ್ತು ಸುಶಾಂತ್

ನಾಲ್ಕು ಸಿನಿಮಾಗಳಲ್ಲಿ ನಟಿಸಬೇಕಿತ್ತು ಸುಶಾಂತ್

ಬನ್ಸಾಲಿ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಸುಶಾಂತ್ ಅವರಿಗಾಗಿ ಹೇಳಿದ್ದರಂತೆ ಆದರೆ ಡೇಟ್ಸ್ ಮತ್ತು ಇತರೆ ಕಾರಣಗಳಿಂದಾಗಿ ಸುಶಾಂತ್ ಆ ಸಿನಿಮಾಗಳಲ್ಲಿ ನಟಿಸಲಾಗಿರಲಿಲ್ಲ. ಆ ಅವಕಾಶ ಬೇರೆಯವರಿಗೆ ಹೋಗಿ ಅವರು ಸೂಪರ್‌ ಸ್ಟಾರ್‌ಗಳಾದರು.

ಬನ್ಸಾಲಿಗಾಗಿ ಹೆಸರೇ ಕಿತ್ತು ಹಾಕಿದ್ದ ಸುಶಾಂತ್

ಬನ್ಸಾಲಿಗಾಗಿ ಹೆಸರೇ ಕಿತ್ತು ಹಾಕಿದ್ದ ಸುಶಾಂತ್

ಸುಶಾಂತ್‌ ಗೆ ಬನ್ಸಾಲಿ ಎಂದರೆ ವಿಶೇಷ ಪ್ರೀತಿ ಇತ್ತು. ಪದ್ಮಾವತ್ ಸಿನಿಮಾ ಸಂಬಂಧವಾಗಿ ಸಂಜಯ್ ರಜಪೂತ ಸಮುದಾಯದವರು ದಾಳಿ ಮಾಡಿದಾಗ. ಸುಶಾಂತ್ ಸಿಂಗ್ ರಜಪೂತ್ ಎಂದಿದ್ದ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ರಜಪೂತ್ ಅನ್ನು ತೆಗೆದುಹಾಕಿ ಪ್ರತಿಭಟಿಸಿದ್ದರು ಸುಶಾಂತ್.

ಸುಶಾಂತ್‌ ಸಾವಿಗೆ ಬನ್ಸಾಲಿ ಮೇಲೆ ಪ್ರಕರಣ ದಾಖಲಾಗಿದೆ

ಸುಶಾಂತ್‌ ಸಾವಿಗೆ ಬನ್ಸಾಲಿ ಮೇಲೆ ಪ್ರಕರಣ ದಾಖಲಾಗಿದೆ

ವಿಚಿತ್ರವೆಂದರೆ ಸುಶಾಂತ್ ಸಾವಿಗೆ ಈಗ ಬನ್ಸಾಲಿ ಅವರನ್ನೂ ಸಹ ಹೊಣೆ ಮಾಡಲಾಗಿದೆ. ವಕೀಲರೊಬ್ಬರು ಹೂಡಿರುವ ದಾವೆಯಲ್ಲಿ ಸುಶಾಂತ್ ಸಾವಿಗೆ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಅವರನ್ನು ದೋಷಿಗಳಾಗಿ ಪರಿಗಣಿಸುವಂತೆ ಕೋರಲಾಗಿದೆ.

More from Filmibeat

English summary
Actor Ranveer Singh become star because of Sushant Singh. He could not act in three Sanjay Leela Bansali's movies in which later Ranveer acted and movies become hit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X