For Quick Alerts
  ALLOW NOTIFICATIONS  
  For Daily Alerts

  ಕರಾವಳಿ ಸುಂದರಿ ದೀಪಿಕಾ ಜೊತೆ ರಣ್ವೀರ್ ಲವ್ ಸ್ಟೋರಿ ಪ್ರಾರಂಭವಾಗಿದ್ದು ಹೇಗೆ? ಇಂಟ್ರೆಸ್ಟಿಂಗ್ ಮಾಹಿತಿ

  |

  ಬಾಲಿವುಡ್‌ನ ಸ್ಟಾರ್ ನಟ ರಣ್ವೀರ್ ಸಿಂಗ್‌ಗೆ ಇಂದು (ಜುಲೈ 6) ಹುಟ್ಟುಹಬ್ಬದ ಸಂಭ್ರಮ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ನಟ ರಣ್ವೀರ್ ಸಿಂಗ್‌ಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

  ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್ ಕಪಲ್. ತೆರೆ ಮೇಲೆ ಮತ್ತು ತೆರೆಹಿಂದೆಯೂ ಸಕ್ಸಸ್ ಫುಲ್ ಜೋಡಿ. ಬೆಳ್ಳಿ ಪರದೆ ಮೇಲೆ ಇಬ್ಬರ ಕೆಮಿಸ್ಟ್ರಿ ನೋಡಿ ಇಷ್ಟ ಪಟ್ಟ ಅಭಿಮಾನಿಗಳಿಗೆ ನಿಜಜೀವನದಲ್ಲೂ ಈ ಜೋಡಿ ಹಾಟ್ ಫೇವರಿಟ್. ರಣ್ವೀರ್ ಮತ್ತು ದೀಪಿಕಾ ಅವರ ಪ್ರೀತಿ, ಮದುವೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ರಣ್ವೀರ್ ಹುಟ್ಟುಹಬ್ಬದ ಸಂಭ್ರಮದ ದಿನ ದೀಪಿಕಾ ಜೊತೆಗಿನ ಪ್ರೇಮಕಥೆಯ ಸಂಪೂರ್ಣ ಮಾಹಿತಿ ನಾವು ನಿಮಗೆ ನೀಡುತ್ತಿದ್ದೇವೆ. ಮುಂದೆ ಓದಿ..

  ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಯಾವಾಗ?

  ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಯಾವಾಗ?

  ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ ಸಿನಿಮಾ 'ಗೋಲಿಯೋನ್ ಕಿ ರಾಸ್ಲೀಲ ರಾಮ್ ಲೀಲಾ.' ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಮೊದಲ ನೋಟದಲ್ಲೇ ದೀಪಿಕಾಗೆ ರಣ್ವೀರ್ ಸಿಂಗ್ ಮೇಲೆ ಲವ್ ಆಗಿತ್ತು ಎಂದು ದೀಪಿಕಾ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದರು.

  ಮೊದಲ ನೋಟದಲ್ಲೇ ದೀಪಿಕಾಗೆ ಫ್ಲಾಟ್ ಆಗಿದ್ದ ರಣ್ವೀರ್

  ಮೊದಲ ನೋಟದಲ್ಲೇ ದೀಪಿಕಾಗೆ ಫ್ಲಾಟ್ ಆಗಿದ್ದ ರಣ್ವೀರ್

  ರಾಮ್-ಲೀಲಾ ಸಿನಿಮಾಗೂ ಮೊದಲೇ ಝಿ ಸಿನಿ ಅವಾರ್ಡ್ ಕಾರ್ಯಕ್ರಮದಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಭೇಟಿಯಾಗಿದ್ದರು. ಮೊದಲ ನೋಟದಲ್ಲಿ ರಣ್ವೀರ್ ಸಿಂಗ್ ದೀಪಿಕಾ ನೋಡಿ ಫ್ಲಾಟ್ ಆಗಿದ್ದರಂತೆ. ಮೊದಲ ಭೇಟಿ ಬಗ್ಗೆ ರಣ್ವೀರ್ ಸಿಂಗ್ ಈ ಹಿಂದೆ ಬಹಿರಂಗಪಡಿಸಿದ್ದರು. "ನಾನು ಅವಳನ್ನು ಮೊದಲ ಬಾರಿಗೆ ನೋಡಿದಾಗ ಫ್ಲಾಟ್ ಆಗಿದ್ದೆ" ಎಂದಿದ್ದರು. ಜೊತೆಗೆ ದೀಪಿಕಾ ಸಿಲ್ವರ್ ಬಣ್ಣದ ಗೌನ್ ಧರಿಸಿದ್ದ ಬಗ್ಗೆಯೂ ವಿವರಿಸಿದ್ದರು.

  ಫ್ಲರ್ಟ್ ಮಾಡುತ್ತಿದ್ದೀರಾ ಎಂದು ಕೇಳಿದ್ದ ದೀಪಿಕಾ

  ಫ್ಲರ್ಟ್ ಮಾಡುತ್ತಿದ್ದೀರಾ ಎಂದು ಕೇಳಿದ್ದ ದೀಪಿಕಾ

  ಮೊದಲು ಯಶ್ ರಾಜ್ ಸ್ಟುಡಿಯೋದಲ್ಲಿ ಭೇಟಿಯಾದಾಗ ರಣ್ವೀರ್, ದೀಪಿಕಾ ಜೊತೆ ಫ್ಲರ್ಟ್ ಮಾಡಿದ್ದರಂತೆ. ತಮ್ಮೊಂದಿಗೆ ಫ್ಲರ್ಟ್ ಮಾಡಿದ ಬಗ್ಗೆ ದೀಪಿಕಾ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು. "ನಾನು ಯಶ್ ರಾಜ್ ಸ್ಟುಡಿಯೋದಲ್ಲಿದ್ದೆ. ರಣ್ವೀರ್ ಕೂಡ ಅಲ್ಲೇ ಇದ್ದರು. ಫ್ಲರ್ಟ್ ಮಾಡುತ್ತಿದ್ದರು. ಆ ಸಮಯದಲ್ಲಿ ಮತ್ತೊಬ್ಬರ ಜೊತೆ ಡೇಟಿಂಗ್‌ನಲ್ಲಿದ್ದರು. ಆಗ ನಾನು ನಗುತ್ತಾ ನನ್ನ ಜೊತೆ ಫ್ಲರ್ಟ್ ಮಾಡುತ್ತಿದ್ದೀರಾ? ಎಂದು ಕೇಳಿದೆ" ಎಂದು ಹೇಳಿದ್ದರು.

  ರಾಮ್ -ಲೀಲಾ ಬಳಿಕ ಇಬ್ಬರ ಪ್ರೀತಿ ಬಹಿರಂಗ

  ರಾಮ್ -ಲೀಲಾ ಬಳಿಕ ಇಬ್ಬರ ಪ್ರೀತಿ ಬಹಿರಂಗ

  ರಾಮ್-ಲೀಲಾ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ ಸಿನಿಮಾ. ತೆರೆಮೇಲಿನ ಕೆಮಿಸ್ಟ್ರಿ ನೋಡಿದವರು ಇಬ್ಬರೂ ರಿಯಲ್ ಲೈಫ್‌ನಲ್ಲೂ ಪ್ರೇಮಿಗಳು ಎಂದು ನಂಬುವ ಹಾಗೆ ಮಾಡಿತ್ತು ಈ ಸಿನಿಮಾ. 2013ರಲ್ಲಿ ರಾಮ್-ಲೀಲಾ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಿಡುಗಡೆ ಬಳಿಕ ಇಬ್ಬರ ಪ್ರೀತಿ-ಪ್ರೇಮದ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಲು ಪ್ರಾರಂಭವಾಯಿತು.

  ಮದುವೆಗೂ 4 ವರ್ಷಗಳ ಮುಂಚೆ ನಿಶ್ಚಿತಾರ್ಥ

  ಮದುವೆಗೂ 4 ವರ್ಷಗಳ ಮುಂಚೆ ನಿಶ್ಚಿತಾರ್ಥ

  ಮದುವೆಗೂ ನಾಲ್ಕು ವರ್ಷಗಳ ಮುಂಚೆಯೇ ದೀಪಿಕಾ ಮತ್ತು ರಣ್ವೀರ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. "ನಾವು ನಾಲ್ಕು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಡಿದ್ದೆವು. ಇದು ಯಾರಿಗೂ ತಿಳಿದಿರಲಿಲ್ಲ. ನಮ್ಮ ಪೋಷಕರು ಮತ್ತು ರಣ್ವೀರ್ ಸಿಂಗ್ ಪೋಷಕರು ಹಾಗೂ ಸಹೋದರಿಯರಿಗೆ ಮಾತ್ರ ತಿಳಿದಿದ್ದು" ಎಂದು ದೀಪಿಕಾ ಈ ಹಿಂದೆ ಹೇಳಿಕೊಂಡಿದ್ದರು.

  Dr Shiva Rajkumar Biography | ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada
  2018ರಲ್ಲಿ ಮದುವೆ

  2018ರಲ್ಲಿ ಮದುವೆ

  ಇಬ್ಬರು ಸುಮಾರು 5 ವರ್ಷಗಳ ಡೇಟಿಂಗ್ ಬಳಿಕ ರಣ್ವೀರ್ ಮತ್ತು ದೀಪಿಕಾ 2018ರಲ್ಲಿ ಹಸೆಮಣೆ ಏರಿದರು. ಇಟಲಿಯಲ್ಲಿ ಇಬ್ಬರು ಮದುವೆಯಾದರು. ಅದ್ದೂರಿ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಬಳಿಕ ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ ಏರ್ಪಡಿಸಿದ್ದರು. ಚಿತ್ರರಂಗದ ಗಣ್ಯರು ಸೇರಿದಂತೆ ಬಹುತೇಕ ಎಲ್ಲಾ ರಂಗದ ಗಣ್ಯರು ಭಾಗಿಯಾಗಿ ದೀಪಿಕಾ ರಣ್ವೀರ್ ಜೋಡಿಗೆ ಶುಭಹಾರೈಸಿದ್ದರು.

  English summary
  Ranveer Singh birthday: Here's a recap of his love story with Deepika Padukone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X