»   » ಲಂಡನ್‌ ನಲ್ಲಿ ದೀಪಿಕಾ ಜೊತೆ ಬರ್ತ್‌ಡೇ ಬಾಯ್

ಲಂಡನ್‌ ನಲ್ಲಿ ದೀಪಿಕಾ ಜೊತೆ ಬರ್ತ್‌ಡೇ ಬಾಯ್

Posted By:
Subscribe to Filmibeat Kannada

ಬಾಲಿವುಡ್ ಸ್ಟಾರ್ ನಮ್ಮ 'ರಾಮ್ ಲೀಲಾ' ಚಿತ್ರದ ರಾಸಲೀಲಾ ಹುಡುಗ ರಣವೀರ್ ಸಿಂಗ್ ಗೆ ಇಂದು (ಜುಲೈ-6) ಹುಟ್ಟುಹಬ್ಬದ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು ಪ್ರೀತಿಯ ಹುಡುಗಿ ದೀಪಿಕಾ ಪಡುಕೋಣೆ ಜೊತೆ ಆಚರಿಸಲು ಪ್ಲಾನ್ ಮಾಡಿದ್ದ ರಣವೀರ್ ಗೆ ಕೊನೆ ಕ್ಷಣದಲ್ಲಿ ದೀಪಿಕಾ ಕೈ ಕೊಟ್ಟಿದ್ದರಿಂದ ತುಂಬಾ ಬೇಜಾರಾಗಿದೆಯಂತೆ.

ಆದ್ರೆ ಹೊಸ ಸಿಹಿ ಸುದ್ದಿ ಏನಪ್ಪಾ ಅಂದ್ರೆ ಮನಸ್ಸು ಬದಲಾಯಿಸಿದ ದೀಪಿಕಾ, ತನ್ನ ಪ್ರಿಯಕರನ 30ನೇ ವರ್ಷದ ಹುಟ್ಟುಹಬ್ದದ ಆಚರಣೆಯಲ್ಲಿ ಲಂಡನ್ ನಲ್ಲಿ ಪಾಲ್ಗೊಳ್ಳುತ್ತಾರಂತೆ. ಈಗಾಗಲೇ ಲಂಡನ್ ಗೆ ಹಾರಿರುವ ಈ ಜೋಡಿ ಟರ್ಮಿನಲ್ 5 ಹಿತ್ರೂ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಕಾಣಿಸಿಕೊಂಡಿದ್ದರು.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮುಂದಿನ ಚಿತ್ರ 'ಬಾಜಿರಾವ್ ಮಸ್ತಾನಿ' ಯಲ್ಲಿ ರಣವೀರ್ ಸಿಂಗ್, ದೀಪಿಕಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಣವೀರ್ ಬರ್ತ್‌ಡೇ ಗಿಫ್ಟ್ ಅಂತ ನಿರ್ದೇಶಕ ಬನ್ಸಾಲಿ 'ಬಾಜಿರಾವ್ ಮಸ್ತಾನಿ' ಚಿತ್ರದ ಶೂಟಿಂಗ್ ನಿಂದ ರಣವೀರ್ ನನ್ನು ಬಿಡುಗಡೆ ಮಾಡಿದ್ದಾರಂತೆ.

ಇದೇ ಸಮಯವನ್ನು ಪೂರ್ತಿ ಉಪಯೋಗಿಸಿಕೊಂಡ ರಣವೀರ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಹುಟ್ಟು ಹಬ್ಬದ ಸೆಲೆಬ್ರೇಷನ್ ಗಾಗಿ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ.

'ಹುಟ್ಟು ಹಬ್ಬದ ಶುಭಾಶಯಗಳು ರಣವೀರ್ ಸಿಂಗ್' ನೀವು ಹೀಗೆ ಯಾವಾಗಲೂ ಪ್ರೇಕ್ಷಕರನ್ನು ರಂಜಿಸುತ್ತಲೇ ಇರಿ ಅನ್ನೋದೇ ನಮ್ಮ ಆಶಯ.

ದೀಪಿಕಾ ರಣವೀರ್ ಜೊತೆಯಾಗಿ ಇರುವ ಸ್ಟಿಲ್ ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ...

ರಣವೀರ್ ಸಿಂಗ್- ದೀಪಿಕಾ ಪಡುಕೋಣೆ

ದೀಪಿಕಾ ಜೊತೆ ರಣವೀರ್ ಸಿಂಗ್ ಜಾಲಿ ಡೇ ಔಟ್

ರಣವೀರ್ ಸಿಂಗ್- ದೀಪಿಕಾ ಪಡುಕೋಣೆ

ರಣವೀರ್, ದೀಪಿಕಾ ಸಂತಸದ ಕ್ಷಣಗಳಲ್ಲಿ

ರಣವೀರ್ ಸಿಂಗ್- ದೀಪಿಕಾ ಪಡುಕೋಣೆ

ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ರಣವೀರ್ ಸಿಂಗ್- ದೀಪಿಕಾ ಪಡುಕೋಣೆ

ಡಿಪ್ಪಿ, ರಣವೀರ್ ಒಬ್ಬರಿಗೊಬ್ಬರು ಬಿಗಿ ಅಪ್ಪುಗೆಯಲ್ಲಿ

ರಣವೀರ್ ಸಿಂಗ್- ದೀಪಿಕಾ ಪಡುಕೋಣೆ

ರಣವೀರ್ ಸಿಂಗ್ ಡಿಪ್ಪಿ ಗೆ ಕಿಸ್ ಮಾಡುತ್ತಿರುವುದು.

ರಣವೀರ್ ಸಿಂಗ್- ದೀಪಿಕಾ ಪಡುಕೋಣೆ

ಮುಂಬೈಯಲ್ಲಿ ರಾಮ್ ಲೀಲಾ ಚಿತ್ರದ ಪ್ರೊಮೋಷನ್ ಕಾರ್ಯಕ್ರಮದಲ್ಲಿ ಡಿಪ್ಪಿ ರಣವೀರ್ ಫೋಸ್

English summary
Today Ranveer Singh celebrate his Birthday with his loved once. in the place of London.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada