For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?

  |

  ದಕ್ಷಿಣ ಭಾರತದ ಯಶಸ್ವಿ ನಿರ್ದೇಶಕ ಶಂಕರ್ ಹಾಗೂ ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಶಂಕರ್ ಮತ್ತು ರಣ್ವೀರ್ ಹೊಸ ಪ್ರಾಜೆಕ್ಟ್ ಕೈಗೆತ್ತಿಗೊಂಡಿರುವ ಸುದ್ದಿ ಇಂದು ಅಧಿಕೃತವಾಗಿ ಪ್ರಕಟವಾಗಿದೆ.

  ಇದಕ್ಕೂ ಮುಂಚೆ ಕೆಲವು ದಿನಗಳ ಹಿಂದೆಯಷ್ಟೇ ತೆಲುಗು ನಟ ರಾಮ್ ಚರಣ್ ತೇಜ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು ಶಂಕರ್. ಅಷ್ಟರಲ್ಲೇ ಇನ್ನೊಂದು ಹಿಂದಿ ಸಿನಿಮಾ ಶುರು ಮಾಡಿದ್ದಾರೆ. ಈ ಎರಡು ಪ್ರಾಜೆಕ್ಟ್‌ಗಳ ಮುಂಚೆ ಕಮಲ್ ಹಾಸನ್ ಜೊತೆ ಇಂಡಿಯನ್ 2 ಮಾಡುತ್ತಿದ್ದಾರೆ. ಅದು ಆರ್ಥಿಕ ಕಾರಣಗಳಿಂದ ನಿಂತಿದೆ. ಹಾಗಾಗಿ, ಹಿಂದಿ ಚಿತ್ರದ ಆರಂಭದ ನಡುವೆ ರಾಮ್ ಚರಣ್ ಚಿತ್ರ ಏನಾಯ್ತು ಎಂಬ ಆತಂಕ ಅಭಿಮಾನಿಗಳನ್ನು ಕಾಡ್ತಿದೆ.

  ಪತಿ ರಣ್ವೀರ್ ಸಿಂಗ್ 'ಸರ್ಕಸ್' ಸೇರಿದ ನಟಿ ದೀಪಿಕಾ ಪಡುಕೋಣೆಪತಿ ರಣ್ವೀರ್ ಸಿಂಗ್ 'ಸರ್ಕಸ್' ಸೇರಿದ ನಟಿ ದೀಪಿಕಾ ಪಡುಕೋಣೆ

  ಅದರ ಜೊತೆಗೆ ರಣ್ವೀರ್ ಸಿಂಗ್ ಜೊತೆ ಮಾಡುತ್ತಿರುವ ಸಿನಿಮಾ ತಮಿಳು ಹಿಟ್ ಚಿತ್ರದ ರಿಮೇಕ್ ಎಂದು ಬಹಿರಂಗವಾಗಿದೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಮುಂದೆ ಓದಿ...

  ರಣ್ವೀರ್ ಸಿಂಗ್ ಜೊತೆ ಶಂಕರ್ ಸಿನಿಮಾ

  ರಣ್ವೀರ್ ಸಿಂಗ್ ಜೊತೆ ಶಂಕರ್ ಸಿನಿಮಾ

  ರಣ್ವೀರ್ ಸಿಂಗ್ ಜೊತೆ ಶಂಕರ್ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಹಲವು ದಿನಗಳಲ್ಲಿ ಚರ್ಚೆಯಲ್ಲಿತ್ತು. ಆದ್ರೆ, ಈ ಪ್ರಾಜೆಕ್ಟ್ ಟೇಕ್ ಆನ್ ಆಗುವುದು ಅನುಮಾನ ಎಂಬ ಮಾತುಗಳು ಇದ್ದವು. ಇದೀಗ, ಸರ್ಪ್ರೈಸ್ ಎನ್ನುವಂತೆ ರಣ್ವೀರ್ ಸಿಂಗ್ ಜೊತೆಗಿನ ಪ್ರಾಜೆಕ್ಟ್ ಪ್ರಕಟಣೆಯಾಗಿದೆ. ಪೆನ್ ಸ್ಟುಡಿಯೋದ ಜಯಂತಿ ಲಾಲ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

  'ಇಂಡಿಯನ್' ನಿರ್ದೇಶಕರ ಜೊತೆ ರಾಮ್ ಚರಣ್ ಸಿನಿಮಾ ಕನ್ಫರ್ಮ್; ಚಿತ್ರದಲ್ಲಿ ಇರ್ತಾರಾ ಯಶ್?'ಇಂಡಿಯನ್' ನಿರ್ದೇಶಕರ ಜೊತೆ ರಾಮ್ ಚರಣ್ ಸಿನಿಮಾ ಕನ್ಫರ್ಮ್; ಚಿತ್ರದಲ್ಲಿ ಇರ್ತಾರಾ ಯಶ್?

  ಅನ್ನಿಯನ್ ರಿಮೇಕ್

  ಅನ್ನಿಯನ್ ರಿಮೇಕ್

  2005ರಲ್ಲಿ ತೆರೆಕಂಡ ತಮಿಳು ಸೂಪರ್ ಹಿಟ್ ಚಿತ್ರ ಅನ್ನಿಯನ್ ರಿಮೇಕ್‌ನಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ. ಅನ್ನಿಯನ್ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದರು. ಈಗ ಅದೇ ಚಿತ್ರವನ್ನು ಹಿಂದಿಯಲ್ಲಿ ತೆರೆಗೆ ತರುವ ನಿರ್ಧಾರ ಮಾಡಿದ್ದು, 16 ವರ್ಷದ ನಂತರ ಆ ಚಿತ್ರವನ್ನು ಬಾಲಿವುಡ್‌ಗೆ ತೆಗೆದುಕೊಂಡು ಬಂದಿದ್ದಾರೆ.

  2022ಕ್ಕೆ ಶೂಟಿಂಗ್ ಆರಂಭ

  2022ಕ್ಕೆ ಶೂಟಿಂಗ್ ಆರಂಭ

  ಶಂಕರ್-ರಣ್ವೀರ್ ಸಿಂಗ್ ಜೋಡಿ ಕೈಗೆತ್ತಿಕೊಂಡಿರುವುದು ಅನ್ನಿಯನ್ ರಿಮೇಕ್ ಎನ್ನುವುದು ಖಾತ್ರಿಯಾಗಿದೆ. ಮೂಲ ಚಿತ್ರದಲ್ಲಿ ವಿಕ್ರಂ ನಟಿಸಿದ್ದರು. ಸೈಕೋಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥೆಯಲ್ಲಿ ಅಂಬಿ, ರೆಮೋ, ಅನ್ನಿಯನ್ ಎಂಬ ಮೂರು ವಿಭಿನ್ನ ಪಾತ್ರಗಳನ್ನು ವಿಕ್ರಂ ನಿರ್ವಹಿಸಿದ್ದರು. ಸದ್ಯದ ಮಾಹಿತಿ ಪ್ರಕಾರ, ಹಿಂದಿಯಲ್ಲಿ ಈ ಸಿನಿಮಾ 2022ಕ್ಕೆ ಶುರುವಾಗಲಿದೆ.

  ಅಮಿತಾಬ್ ಜೊತೆ ನಟಿಸುವ ಆಫರ್ ಬಂದಾಗ ರಶ್ಮಿಕಾ ಪೋಷಕರು ಏನ್ ಹೇಳಿದ್ರು ಗೊತ್ತಾ | Filmibeat Kannada
  ರಾಮ್ ಚರಣ್ ಜೊತೆ ಪ್ರಾಜೆಕ್ಟ್?

  ರಾಮ್ ಚರಣ್ ಜೊತೆ ಪ್ರಾಜೆಕ್ಟ್?

  ಫೆಬ್ರವರಿ ತಿಂಗಳಲ್ಲಿ ರಾಮ್ ಚರಣ್ ಜೊತೆ ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಇನ್ನು ಆರಂಭವಾಗಿಲ್ಲ. ಆರ್‌ಆರ್‌ಆರ್‌ ಸಿನಿಮಾ ಮುಗಿಸಿ ಈ ಪ್ರಾಜೆಕ್ಟ್ ಶುರು ಮಾಡಬೇಕಿದೆ. ಈ ನಡುವೆ ಹಿಂದಿ ಚಿತ್ರ ಘೋಷಿಸಿದ ಶಂಕರ್ ತೀರ್ಮಾನ ಕುತೂಹಲ ಮೂಡಿಸಿದೆ. ರಾಮ್ ಚರಣ್ ಚಿತ್ರ ಮೊದಲಾ ಅಥವಾ ಹಿಂದಿ ಸಿನಿಮಾ ಮೊದಲಾ ಎಂಬ ಚರ್ಚೆ ಹುಟ್ಟಿಕೊಂಡಿದೆ. ಅನ್ನಿಯನ್ ರಿಮೇಕ್ 2022ಕ್ಕೆ ಎಂದು ಹೇಳಿರುವುದನ್ನು ನೋಡಿದ್ರೆ ರಾಮ್ ಚರಣ್ ಸಿನಿಮಾ ಮೊದಲು ಆರಂಭವಾಗಲಿದೆ.

  English summary
  Ranveer Singh collaborates with South director Shankar for the Hindi adaptation of the 2005 Tamil cult blockbuster Anniyan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X