For Quick Alerts
  ALLOW NOTIFICATIONS  
  For Daily Alerts

  ಹೊಸ ಮನೆ ಪೂಜೆ ಮುಗಿಸಿದ ರಣ್ವೀರ್-ದೀಪಿಕಾ: ಬೆಲೆ ಎಷ್ಟು ಗೊತ್ತೆ?

  |

  ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‌ನ ಜನಪ್ರಿಯ ಜೋಡಿ. ಸ್ಟಾರ್ ಜೋಡಿಯಾಗಿರುವ ದೀಪಿಕಾ-ರಣ್ವೀರ್ ಸಂಭಾವನೆ ವಿಷಯದಲ್ಲೂ ಟಾಪ್ ಆಗಿದ್ದಾರೆ.

  ಇಬ್ಬರ ಸಂಭಾವನೆಯೂ ಕೋಟಿಗಟ್ಟಲೆ ಇದ್ದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಮೊದಲಿಗರು ದೀಪಿಕಾ-ರಣ್ವೀರ್.

  ಇತ್ತೀಚೆಗೆ ಬೆಂಗಳೂರು ಹಾಗೂ ಮುಂಬೈ ಎರಡರಲ್ಲೂ ಐಶಾರಾಮಿ ಮನೆಗಳನ್ನು ಈ ಜೋಡಿ ಖರೀದಿಸಿದ್ದಾರೆ. ಇದೀಗ ಮುಂಬೈನಲ್ಲಿ ಖರೀದಿಸಿದ್ದ ಮನೆಯ ಪೂಜೆ ನೆರವೇರಿಸಿ ಅಲ್ಲಿಗೆ ವಾಸ್ತವ್ಯ ಬದಲಾಯಿಸಿದೆ ಈ ಜೋಡಿ.

  ಮುಂಬೈನ ಆಲಿಬಾಗ್‌ನಲ್ಲಿ ಈ ಜೋಡಿ ಹೊಸ ಮನೆ ಖರೀದಿಸಿದ್ದು, ಇತ್ತೀಚೆಗಷ್ಟೆ ಗೃಹ ಪ್ರವೇಶ ಮುಗಿಸಿದ್ದಾರೆ. ಗೃಹ ಪ್ರವೇಶ ಪೂಜಾ ಕಾರ್ಯಕ್ರಮಕ್ಕೆ ಕೆಲವು ಅತ್ಯಾಪ್ತ ಕುಟುಂಬ ಸದಸ್ಯರನ್ನಷ್ಟೆ ಆಹ್ವಾನಿಸಲಾಗಿತ್ತು. ಪೂಜಾ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ರಣ್ವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಮನೆಯನ್ನು ಖರೀದಿಸಿದ ರಣ್ವೀರ್-ದೀಪಿಕಾ ಆ ಬಳಿಕ ತಮ್ಮ ಅಗತ್ಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಸಿ ಇದೀಗ ಗೃಹ ಪ್ರವೇಶ ಮಾಡಿದ್ದಾರೆ.

  ಆಲಿಬಾಗ್‌ನ ಈ ಮನೆಗೆ ಬರೋಬ್ಬರಿ 22 ಕೋಟಿ ರುಪಾಯಿಗಳನ್ನು ಈ ಜೋಡಿ ನೀಡಿದೆ. ಜೊತೆಗೆ ತಮಗೆ ತಕ್ಕಂತೆ ಮನೆಯ ಬದಲಾವಣೆಗೆ ಸುಮಾರು 10 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

  ಕಳೆದ ವರ್ಷವೇ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿಯೂ ದೊಡ್ಡ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗಂಗಾನಗರದ ಎಂಬಸಿ ಅಪಾರ್ಟ್‌ಮೆಂಟ್‌ನಲ್ಲಿ ದೀಪಿಕಾ ಪಡೊಕೋಣೆ ಫ್ಲ್ಯಾಟ್‌ ಒಂದನ್ನು ಖರೀದಿಸಿದ್ದಾರೆ. 26 ಅಂತಸ್ತಿನ ಐಶಾರಾಮಿ ಅಪಾರ್ಟ್‌ಮೆಂಟ್ ಇದಾಗಿದ್ದು 22ನೇ ಫ್ಲೋರ್‌ನಲ್ಲಿ ಮನೆ ಖರೀದಿಸಿದ್ದಾರೆ ದೀಪಿಕಾ.

  ದೀಪಿಕಾ, ಬೆಂಗಳೂರಿನ ಈ ಹೊಸ ಮನೆಗೆ ಏಳು ಕೋಟಿ ರು ಹಣ ನೀಡಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಈ ಮನೆ ತಾವು ಇರಲು ಖರೀದಿಸಿದ್ದಾರೆಯೇ ಅಥವಾ ಪೋಷಕರಿಗಾಗಿ ಖರೀದಿಸಿದ್ದಾರೆಯೇ ತಿಳಿದು ಬಂದಿಲ್ಲ. ಪ್ರಸ್ತುತ ದೀಪಿಕಾ ಪಡುಕೋಣೆ ಪೋಷಕರು ಮತ್ತು ಸಹೋದರಿ ಜೆಸಿ ನಗರದ ಮನೆಯಲ್ಲಿ ವಾಸವಿದ್ದಾರೆ. ಈ ಹಿಂದೆ ಅವರು ಕೋರಮಂಗಲದಲ್ಲಿ ವಾಸವಿದ್ದರು.

  ಮುಂಬೈನಲ್ಲಿ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಆಲಿಭಾಗ್‌ನ ಮನೆಗೆ ಶಿಫ್ಟ್ ಆಗುವ ಮುನ್ನ ಪ್ರಭಾದೇವಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಒಂದನ್ನು ವಾಸವಿದ್ದರು. ನಾಲ್ಕು ಕೋಣೆಗಳುಳ್ಳ ಈ ಫ್ಲ್ಯಾಟ್ ಹಲವು ಐಶಾರಾಮಿ ಸೌಕರ್ಯಗಳನ್ನು ಹೊಂದಿತ್ತು. 2018 ರಲ್ಲಿ ರಣ್ವೀರ್-ದೀಪಿಕಾ ವಿವಾಹವಾದಾಗ ಈ ಫ್ಲ್ಯಾಟ್ ಖರೀದಿ ಮಾಡಿದ್ದರು.

  Recommended Video

  ನಾವು ಯಾರಿಗೇನು ಕಮ್ಮಿ ಇಲ್ಲ ಎಂದ ಕ್ರಾಂತಿ ನಿರ್ಮಾಪಕಿ ಶೈಲಜಾ ನಾಗ್ | Filmibeat Kannada
  English summary
  Ranveer Singh and Deepika Padukone moved to new house in Mumbai's Alibhag. They purchased this new house last year for 22 crore rs.
  Saturday, August 20, 2022, 14:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X