ಬೆಂಗಳೂರಿನಲ್ಲಿ ಆರತಕ್ಷತೆ ಮುಗೀತು: ಮುಂಬೈಗೆ ಹೊರಟ ದೀಪಿಕಾ-ರಣ್ವೀರ್

Recommended Video

ಮುಂಬೈಗೆ ತೆರಳಿದ ದೀಪಿಕಾ, ರಣವೀರ್ | FILMIBEAT KANNADA

ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಮತ್ತು 15 ರಂದು ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ವೈವಾಹಿಕ ಬದುಕಿಗೆ ಕಾಲಿಟ್ಟರು. ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವ ನಡೆಯಿತು.

ಇತ್ತೀಚೆಗಷ್ಟೇ ಇಟಲಿಯಿಂದ ವಾಪಸ್ ಆದ ಈ ದಂಪತಿಯ ಅದ್ಧೂರಿ ಆರತಕ್ಷತೆ ನಿನ್ನೆ (ನವೆಂಬರ್ 21) ಸಂಜೆ ಬೆಂಗಳೂರಿನ ಪ್ರತಿಷ್ಟಿತ 'ದಿ ಲೀಲಾ ಪ್ಯಾಲೇಸ್'ನಲ್ಲಿ ನಡೆಯಿತು.

ಕ್ರಿಕೆಟರ್ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಸುಧಾ ಮೂರ್ತಿ, ಪಿವಿ ಸಿಂಧು, ನಂದನ್ ನೀಲೇಕಣಿ ಸೇರಿದಂತೆ ಹಲವು ಗಣ್ಯರು ಆಗಮಿಸಿ ದೀಪಿಕಾ-ರಣ್ವೀರ್ ದಂಪತಿಗೆ ಶುಭ ಹಾರೈಸಿದರು.

Ranveer Singh-Deepika Padukone spotted walking hand-in-hand at Bangalore Airport

ಇಂದು ಬೆಂಗಳೂರಿಗೆ ಬೈ ಬೈ ಹೇಳಿ ಮುಂಬೈಗೆ ಫ್ಲೈಟ್ ಹತ್ತಿದ್ದಾರೆ ದೀಪ್-ವೀರ್. ನವೆಂಬರ್ 28 ಮತ್ತು ಡಿಸೆಂಬರ್ 1 ರಂದು ಮುಂಬೈನಲ್ಲಿ ದೀಪಿಕಾ-ರಣ್ವೀರ್ ರಿಸೆಪ್ಷನ್ ನಡೆಯಲಿದೆ. ಇದರಲ್ಲಿ ಬಾಲಿವುಡ್ ನ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ.

ಮುಂಬೈನಲ್ಲಿ ನಡೆಯಲಿರುವ ರಿಸೆಪ್ಷನ್ ಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಇಂದೇ ದಂಪತಿ ಬೆಂಗಳೂರಿನಿಂದ ತೆರಳಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ದೀಪಿಕಾ-ರಣ್ವೀರ್ ಕೈಕೈ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮದುವೆ ಆದಾಗಿನಿಂದಲೂ ಕಲರ್ ಕೋ-ಆರ್ಡಿನೇಷನ್ ಮೇನ್ಟೇನ್ ಮಾಡುತ್ತಿರುವ ಈ ದಂಪತಿ ಇಂದು ಏರ್ ಪೋರ್ಟ್ ನಲ್ಲಿ ಪಿಂಕ್ ಬಣ್ಣದ ಉಡುಪು ತೊಟ್ಟಿದ್ದರು.

More from Filmibeat

English summary
Ranveer Singh-Deepika Padukone spotted walking hand-in-hand at Bangalore Airport. Take a look at the picture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X