ಕಾರ್ಟೂನ್‌ಗಳಾದ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ
ಕೊರೊನಾ ಲಾಕ್‌ಡೌನ್ ಅನ್ನು ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಂತಿದೆ.
ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಪ್ರತಿದಿನ ಒಂದಿಲ್ಲೊಂದು ಚಟುವಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ನಿತ್ಯದ ಚಟುವಟಿಕೆಗಳ ಬಗ್ಗೆ ಸೊಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದರ ಜೊತೆಗೆ ಕೊರೊನಾ ವೈರಸ್ ಕುರಿತಾಗಿ ಹಾಗೂ ಕೊರೊನಾ ದಿಂದ ಜಾಗೃತೆಯಾಗಿರುವಂತೆ ಎಚ್ಚರಿಕೆ ಸಂದೇಶಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈಗ ಹೊಸದಾಗಿ ಚಿತ್ರವೊಂದನ್ನು ರಣವೀರ್ ಸಿಂಗ್ ಹಂಚಿಕೊಂಡಿದ್ದು ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಕಾರ್ಟೂನ್‌ಗಳಾಗಿದ್ದಾರೆ.

ಅಡುಗೆ ಕಾರ್ಯದಲ್ಲಿ ನಿರತವಾಗಿರುವ ಜೋಡಿ
ಮನೆಯಲ್ಲೇ ಇರುವ ಈ ಜೋಡಿ ದಿನ ಕಳೆಯಲು ಒಬ್ಬರಿಗಾಗಿ ಇನ್ನೊಬ್ಬರು ಅಡುಗೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಪ್ರತಿದಿನವೂ ಒಬ್ಬೊಬ್ಬರು ಮತ್ತೊಬ್ಬರಿಗಾಗಿ ಬಾಣಸಿಗರಾಗುತ್ತಿದ್ದಾರಂತೆ.

ರಣವೀರ್‌ಗಾಗಿ ಅಡುಗೆ ಮಾಡಿದ್ದ ದೀಪಿಕಾ
ಕೆಲವು ದಿನಗಳ ಹಿಂದಷ್ಟೆ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಗಾಗಿ ವಿಶಿಷ್ಟ ಖಾದ್ಯ ಮಾಡಿ ಅದರ ಚಿತ್ರವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಾಕಿದ್ದರು.

ಕಾರ್ಟೂನ್‌ಗಳಾದ ದೀಪಿಕಾ-ರಣವೀರ್
ರಣವೀರ್ ಸಿಂಗ್ ಇಂದು ಹಾಕಿರುವ ಪೋಸ್ಟ್ ನಲ್ಲಿ ಇಬ್ಬರೂ ಕಾರ್ಟೂನ್ ಪಾತ್ರಗಳಂತಾಗಿದ್ದು, ಇಬ್ಬರೂ ಸೌಟು ಹಿಡಿದು ಶೆಫ್ ವೇಷದಲ್ಲಿದ್ದಾರೆ. ಇದಕ್ಕೆ 'ಹೃದಯ ದಾರಿ ಹೊಟ್ಟೆಯ ಮೂಲಕ ಹಾದು ಸಾಗುತ್ತದೆ' ಎಂದು ರಣವೀರ್ ಸಿಂಗ್ ಹೇಳಿದ್ದಾರೆ. ಆ ಮೂಲಕ ಹೃದಯ ಗೆಲ್ಲಲು ಮೊದಲು ಹೊಟ್ಟೆಗೆ ರುಚಿಯಾಗಿ ಉಣಬಡಿಸಬೇಕು ಎಂಬ ತಂತ್ರವನ್ನು ಹೇಳಿಕೊಟ್ಟಿದ್ದಾರೆ.

ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಣವೀರ್-ದೀಪಿಕಾ
ಅಡುಗೆ, ಮನೆಗೆಲಸ, ವ್ಯಾಯಾಮ, ಸಂಗೀತ, ಸೌಂದರ್ಯ ಚಿಕಿತ್ಸೆಗಳು ಇನ್ನೂ ಹಲವನ್ನು ದೀಪಿಕಾ ಪಡುಕೋಣೆ ಲಾಕ್‌ಡೌನ್ ಸಮಯದಲ್ಲಿ ಪ್ರಯತ್ನಿಸುತ್ತಿದ್ದಾರೆ. ರಣವೀರ್ ಸಿಂಗ್ ಸಹ ದೀಪಿಕಾ ಪಡುಕೋಣೆಗೆ ಸಾಥ್ ನೀಡುತ್ತಿದ್ದಾರೆ.


Click it and Unblock the Notifications











