ಮತ್ತೆ ವಿಚಿತ್ರ ಉಡುಪು ತೊಟ್ಟ ರಣ್ವೀರ್ ಸಿಂಗ್: ಫ್ಯಾಶನ್ ಗೆ 'ಬಿಗ್ ಜೋಕರ್'.!
ಬಾಲಿವುಡ್ ನಟ ರಣ್ವೀರ್ ಸಿಂಗ್ ಅಂದ್ರೇನೇ ಹಾಗೆ. ಒಂಥರಾ ಕ್ರೇಜಿ. ಚಿತ್ರ-ವಿಚಿತ್ರ ಉಡುಪು ತೊಡುವುದರಲ್ಲಿ ರಣ್ವೀರ್ ಸಿಂಗ್ ಸದಾ ಮುಂದು. ಈಗಾಗಲೇ ಹಲವು ಬಾರಿ ಕಣ್ಣು ಕುಕ್ಕುವ ಉಡುಪುಗಳನ್ನು ತೊಟ್ಟು ರಣ್ವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಈಗಲೂ ಅದೇ ಮುಂದುವರೆದಿದೆ.
Recommended Video
ಮೊನ್ನೆಯಷ್ಟೇ ಫಿಲ್ಮ್ ಫೇರ್ ಅವಾರ್ಡ್ಸ್ ಸಮಾರಂಭ ನಡೆದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ, ಮುಂಬೈಗೆ ನಟ ರಣ್ವೀರ್ ಸಿಂಗ್ ವಾಪಸ್ ಆದರು.
ಮುಂಬೈ ವಿಮಾನ ನಿಲ್ದಾಣಕ್ಕೆ ರಣ್ವೀರ್ ಸಿಂಗ್ ಬಂದಿಳಿದಾಗ, ಅವರು ತೊಟ್ಟಿದ್ದ ಉಡುಗೆ ಹೇಗಿತ್ತು ಗೊತ್ತಾ.? ಉದ್ದನೆಯ ಮೆಟಾಲಿಕ್ ರಸ್ಟ್ ಕಲರ್ ಕೋಟ್ ಮತ್ತು ಪ್ಯಾಂಟ್ ಜೊತೆಗೆ ಕಪ್ಪು ಬಣ್ಣದ ಟೀ-ಶರ್ಟ್, ಹ್ಯಾಟ್ ಮತ್ತು ಶೂ ಧರಿಸಿದ್ದರು.

ಕಣ್ಣಿಗೆ ರಾಚುವ ಶೈನಿ ಔಟ್ ಫಿಟ್, ರಣ್ವೀರ್ ಸಿಂಗ್ ಗೆ ಸ್ವಲ್ಪವೂ ಚೆಂದ ಕಾಣುತ್ತಿರಲಿಲ್ಲ. ಮೇಲಾಗಿ ಅದು ಫ್ಯಾಶನ್ ಅಲ್ಲ. ಫ್ಯಾಶನ್ ಡಿಸಾಸ್ಟರ್ ಎಂದು ನೆಟ್ಟಿಗರು ವ್ಯಾಖ್ಯಾನ ಮಾಡುತ್ತಿದ್ದಾರೆ.
ಈ ಉಡುಗೆಯಲ್ಲಿ ರಣ್ವೀರ್ ಸಿಂಗ್ ''ಬಿಗ್ ಜೋಕರ್'' ತರಹ ಕಾಣುತ್ತಿದ್ದಾರೆ. ''ಬೆಸ್ಟ್ ಜೋಕರ್ ಅವಾರ್ಡ್ನ ರಣ್ವೀರ್ ಸಿಂಗ್ ಗೆ ಕೊಡಬೇಕು'', ''ಮದುವೆ ಆದ್ಮೇಲೆ ರಣ್ವೀರ್ ಸಿಂಗ್ ಗೆ ಹುಚ್ಚು ಹಿಡಿದಿದೆ'', ''ಫ್ಯಾಶನ್ ಹೆಸರಿನಲ್ಲಿ ರಣ್ವೀರ್ ಸಿಂಗ್ ಜೋಕರ್ ಆಗಿದ್ದಾರೆ'' ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಅಂದ್ಹಾಗೆ, ರಣ್ವೀರ್ ಸಿಂಗ್ ಕೈಯಲ್ಲಿ ಸದ್ಯ 83 ಚಿತ್ರವಿದೆ. ಏಪ್ರಿಲ್ ನಲ್ಲಿ 83 ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











