ಉಪೇಂದ್ರ ಸ್ಟೈಲ್ ನಲ್ಲಿ 'ಗಲ್ಲಿ ಬಾಯ್' ರಣ್ವೀರ್ ಸಿಂಗ್
Recommended Video
ರಿಯಲ್ ಸ್ಟಾರ್ ಉಪೇಂದ್ರ ಡಿಫರೆಂಟ್ ಸ್ಟೈಲ್ ಮೂಲಕ ಫೇಮಸ್ ಆದ ನಟ. 'ಎ', 'ಉಪೇಂದ್ರ' ಸಿನಿಮಾಗಳಿಂದ ಹಿಡಿದು, ಇಲ್ಲಿಯವರೆಗೆ ಒಂದೊಂದು ಸಿನಿಮಾದಲ್ಲಿಯೂ ವಿಭಿನ್ನ ಗೆಟಪ್ ಗಳಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ.
ಇದೀಗ ಉಪ್ಪಿ ಸ್ಟೈಲ್ ನಲ್ಲಿಯೇ ಬಾಲಿವುಡ್ ಗಲ್ಲಿ ಬಾಯ್ ರಣ್ವೀರ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ರಣ್ವೀರ್ ಸಿಂಗ್ ಡ್ರೆಸ್ ಉಪೇಂದ್ರ ಅವರ 'ಉಪ್ಪಿ 2' ಚಿತ್ರಕ್ಕೆ ಹೋಲಿಕೆ ಆಗುತ್ತಿದೆ. ಈ ಎರಡು ಫೋಟೋಗಳು ಒಂದೇ ರೀತಿ ಇವೆ.
ರಣ್ವೀರ್ ಸಿಂಗ್ ಯಾವಾಗಲೂ ಡಿಫರೆಂಟ್ ಕಾಸ್ಟೂಮ್ ಮೂಲಕ ಗಮನ ಸೆಳೆಯುತ್ತಾರೆ. ವಿಚಿತ್ರವಾದ ಬಟ್ಟೆಗಳ ಮೂಲಕ ಈ ಹಿಂದೆ ಸಾಕಷ್ಟು ಬಾರಿ ರಣ್ವೀರ್ ಸುದ್ದಿಯಾಗಿದ್ದಾರೆ. ನಿನ್ನೆ (ಸಪ್ಟೆಂಬರ್ 18) ನಡೆದ ಐಫಾ ಪ್ರಶಸ್ತಿ 2019 ಕಾರ್ಯಕ್ರಮದಲ್ಲಿಯೂ ರಣ್ವೀರ್ ಡಿಫರೆಂಟ್ ಕಾಸ್ಟೂಮ್ ಧರಿಸಿದ್ದರು.

2019ರ ಐಫಾ ಪ್ರಶಸ್ತಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಣ್ವೀರ್ ಸಿಂಗ್ ತಮ್ಮ ಬಟ್ಟೆಯ ಮೂಲಕವೂ ಆಕರ್ಷಣೆಗೆ ಕಾರಣ ಆಗಿದ್ದರು. 'ಪದ್ಮಾವತಿ' ಸಿನಿಮಾದ ನಟನೆಗೆ ರಣ್ವೀರ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸದ್ಯ, ಭಾರತ ಕ್ರಿಕೆಟ್ ತಂಡೆ ಮಾಜಿ ನಾಯಕ ಕಪಿಲ್ ದೇವ್ ಬಯೋಪಿಕ್ '83' ನಲ್ಲಿ ರಣ್ವೀರ್ ಕಾಣಿಸಿಕೊಳ್ಳುತ್ತಿದ್ದಾರೆ. ಕಪಿಲ್ ದೇವ್ ಪಾತ್ರವನ್ನು ರಣ್ವೀರ್ ನಿರ್ವಹಿಸುತ್ತಿದ್ದಾರೆ.


Click it and Unblock the Notifications











