ಪತ್ನಿ ಧರಿಸಿದ್ದ ಚಪ್ಪಲಿಯನ್ನು ಹೊತ್ತುಕೊಂಡಿದ್ದೇಕೆ ರಣವೀರ್ ಸಿಂಗ್?
ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಲೆ ಇರುತ್ತಾರೆ. ಬಾಲಿವುಡ್ ನ ಬೆಸ್ಟ್ ಕಪಲ್ ಅಂತಾನೆ ಕರೆಸಿಕೊಳ್ಳುವ ದೀಪ್-ವೀರ್ ಜೋಡಿ ಈಗ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.
ರಣವೀರ್ ಸಿಂಗ್ ಪತ್ನಿ ದೀಪಿಕಾ ಧರಿಸಿದ್ದ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಕೊಳ್ಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪತ್ನಿಯ ಚಪ್ಪಲಿ ಹೊತ್ತುಕಂಡಿರುವ ರಣ್ವೀರ್ ಸಿಂಗ್ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ರಣ್ವೀರ್ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ, ಗಂಡ ಅಂದ್ರೆ ಹೀಗಿರ ಬೇಕು ಎಂದು ಅಭಿಮಾನಿಗಳಿಂದ ಕಮೆಂಟ್ಸ್ ಗಳು ಹರಿದುಬರುತ್ತಿವೆ.

ಅಂದ್ಹಾಗೆ ಇತ್ತೀಚಿಗೆ ದೀಪಿಕಾ ದಂಪತಿ ಆಪ್ತರ ಮದುವೆಗೆಂದು ತೆರಳಿದ್ದರು. ಮುಂಬೈನ ಜೆ ಡ್ಬ್ಲೂಮ್ಯಾರಿಯಟ್ ನಲ್ಲಿದ್ದ ಮದುವೆ ಸಂಭ್ರಮದಲ್ಲಿ ಅನೇಕ ಜನ ಇದ್ದ ಕಾರಣ ದೀಪಿಕಾ ಅವರನ್ನು ರಕ್ಷಣೆ ಮಾಡುವಲ್ಲೇ ರಣ್ವೀರ್ ಬ್ಯುಸಿಯಾಗಿದ್ದರು. ಡಿಪ್ಪಿ ಸ್ನೇಹಿತರನ್ನು ಮಾತನಾಡಿಸುತ್ತಿದ್ದರೆ ದೀಪಿಕಾ ಹಿಂದೆ ರಣ್ವೀರ್ ಸಿಂಗ್ ಚಪ್ಪಲಿ ಹಿಡಿದು ನಿಂತಿದ್ದಾರೆ.

ಈ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಣ್ವೀರ್ ಸದ್ಯ '83' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಕೂಡ 'ಚಪಾಕ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











