ಇಂಡಸ್ಟ್ರಿಗೆ ಬಂದ ಹೊಸತರಲ್ಲೇ ನಾನು ಕಾಂಡೋಮ್ ಜಾಹೀರಾತಿನಲ್ಲಿ ನಟಿಸಿದ್ದು ಯಾಕಂದ್ರೆ?
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಮಾಡಿ ಗೆದ್ದ ರಣ್‌ವೀರ್ ಸಿಂಗ್ ಸದ್ಯ 'ಸಿಂಗಂ ಅಗೇನ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆ ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹಣ ತೊಡಗಿಸಿದ್ದಾರೆ.
ಬದಲಾದ ಜೀವನ ಶೈಲಿಯಿಂದ ಲೈಂಗಿಕ ಆರೋಗ್ಯ, ಸಂರಕ್ಷಣೆ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಒಂದಷ್ಟು ಕಂಪೆನಿಗಳು ಹುಟ್ಟಿಕೊಂಡಿವೆ. ಆನ್‌ಲೈನ್‌ನಲ್ಲಿ ಸಾಕಷ್ಟು ವೆಬ್‌ಸೈಟ್‌ಗಳಿವೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಉದ್ಯಮ ಆಗುವ ಸಾಧ್ಯತೆಯಿದೆ. ಹಾಗಾಗಿ ಕೆಲವರು ಈಗಾಗಲೇ ಈ ಉದ್ಯಮಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಬಾಲಿವುಡ್ ನಟ ರಣ್‌ವೀರ್ ಸಿಂಗ್ 'ಬೋಲ್ಡ್ ಕೇರ್' ಎನ್ನುವ ಸಂಸ್ಥೆಗ ಸಹ ಮಾಲೀಕರಾಗಿ ಸೇರಿದ್ದಾರೆ.

ರಣ್‌ವೀರ್ ಸಿಂಗ್ ಜೋಡಿಸಿರುವುದರಿಂದ ನಮಗೆ ಆನೆ ಬಲ ಬಂದಿದೆ ಎಂದು ಬೆಂಗಳೂರು ಮೂಲದ 'ಬೋಲ್ಡ್ ಕೇರ್' ಹೇಳಿದೆ. "ಬೋಲ್ಡ್ ಕೇರ್‌ನ ಮುಖವಾಣಿ ಮತ್ತು ಸಹ-ಮಾಲೀಕನಾಗಿ ಕಂಪೆನಿ ಸೇರಲು ನನಗೆ ಸಂತೋಷವಾಗಿದೆ. ಲೈಂಗಿಕ ಆರೋಗ್ಯ, ಸಮಸ್ಯೆ, ಪರಿಷ್ಕಾರ ನೀಡುವ ಮೂಲಕ ಜನರಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ. ಮುಖ್ಯವಾಗಿ ಪುರುಷರು ಲೈಂಗಿನ ಸಮಸ್ಯೆ, ಸಂರಕ್ಷಣೆ ಕುರಿತು ಹಂಚಿಕೊಳ್ಳಲು ನಾಚಿಕೆ ಪಡುತ್ತಾರೆ. ಈ ಕಂಪೆನಿ ಅಂತಹವರಿಗೆ ಸಹಾಯ ಮಾಡುತ್ತದೆ" ಎಂದಿದ್ದಾರೆ.
ಲೈಂಗಿಕ ಸಮಸ್ಯೆ ಇರುವು ಪುರಷರು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸುತ್ತಾರೆ. ಅವರಿಗೆ ಧೈರ್ಯ ತುಂಬುವುದರ ಜೊತೆಗೆ ಸಮಸ್ಯೆ ಬಗೆಹರಿಸಬೇಕು. ಸಮಾಜ ಇಂತಹವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದೇ ಆಲೋಚನೆಯಿಂದ ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲೇ ಕಾಂಡೋಮ್ ಬ್ರ್ಯಾಂಡ್ ಪ್ರಮೋಟ್ ಮಾಡಿದ್ದೆ. ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಲ್ಲಿ ತಿಳುವಳಿಕೆ ಮೂಡಿಸುವ ಕರ್ತವ್ಯ ಎಲ್ಲರದ್ದು" ಎಂದು ರಣ್‌ವೀರ್ ಹೇಳಿದ್ದಾರೆ.
ಅಂದಹಾಗೆ 2021ರಲ್ಲಿ ಆರಂಭವಾದ 'ಬೋಲ್ಡ್ ಕೇರ್' ಸಂಸ್ಥೆ ಕಳೆದ ವರ್ಷ 40 ಕೋಟಿ ರೂ. ಆದಾಯ ಗಳಿಸಿತ್ತು. 10 ತಿಂಗಳಲ್ಲಿ 3 ಲಕ್ಷ ಯೂನಿಟ್ ಕಾಂಡೋಮ್‌ಗಳನ್ನು ಮಾರಾಟ ಮಾಡಿದೆ. 15 ಲಕ್ಷಕ್ಕೂ ಅಧಿಕ ಆರ್ಡರ್‌ಗಳ ಪ್ರೋಸೆಸ್ ನಡೀತಿದೆ ಎಂದು ಮಾಹಿತಿ ನೀಡಿದೆ.
2014ರಲ್ಲಿ ರಣ್‌ವೀರ್ ಸಿಂಗ್ ಕಾಂಡೋಮ್ ಜಾಹೀರಾತುವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಅದು ದೊಡ್ಡ ಸುದ್ದಿಯಾಗಿತ್ತು. ಐದಾರು ವರ್ಷ ಆ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಣ್‌ವೀರ್ ಇದ್ದರು. ಬಳಿಕ ಸಂಭಾವನೆ ಜಾಸ್ತಿ ಆಯಿತು ಹಾಗೂ ರಣ್‌ವೀರ್ ಮದುವೆಯಾದರು ಎನ್ನುವ ಕಾರಣಕ್ಕೆ ಆ ಸಂಸ್ಥೆ ಒಪ್ಪಂದ ಮುರಿದುಕೊಂಡಿದ್ದಾಗಿ ವರದಿಯಾಗಿತ್ತು.
ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ರಣ್‌ವೀರ್ ತಂದೆಗೆ ಹೇಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. "ಬೇರೆ ನಟರೆಲ್ಲಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನೀನು ಮಾಡಬಹುದಲ್ಲ. ಒಳ್ಳೆ ಹಣ ಬರುತ್ತದೆ ಎಂದು ತಂದೆ ಜಗ್‌ಜಿತ್ ಸಿಂಗ್ ಹೇಳುತ್ತಿದ್ದರಂತೆ. ಸಮಯ ಬಂದಾಗ ನಾನು ಮಾಡುತ್ತೇನೆ ಎಂದು ರಣ್‌ವೀರ್ ಉತ್ತರಿಸುತ್ತಿದ್ದರಂತೆ.
ಒಂದು ದಿನ "ನಾನು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ತಂದೆಗೆ ಹೇಳಿದೆ. ಅದಕ್ಕವರು ಓಹ್, ಹೌದಾ? ಯಾವ ಜಾಹೀರಾತು ಎಂದು ಕೇಳಿದರು. ಅದಕ್ಕೆ ನಾನು ಕಾಂಡೋಮ್ ಎಂದು ಹೇಳಿದ್ದೆ. ಅದಕ್ಕವರು ಹೌದಾ, ನಿನಗೆ ಗೊತ್ತು ಎನಿಸುತ್ತದೆ ನೀನು ಏನು ಮಾಡ್ತಿದ್ದೀಯಾ ಅಂತ" ಎಂದು ಹೇಳಿದ್ದಾಗಿ ರಣ್‌ವೀರ್ ಹಂಚಿಕೊಂಡಿದ್ದರು.


Click it and Unblock the Notifications











