ನಟಿ ಅಲಿಯಾ ಭಟ್ ಜೊತೆಯಾದ 'ಗಲ್ಲಿಬಾಯ್' ರಣವೀರ್ ಸಿಂಗ್
ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲ್ ಬನ್ಸಾಲಿ ನಿರ್ದೇಶನದ ಮಹತ್ವಾಕಾಂಕ್ಷೆಯ 'ಗಂಗೂಬಾಯಿ ಕತಿಯಾವಾಡಿ' ಸಿನಿಮಾಗೆ ಸ್ಟಾರ್ ನಟ ಎಂಟ್ರಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿ ಬಹುತೇಕ ಮುಗಿಸಿರುವ ಸಿನಿಮಾತಂಡ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತಗೊಳಿಸಿದೆ.
Recommended Video
ಅಂದುಕೊಂಡತೆ ಆಗಿದ್ದಾರೆ ಸಿನಿಮಾ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಬೇಕಿತ್ತು. ಆದರೀಗ ಲೆಕ್ಕಾಚಾರವೆ ತಲೆಕಳಗಾಗಿದೆ. ಈ ಮಧ್ಯೆ ಸಿನಿಮಾಗೆ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಮಹಿಳಾಪ್ರಧಾನ ಸಿನಿಮಾವಾಗಿದ್ದು, ಅಲಿಯಾ ಭಟ್ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ರಣವೀರ್ ಸಿಂಗ್ ಸಹ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಚಿತ್ರದಲ್ಲಿ ರಣವೀರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪಾತ್ರ ಚಿಕ್ಕದಾದರೂ ತುಂಬಾ ಪ್ರಮುಖವಾದ ಪಾತ್ರವಂತೆ. ಹಾಗಾಗಿ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬನ್ಸಾಲಿ ಜೊತೆ ಈಗಾಗಲೆ ರಣವೀರ್ ಮೂರು ಸಿನಿಮಾಗಳನ್ನು ಮಾಡಿದ್ದಾರೆ. ರಾಮ್ ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಅಂತಹ ಮೂರು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಈ ಮೂರು ಸಿನಿಮಾಗಳು ರಣವೀರ್ ಸಿಂಗ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಈ ಮೂರು ಸಿನಿಮಾಗಳ ಯಶಸ್ಸು ರಣವೀರ್ ಅವರನ್ನು ಉತ್ತುಂಗದಲ್ಲಿ ನಿಲ್ಲಿಸಿದೆ. ಹಾಗಾಗಿ ಬನ್ಸಾಲಿ ಸಿನಿಮಾ ರಿಜೆಕ್ಟ್ ಮಾಡಲು ಸಾಧ್ಯಾವಿಲ್ಲ. ಬನ್ಸಾಲಿ ಆಫರ್ ಮಾಡಿದ ತಕ್ಷಣ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಅಲಿಯಾ ಭಟ್ ಮತ್ತು ರಣವೀರ್ ಸಿಂಗ್ ಈಗಾಗಲೆ 'ಗಲ್ಲಿ ಬಾಯ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಲಿಯಾ ಮತ್ತು ರಣವೀರ್ ಜೋಡಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈಗ ಮತ್ತೆ ಗಂಗೂಬಾಯಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು ಈಗ ರಣವೀರ್ ಎಂಟ್ರಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.


Click it and Unblock the Notifications











