ರಣ್ವೀರ್ ಸಿಂಗ್‌ ಇಷ್ಟದ ದಕ್ಷಿಣ ಭಾರತ ಸಿನಿಮಾ ಮತ್ತು ನಟರಿವರು

ದಕ್ಷಿಣ ಭಾರತ ಸಿನಿಮಾಗಳ ಹೆಚ್ಚಿನ ಪ್ರೀತಿ ಮತ್ತು ಗೌರವುಳ್ಳ ಬಾಲಿವುಡ್ ನಟರಲ್ಲಿ ರಣ್ವೀರ್ ಸಿಂಗ್ ಸಹ ಒಬ್ಬರು. ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನೂ ರಣ್ವೀರ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ರಣ್ವೀರ್ ಸಿಂಗ್, ತಮಗೆ ಇಷ್ಟವಾದ ದಕ್ಷಿಣ ಭಾರತ ಸಿನಿಮಾಗಳು, ನಟರು, ನಿರ್ದೇಶಕರನ್ನು ಹೆಸರಿಸಿದ್ದಾರೆ.

ಕೇವಲ ಸಿನಿಮಾಗಳನ್ನು ನೋಡುವುದು ಮಾತ್ರವಲ್ಲ, ತಮ್ಮ ಇಷ್ಟದ ದಕ್ಷಿಣ ಭಾರತ ನಟರು, ನಿರ್ದೇಶಕರೊಟ್ಟಿಗೆ ಕೆಲಸ ಮಾಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಅವಕಾಶ ದೊರೆತರೆ ಭಾಷೆಯನ್ನು ಕಲಿಯುವ ಉತ್ಸಾವನ್ನೂ ರಣ್ವೀರ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ರಣ್ವೀರ್ ಸಿಂಗ್‌ಗೆ ನಿರ್ದೇಶಕ ರಾಜಮೌಳಿ ಬಹಳ ಇಷ್ಟವಂತೆ. ನಾನು ಅವರ ಸಿನಿಮಾಗಳ ಅಭಿಮಾನಿ, ಅವರ ಕ್ರೇಜಿ ಐಡಿಯಾಗಳು ನನಗೆ ಬಹಳ ಮೆಚ್ಚುಗೆಯಾಗುತ್ತವೆ. ಅವರ 'ಮಗಧೀರ' ಸಿನಿಮಾ ನನಗೆ ಬಹಳ ಇಷ್ಟವಾಗಿತ್ತು, ಅವರ ಮುಂದಿನ ಸಿನಿಮಾ 'ಆರ್ಆರ್ಆರ್' ನೋಡಲು ನಾನು ಉತ್ಸುಕನಾಗಿದ್ದೇನೆ'' ಎಂದಿದ್ದಾರೆ ರಣ್ವೀರ್ ಸಿಂಗ್.

Ranveer Singh Named His Favorite South Indian Director And Actors

ರಾಜಮೌಳಿ ಮಾತ್ರವೇ ಅಲ್ಲ ನಿರ್ದೇಶಕ ಮಣಿರತ್ನಂ ಎಂದರೂ ರಣ್ವೀರ್‌ಗೆ ಬಹಳ ಇಷ್ಟವಂತೆ. ''ನಾನು ಮಣಿರತ್ನಂ ಸಿನಿಮಾಗಳನ್ನು ನೋಡುತ್ತಾ ಬೆಳೆದವನು'' ಎಂದು ಹೇಳಿರುವ ರಣ್ವೀರ್‌, ತಮಗೆ ತಮಿಳಿನ ಮತ್ತೊಬ್ಬ ನಿರ್ದೇಶಕ ಶಂಕರ್ ಸಿನಿಮಾಗಳೆಂದರೂ ಇಷ್ಟ ಎಂದಿದ್ದಾರೆ. ''ಶಂಕರ್ ದೊಡ್ಡ ಕ್ಯಾನ್ವಾಸ್‌ನಲ್ಲಿ ಸಿನಿಮಾಗಳನ್ನು ಪ್ರೆಸೆಂಟ್ ಮಾಡುವ ರೀತಿ ತಮಗೆ ಇಷ್ಟವಾಯಿತೆಂದಿದ್ದಾರೆ. ಅವರ ಐಡಿಯಾಗಳು ನನಗೆ ರೋಚಕ ಎನಿಸುತ್ತವೆ. ಅವರೊಟ್ಟಿಗೆ ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ'' ಎಂದಿದ್ದಾರೆ ರಣ್ವೀರ್. ಶಂಕರ್ ಅವರ ಮುಂದಿನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ.

ದಕ್ಷಿಣ ಭಾರತದ ತಮ್ಮ ಇಷ್ಟದ ನಟರನ್ನು ಹೆಸರಿಸಿದ್ದಾರೆ ರಣ್ವೀರ್ ಸಿಂಗ್. ''ನನಗೆ ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ನಟನೆ ಬಹಳ ಹಿಡಿಸಿತು'' ಎಂದಿರುವ ಅವರು, 'ಸೂಪರ್ ಡಿಲಕ್ಸ್', 'ಮಗಧೀರ', 'ಕುಂಬಳಂಗಿ ನೈಟ್ಸ್' ಸಿನಿಮಾಗಳನ್ನು ನಾನು ಬಹಳ ಮೆಚ್ಚಿಕೊಂಡೆ ಎಂದಿದ್ದಾರೆ. ಮಲಯಾಳಂ ಸಿನಿಮಾಗಳು ಅದ್ಭುತವಾಗಿ ಮೂಡಿಬರುತ್ತಿವೆ ಎಂದಿರುವ ರಣ್ವೀರ್ ನನ್ನ ಇಷ್ಟದ ನಿರ್ದೇಶಕ ನಟರೊಟ್ಟಿಗೆ ಕೆಲಸ ಮಾಡುವ ಆಸೆಯಿದೆ'' ಎಂದಿದ್ದಾರೆ.

ತಮ್ಮ ಪತ್ನಿ ದೀಪಿಕಾ ಪಡುಕೋಣೆ ಇದೀಗ ಬಹುಭಾಷಾ ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಹೇಳಿರುವ ರಣ್ವೀರ್ ಸಿಂಗ್, ''ದೀಪಿಕಾ ನನಗೆ ಹೇಳುತ್ತಿರುತ್ತಾರೆ, ಬಹುಭಾಷಾ ಸಿನಿಮಾಗಳಲ್ಲಿ ನಟಿಸುವ ಸವಾಲುಗಳು ಎಂಥಹವು, ದಕ್ಷಿಣ ಭಾರತ ಸಿನಿಮಾ ಕರ್ಮಿಗಳು ಯಾವ ರೀತಿ ಸಿನಿಮಾ ಮಾಡುತ್ತಾರೆ. ಬಾಲಿವುಡ್‌ಗೂ ಅಲ್ಲಿಗೂ ಇರುವ ಭಿನ್ನತೆ ಇತರೆ ವಿಷಯಗಳನ್ನು ಹಂಚಿಕೊಳ್ಳುತ್ತಾಳೆ. ನನಗೂ ಆ ಸವಾಲುಗಳನ್ನು ಎದುರಿಸಿ ನಟಿಸುವಾಸೆ'' ಎಂದಿದ್ದಾರೆ ರಣ್ವೀರ್ ಸಿಂಗ್. ದೀಪಿಕಾ ಪಡುಕೋಣೆ ಪ್ರಸ್ತುತ ಪ್ರಭಾಸ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದು, ಅಮಿತಾಬ್ ಬಚ್ಚನ್ ಸಹ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Bollywood actor Ranveer Singh named his favorite south Indian directors and actors and movies. He wants to act in South Indian movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X