For Quick Alerts
  ALLOW NOTIFICATIONS  
  For Daily Alerts

  ರಣ್ವೀರ್ ಸಿಂಗ್ ಹೊಸ ಸ್ಟೈಲ್ ವೈರಲ್: ವಿಚಿತ್ರ ಬಟ್ಟೆಯ ಬೆಲೆ ಎಷ್ಟು?

  |

  ಬಾಲಿವುಡ್ ನಟ ರಣ್ವೀರ್ ಸಿಂಗ್ ಸಿನಿಮಾಗಳಿಗಿಂತ ತಾವು ತೊಡುವ ಬಟ್ಟೆಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ ಅಂದ್ರೆ ನಂಬಲೇಬೇಕು. ಸಾರ್ವಜನಿಕ ಸ್ಥಳಗಳು, ಪಾರ್ಟಿ, ಸಮಾರಂಭಗಳಲ್ಲಿ ರಣ್ವೀರ್ ತೊಡುವ ಉಡುಪು ಪ್ರಮುಖ ಆಕರ್ಷಣೆಯಾಗಿರುತ್ತದೆ. ಈಗಾಗಲೇ ಹಲವು ಬಾರಿ ವಿಭಿನ್ನ, ವಿಶೇಷ, ವರ್ಣರಂಜಿತ ಬಟ್ಟೆಗಳನ್ನು ತೊಟ್ಟು ಬೆರಗುಗೊಳಿಸಿದ್ದಾರೆ. ಇದೀಗ, ಮತ್ತೊಮ್ಮೆ ರಣ್ವೀರ್ ಸಿಂಗ್ ವಿಚಿತ್ರವಾಗಿ ಡ್ರೆಸ್ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ.

  ರಣ್ವೀರ್ ಸಿಂಗ್ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ. ನೀಲಿ ಬಣ್ಣದ ವಿಶೇಷವಾಗಿರುವ ಸೂಟ್ ಧರಿಸಿರುವ ರಣ್ವೀರ್ ಬಹಳ ಅಪರೂಪವಾಗಿ ಪ್ರತ್ಯಕ್ಷವಾಗಿದ್ದಾರೆ. ಜೊತೆಗೆ ದುಬಾರಿ ಬೆಲೆಗೆ ಕಪ್ಪು ಬಣ್ಣದ ಬ್ಯಾಗ್ ಇಟ್ಟುಕೊಂಡಿದ್ದಾರೆ. ರಣ್ವೀರ್ ಲುಕ್ ನೋಡಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ...

  ಮತ್ತೆ ವಿಚಿತ್ರ ಉಡುಪು ತೊಟ್ಟ ರಣ್ವೀರ್ ಸಿಂಗ್: ಫ್ಯಾಶನ್ ಗೆ 'ಬಿಗ್ ಜೋಕರ್'.! ಮತ್ತೆ ವಿಚಿತ್ರ ಉಡುಪು ತೊಟ್ಟ ರಣ್ವೀರ್ ಸಿಂಗ್: ಫ್ಯಾಶನ್ ಗೆ 'ಬಿಗ್ ಜೋಕರ್'.!

  ಉದ್ದನೆಯ ಕೂದಲು, ಆಭರಣ

  ಉದ್ದನೆಯ ಕೂದಲು, ಆಭರಣ

  ನೀಲಿ ಬಣ್ಣದ ಟ್ರ್ಯಾಕ್ ಸೂಟ್‌ ಮಾದರಿಯ ಉಡುಪು ತೊಟ್ಟಿರುವ ರಣ್ವೀರ್ ಸಿಂಗ್ ಕತ್ತಿನಲ್ಲಿ ಹಾರ ಧರಿಸಿದ್ದಾರೆ. ಚಿನ್ನದ ಬಣ್ಣದ ದೊಡ್ಡ ಹಾರ ಧರಿಸಿದ್ದು, ಕೈಯಲ್ಲಿ ಕಪ್ಪು ಬಣ್ಣದ ಲೆದರ್ ಬ್ಯಾಗ್ ಇಟ್ಟುಕೊಂಡಿದ್ದಾರೆ. ಕಣ್ಣಿಗೆ ಕನ್ನಡ ಹಾಗೂ ತಲೆಗೆ ಟೋಪಿ ಹಾಕಿ ಬಹಳ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.

  ಸೆಲೆಬ್ರಿಟಿಗಳು ಅಚ್ಚರಿ

  ಸೆಲೆಬ್ರಿಟಿಗಳು ಅಚ್ಚರಿ

  ರಣ್ವೀರ್ ಸಿಂಗ್ ಹೊಸ ಲುಕ್ ನೋಡಿ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಆಲಿಯಾ ಭಟ್ ಈ ಲುಕ್ ನೋಡಿ Oh.!oh!oh! ಎಂದಿದ್ದಾರೆ. ಅರ್ಜುನ್ ಕಪೂರ್, ಸಿದ್ಧಾರ್ಥ್, ಹಿಮೇಶ್, ಜೋಯೋ ಅಖ್ತರ್, ಟೈಗರ್ ಶ್ರಾಫ್, ಹನ್ಸಿಕಾ ಸೇರಿದಂತೆ ಹಲವು ಕಾಮೆಂಟ್ ಮಾಡಿದ್ದಾರೆ.

  ಬಟ್ಟೆಯ ಬೆಲೆ ಎಷ್ಟು?

  ಬಟ್ಟೆಯ ಬೆಲೆ ಎಷ್ಟು?

  ರಣ್ವೀರ್ ಸಿಂಗ್ ಧರಿಸಿರು ಈ ಸ್ಟೈಲಿಶ್ ಉಡುಪಿನ ಬೆಲೆ ಒಟ್ಟಾರೆ 4 ಲಕ್ಷ ರೂಪಾಯಿವರೆಗೂ ಆಗಿದೆ ಎಂದು ಜೂಮ್ ಎಂಟರ್‌ಟೈನ್‌ಮೆಂಟ್ ವೆಬ್‌ಸೈಟ್ ವರದಿ ಮಾಡಿದೆ.

  ಪ್ರಭಾಸ್ ಹೇರ್ ಸ್ಟೈಲ್ ಗೆ ಲಕ್ಷ ಗಟ್ಟಲೆ ಖರ್ಚು ಮಾಡಿದ| Filmibeat Kannada
  83 ಸಿನಿಮಾ ಬಿಡುಗಡೆಗೆ ಸಿದ್ದ

  83 ಸಿನಿಮಾ ಬಿಡುಗಡೆಗೆ ಸಿದ್ದ

  ರಣ್ವೀರ್ ನಟಿಸಿರುವ '83' ಸಿನಿಮಾ ತೆರೆಗೆ ಬರಬೇಕಿದೆ. ಕೋವಿಡ್ ಕಾರಣದಿಂದ ಪದೇ ಪದೇ ಮುಂದೂಡಿರುವ ಚಿತ್ರ ಶೀಘ್ರದಲ್ಲೇ ಚಿತ್ರಮಂದಿರಕ್ಕೆ ಬರಲಿದೆ. ಕಬೀರ್ ಖಾನ್ ಈ ಚಿತ್ರ ನಿರ್ದೇಶಿಸಿದ್ದು, 1983ರಲ್ಲಿ ವಿಶ್ವಕಪ್ ಗೆದ್ದ ತಂಡದ ಸುತ್ತ ಕಥೆ ಮಾಡಲಾಗಿದೆ. ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Bollywood Actor Ranveer Singh's New Look viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X