For Quick Alerts
  ALLOW NOTIFICATIONS  
  For Daily Alerts

  ಸಂಪೂರ್ಣ ಬೆತ್ತಲಾದ ರಣ್‌ವೀರ್ ಸಿಂಗ್; ದೀಪಿಕಾ ಪಡುಕೋಣೆ ಪತಿರಾಯನ ಸಾಹಸಕ್ಕೆ ಫ್ಯಾನ್ಸ್ ಶಾಕ್!

  |

  ಅದ್ಭುತ ಪಾತ್ರಗಳ ಮೂಲಕ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸುವ ನಟ ರಣ್‌ವೀರ್ ಸಿಂಗ್, ಕೆಲವೊಮ್ಮೆ ವಿಚಿತ್ರ ವೇಷಭೂಷಣದಿಂದ ಅಭಿಮಾನಿಗಳಿಗೆ ಶಾಕ್ ಕೊಡುತ್ತಿರುತ್ತಾರೆ. ಆದರೆ ಈ ಬಾರಿ ಬಟ್ಟೆ ಹಾಕಿಕೊಳ್ಳುವುದನ್ನೇ ಮರೆತು, ಏಕಾಏಕಿ ಬೆತ್ತಲಾಗಿ ಕ್ಯಾಮರಾ ಮುಂದೆ ದರ್ಶನ ಕೊಟ್ಟಿದ್ದಾರೆ. ನಿಂತು, ಕೂತು, ಬೊರಲು ಮಲಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ದೀಪಿಕಾ ಪಡುಕೋಣೆ ಪತಿರಾಯನ ಅವತಾರ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ನಟಿಯರು ಈ ರೀತಿ ಬೆತ್ತಲೆ ಫೋಟೊಶೂಟ್ ಮಾಡಿಸುವ ಸಾಹಸ ಮಾಡುತ್ತಿರುತ್ತಾರೆ. ಆದರೆ ಈಗ ಸ್ಟಾರ್ ನಟರು ಇಂತಹ ಪ್ರಯತ್ನ ಮಾಡಲು ಪ್ರಾರಂಭಿಸಿದ್ದಾರೆ.

  ಪೇಪರ್ ಅನ್ನುವ ಮ್ಯಾಗಜೀನ್‌ಗಾಗಿ ದೇಹದ ಮೇಲೆ ಒಂದೆಳೆ ನೂಲು ಇಲ್ಲದೇ ರಣ್‌ವೀರ್ ಸಿಂಗ್ ಈ ತರ ನಗ್ನ ಪೋಸ್‌ಗಳನ್ನು ಕೊಟ್ಟಿದ್ದಾರೆ. ಅಮೆರಿಕಾದ ನಟ ಬರ್ಟ್ ರೆನಾಲ್ಡ್ಸ್‌ ಈ ಫೋಟೊಶೂಟ್‌ಗೆ ಸ್ಪೂರ್ತಿ ಅನ್ನೋದು ಗೊತ್ತಾಗುತ್ತಿದೆ. ಈ ಫೋಟೊಗಳು ವೈರಲ್ ಆಗಿ ರಣ್‌ವೀರ್ ಸಿಂಗ್‌ ಅನ್ನು ಸಿಕ್ಕಾಪಟ್ಟೆ ಟ್ರೋಲ್‌ ಕೂಡ ಮಾಡುತ್ತಿದ್ದಾರೆ. 'ಈತ ಹುಡುಗಿಯರನ್ನು ನೋಡಿ ಇನ್‌ಸ್ಪೈರ್ ಆಗಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿ ಟೀನೇಜ್ ಹುಡುಗರು ಹಾಳಾಗುತ್ತಾರೆ. ರಣ್ವೀರ್‌ ಸಿಂಗ್ ಬಾಲಿವುಡ್ ಬಿಡುವ ಸಮಯ ಹತ್ತಿರ ಬಂತು ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕಾಮೆಂಟ್‌ಗಳಿಗೆಲ್ಲಾ ರಣ್ವೀರ್‌ ಸಿಂಗ್ ತಲೆ ಕೆಡಿಸಿಕೊಳ್ಳುತ್ತಿಲ್ಲ.

  ಶಾರುಖ್, ಸಲ್ಮಾನ್ ಫ್ಲ್ಯಾಟ್ ಮಧ್ಯೆ ₹119 ಕೋಟಿ ಬಂಗಲೆ ಖರೀದಿಸಿದ ದೀಪಿಕಾ-ರಣ್‌ವೀರ್: ಹೈಲೈಟ್ ಏನು?ಶಾರುಖ್, ಸಲ್ಮಾನ್ ಫ್ಲ್ಯಾಟ್ ಮಧ್ಯೆ ₹119 ಕೋಟಿ ಬಂಗಲೆ ಖರೀದಿಸಿದ ದೀಪಿಕಾ-ರಣ್‌ವೀರ್: ಹೈಲೈಟ್ ಏನು?

  ಈ ಬೆತ್ತಲೆ ಫೋಟೊಶೂಟ್‌ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನೆಟ್ಟಿಗರು ಮೀಮ್ಸ್ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ. ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ್ತಿದ್ದಾರೆ. ಟ್ರೋಲ್‌ ಬಗ್ಗೆ ಪ್ರತಿಕ್ರಿಯಿಸಿರೋ ರಣ್‌ವೀರ್ ಸಿಂಗ್, 'ಎಲ್ಲರೆದುರು ಬೆತ್ತಲಾಗಿ ಪೋಸ್ ಕೊಡೋದು ನನಗೇನು ಕಷ್ಟವಲ್ಲ. ಈ ಫೋಟೊಗಳಲ್ಲಿ ನನ್ನ ಆತ್ಮವನ್ನು ನೋಡಬಹುದು. ನಾನು ಸಾವಿರ ಜನರ ನಡುವೆಯೂ ನಗ್ನವಾಗಿ ಇರಬಲ್ಲೆ. ಆದರೆ ಜನರು ಕಸಿವಿಸಿ ಆದರೆ ನಾನೇನು ಮಾಡೋಕೆ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

   ರಣ್ವೀರ್ ಫೋಟೊಶೂಟ್‌ಗೆ ಅಭಿಮಾನಿಗಳ ಮೆಚ್ಚುಗೆ

  ರಣ್ವೀರ್ ಫೋಟೊಶೂಟ್‌ಗೆ ಅಭಿಮಾನಿಗಳ ಮೆಚ್ಚುಗೆ

  ಸಾಕಷ್ಟು ಜನ ರಣ್ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ನೋಡಿ ಶಾಕ್ ಆಗಿದ್ದರೆ. ಕೆಲ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮತ್ತೆ ಕೆಲವರು 'ಪತಿರಾಯನ ಈ ಅವತಾರ ನೋಡಿ ದೀಪಿಕಾ ಪಡುಕೋಣೆ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋ ಕುತೂಹಲ ಎದ್ದಿದ್ದೆ ' ಎಂದು ಕಾಮೆಂಟ್ ಮಾಡಿದ್ದಾರೆ.

  ಪತ್ನಿ ದೀಪಿಕಾ ಪಡುಕೋಣೆಯನ್ನು 'ಚಪ್ಲಿ' ಎಂದು ಕರೆಯುತ್ತಾರಂತೆ ಪತಿ ರಣ್ವೀರ್: ಕಾರಣವೇನು?ಪತ್ನಿ ದೀಪಿಕಾ ಪಡುಕೋಣೆಯನ್ನು 'ಚಪ್ಲಿ' ಎಂದು ಕರೆಯುತ್ತಾರಂತೆ ಪತಿ ರಣ್ವೀರ್: ಕಾರಣವೇನು?

  ಬರ್ಟ್ ರೆನಾಲ್ಡ್ಸ್ ಯಾರು ?

  60, 70ರ ದಶಕದಲ್ಲಿ ಹಾಲಿವುಡ್‌ನ ಬಹುಬೇಡಿಕೆಯ ನಟ ಬರ್ಟ್ ರೆನಾಲ್ಡ್ಸ್. ಸೆಕ್ಸ್ ಸಿಂಬಲ್ ಅಂತಲೇ ಫೇಮಸ್ ಆಗಿದ್ದ ರೆನಾಲ್ಡ್ಸ್ 100 ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 1972ರಲ್ಲಿಅವರ ಬೆತ್ತಲೆ ಫೋಟೊಶೂಟ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಥೇಟ್ ಅದೇ ರೀತಿ ರಣ್ವೀರ್ ಸಿಂಗ್ ಕೂಡ ಒಂದು ಪೋಸ್ ಕೊಟ್ಟಿದ್ದಾರೆ.

   ಫಂಕಿ ಸ್ಟೈಲ್‌ನಲ್ಲಿ ರಣ್‌ವೀರ್ ಫೋಟೊಶೂಟ್

  ಫಂಕಿ ಸ್ಟೈಲ್‌ನಲ್ಲಿ ರಣ್‌ವೀರ್ ಫೋಟೊಶೂಟ್

  ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನುವ ರಣ್‌ವೀರ್ ಕೆಲ ದಿನಗಳ ಹಿಂದೆ ಫಂಕಿ ಸ್ಟೈಲ್ ಫೋಟೊಶೂಟ್‌ನಿಂದ ಗಮನ ಸೆಳೆದಿದ್ದರು. ಹುಡುಗಿಯರ ರೀತಿ ಉದ್ದನೆಯ ಹೇರ್‌ಸ್ಟೈಲ್, ಗಡ್ಡ ಬಿಟ್ಟು ತಲೆಗೊಂದು ಹ್ಯಾಟ್​​ ಹಾಕ್ಕೊಂಡು, ಜೆರ್ಸಿ, ಅದಕ್ಕೆ ಜಾಗ್ಗಿಂಗ್​ ಪ್ಯಾಂಟ್​​, ಅದರ ಮೇಲೊಂದು ಬ್ಲೇಸರ್​​, ಕುತ್ತಿಗೆಯಲ್ಲಿ ದೊಡ್ಡ ನೆಕ್​​ಲೆಸ್​​, ಕೈಯಲ್ಲಿ ಬ್ಲ್ಯಾಕ್​ ಕಲರ್​ ಲೇಡಿಸ್ ಮಿನಿ ಬ್ಯಾಗ್ ಹಿಡಿದು ಪೋಸ್ ಕೊಟ್ಟಿದ್ದರು. ಆ ಫೋಟೊಗಳು ವೈರಲ್ ಆಗಿದ್ದವು.

   ರಣ್‌ವೀರ್ ಸಿಂಗ್ ಕೈಯಲ್ಲಿವೆ ಎರಡು ಸಿನಿಮಾಗಳು

  ರಣ್‌ವೀರ್ ಸಿಂಗ್ ಕೈಯಲ್ಲಿವೆ ಎರಡು ಸಿನಿಮಾಗಳು

  ರಣ್‌ವೀರ್ ಸಿಂಗ್ ಅಭಿನಯದ ವಿಚಾರಕ್ಕೆ ಬಂದರೆ ಸದ್ಯ 'ಸರ್ಕಸ್' ಮತ್ತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಅನ್ನುವ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರಣ್‌ವೀರ್ ಸಿಂಗ್ ನಟನೆಯ 'ಜಯೇಶ್‌ಭಾಯ್ ಜೋರ್‌ದಾರ್' ಸಿನಿಮಾ ಅಷ್ಟಾಗಿ ಸೌಂಡ್ ಮಾಡಲೇ ಇಲ್ಲ.

  Recommended Video

  ನಿರೂಪ್ ಬಂಡಾರಿ ನೀತ ಅಶೋಕ್ ಪ್ರಕಾರ ವಿಕ್ರಾಂತ್ ರೋಣ ಹಾಗು ಫ್ಯಾಂಟಮ್‌ಗೆ ಸಂಭಂದಾನೇ ಇಲ್ಲ | Filmibeat Kannada
  English summary
  Ranveer Singh Nude Photoshoot For Paper Magazine Breaks The Internet, Know More.
  Friday, July 22, 2022, 13:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X