'ಪದ್ಮಾವತ್' ನಂತರ 'ಹಾಲಿವುಡ್'ಗೆ ಹಾರಲಿದ್ದಾರೆ ರಣ್ವೀರ್ ಸಿಂಗ್
ಬಾಲಿವುಡ್ ನಟ ರಣ್ವೀರ್ ಸಿಂಗ್ ಸದ್ಯ ತುಂಬ ಸಂತಸದಲ್ಲಿ ಇದ್ದಾರೆ. ಕಾರಣ ಅವರ ಅಭಿನಯದ 'ಪದ್ಮಾವತ್' ಸಿನಿಮಾ ಎಲ್ಲ ಅಡೆತಡೆಗಳನ್ನು ಮೀರಿ ಬಿಡುಗಡೆಯಾಗಿದೆ. ಮಾತ್ರವಲ್ಲದೆ ಪ್ರೇಕ್ಷಕರಿಂದ ಅದ್ಬುತ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸಿನಿಮಾದಲ್ಲಿ ಎಲ್ಲರ ನಟನೆಗೆ ಪ್ರಶಂಸೆ ಕೇಳಿ ಬಂದಿದೆ. ಅದರಲ್ಲಿಯೂ ರಣ್ವೀರ್ ಸಿಂಗ್ ಅವರ ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ನೋಡುಗರು ತುಂಬ ಮೆಚ್ಚಿಕೊಂಡಿದ್ದರು. ಆ ಪಾತ್ರವನ್ನು ರಣ್ವೀರ್ ಅದ್ಬುತವಾಗಿ ನಿರ್ವಹಿಸಿದ್ದರು. ಈಗ ಈ ಸಿನಿಮಾದ ನಂತರ ರಣ್ವೀರ್ ಹಾಲಿವುಡ್ ಕನಸು ಕಾಣುತ್ತಿದ್ದಾರೆ.
''ನನಗೆ ಹಾಲಿವುಡ್ ನಿಂದ ಆಫರ್ ಗಳು ಬರುತ್ತಿದ್ದು ಈ ಬಗ್ಗೆ ಉತ್ಸುಕನಾಗಿದ್ದೇನೆ. ನಾನು ಹಿಂದಿ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ನಟಿಸುತ್ತೇನೆ.'' ಎಂದು ಹೇಳಿದ್ದಾರೆ. 'ಪದ್ಮಾವತ್' ನಂತರ '1983', 'ಗಲ್ಲಿ ಬಾಯ್' ಮತ್ತು 'ಸಿಂಬಾ' ಚಿತ್ರದಲ್ಲಿ ಅವರು ಬಿಜಿ ಆಗಲಿದ್ದಾರೆ ಈ ಸಿನಿಮಾಗಳ ಬಳಿಕ ಹಾಲಿವುಡ್ ಗೆ ಹಾರುವ ಪ್ಲಾನ್ ನಲ್ಲಿ ರಣ್ವೀರ್ ಇದ್ದಾರೆ.

ರಣ್ವೀರ್ ಸಿಂಗ್ ಅಭಿನಯದ 'ಪದ್ಮಾವತ್' ಕಳೆದ ಗುರುವಾರ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕದೆ. ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಂಜಯ್ ಲೀಲಾ ಬಸ್ಸಾಲಿ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











