For Quick Alerts
  ALLOW NOTIFICATIONS  
  For Daily Alerts

  ಮಹೇಶ್‌ ಬಾಬು ಅನ್ನು ಹೊಗಳಿದ ರಣ್ವೀರ್ ಸಿಂಗ್: ಒಟ್ಟಿಗೆ ನಟನೆ

  |

  ನಟ ಮಹೇಶ್ ಬಾಬು ಗೆ ಸಿನಿ ಪ್ರೇಕ್ಷಕರು ಮಾತ್ರವಲ್ಲ ಸೆಲೆಬ್ರಿಟಿಗಳು ಸಹ ಅಭಿಮಾನಿಗಳೇ. ದೊಡ್ಡ ದೊಡ್ಡ ನಟರು ಸಹ ಮಹೇಶ್ ಬಾಬು ಅಂದ, ನಟನೆಯನ್ನು ಹೊಗಳಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಬಾಲಿವುಡ್ ನಟ ರಣ್ವೀರ್ ಸಿಂಗ್.

  ಹೌದು, ಶಾರುಖ್ ಖಾನ್, ಸಲ್ಮಾನ್ ಖಾನ್ ಅವರುಗಳೊಟ್ಟಿಗೆ ಉತ್ತಮ ಬಾಂದವ್ಯ ಹೊಂದಿರುವ ಮಹೇಶ್ ಬಾಬು ಈಗ ರಣ್ವೀರ್ ಸಿಂಗ್ ಅವರನ್ನೂ ಸಹ ತಮ್ಮ ವ್ಯಕ್ತಿತ್ವ ಹಾಗೂ ಪ್ರತಿಭೆಯಿಂದ ಮೋಡಿ ಮಾಡಿದ್ದಾರೆ. ನಟ ರಣ್ವೀರ್ ಸಿಂಗ್, ಮಹೇಶ್ ಬಾಬು ಅವರನ್ನು ಮನಸಾರೆ ಹೊಗಳಿದ್ದಾರೆ.

  ಇತ್ತೀಚೆಗೆ ಮಹೇಶ್ ಬಾಬು ಹಾಗೂ ರಣ್ವೀರ್ ಸಿಂಗ್ ತಂಪು ಪಾನೀಯ ಜಾಹೀರಾತೊಂದರಲ್ಲಿ ಒಟ್ಟಿಗೆ ನಟಿಸಿದ್ದಾರೆ. ಚಿತ್ರೀಕರಣದ ವೇಳೆ ಮಹೇಶ್ ಬಾಬು ಅವರೊಟ್ಟಿಗೆ ಮಾತನಾಡಿ ಸಮಯಕಳೆದಿರುವ ರಣ್ವೀರ್‌ ಸಿಂಗ್‌ಗೆ ಮಹೇಶ್ ಬಾಬು ವ್ಯಕ್ತಿತ್ವ ಬಹು ಇಷ್ಟವಾಗಿದೆಯಂತೆ.

  ಮಹೇಶ್ ಬಾಬು ಬಗ್ಗೆ ರಣ್ವೀರ್ ಸಿಂಗ್ ಪೋಸ್ಟ್

  ಮಹೇಶ್ ಬಾಬು ಬಗ್ಗೆ ರಣ್ವೀರ್ ಸಿಂಗ್ ಪೋಸ್ಟ್

  ಮಹೇಶ್ ಬಾಬು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ರಣ್ವೀರ್ ಸಿಂಗ್, 'ನಾನು ಈವರೆಗೆ ಭೇಟಿಯಾಗಿರುವ ಬೆಸ್ಟ್ ಜಂಟಲ್‌ಮೆನ್‌ ಗಳಲ್ಲಿ ಒಬ್ಬರು ಮಹೇಶ್ ಬಾಬು. ನಿಮ್ಮೊಂದಿಗೆ ಸೇರಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಅದೃಷ್ಟ. ನಿಮ್ಮೊಂದಿಗೆ ಮಾತನಾಡಿದ್ದು ಸಾಕಷ್ಟು ಜ್ಞಾನವನ್ನು ನೀಡಿತು, ಸದಾ ನಿಮ್ಮನ್ನು ಪ್ರೀತಿಸುವೆ, ಗೌರವಿಸುವೆ ಮಹೇಶ್ ಅವರೆ' ಎಂದಿದ್ದಾರೆ ರಣ್ವೀರ್ ಸಿಂಗ್.

  ಮಹೇಶ್‌ ಗೆ ಶಾರುಖ್-ಸಲ್ಮಾನ್ ಇಬ್ಬರೂ ಗೆಳೆಯರು

  ಮಹೇಶ್‌ ಗೆ ಶಾರುಖ್-ಸಲ್ಮಾನ್ ಇಬ್ಬರೂ ಗೆಳೆಯರು

  ಮಹೇಶ್ ಬಾಬು ಗೆ ಬಾಲಿವುಡ್‌ನಲ್ಲಿ ಸಾಕಷ್ಟು ಮಂದಿ ಗೆಳೆಯರಿದ್ದಾರೆ. ಅದರಲ್ಲೂ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರುಗಳು ಮಹೇಶ್ ಬಾಬು ಗೆ ಬಹಳ ಒಳ್ಳೆಯ ಗೆಳೆಯರು. ಕೆಲವು ದಿನಗಳ ಹಿಂದಷ್ಟೆ ಶಾರುಖ್ ಖಾನ್ ಅನ್ನು ಮಹೇಶ್ ಬಾಬು ಹಾಗೂ ಪತ್ನಿ ನಮ್ರತಾ ಭೇಟಿಯಾಗಿದ್ದರು. ಇನ್ನು ಮಹೇಶ್ ಬಾಬು ನಟನೆಯ 'ಪೋಕಿರಿ' ಸಿನಿಮಾವನ್ನು ಸಲ್ಮಾನ್ ಖಾನ್ ಹಿಂದಿಯಲ್ಲಿ ರೀಮೇಕ್ ಮಾಡಿ ಹಿಟ್ ಪಡೆದಿದ್ದರು.

  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬು

  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬು

  ಮಹೇಶ್ ಬಾಬು ಪ್ರಸ್ತುತ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂ ಸುಂದರಿ ಕೀರ್ತಿ ಸುರೇಶ್ ನಾಯಕಿ. ಈ ಸಿನಿಮಾದ ನಂತರ ರಾಜಮೌಳಿ ಜೊತೆಗೆ ಮೊದಲ ಬಾರಿಗೆ ಸಿನಿಮಾ ಮಾಡಲಿದ್ದಾರೆ ಮಹೇಶ್ ಬಾಬು.

  ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada
  '83' ಸಿನಿಮಾ ಬಿಡುಗಡೆಗೆ ತಯಾರಾಗಿದೆ

  '83' ಸಿನಿಮಾ ಬಿಡುಗಡೆಗೆ ತಯಾರಾಗಿದೆ

  ಇನ್ನು ರಣ್ವೀರ್ ಸಿಂಗ್ ನಟನೆಯ 83 ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದನ್ನು ಹೊರತುಪಡಿಸಿ ರಣ್ಬೀರ್ ಕಪೂರ್ ಜೊತೆಗೆ ಅಂದಾಜ್ ಅಪ್ನಾ ಅಪ್ನಾ 2, ಜಯೇಶ್ ಭಾಯ್ ಜೋರ್ದಾರ್, ತಕ್ತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಣ್ವೀರ್ ಸಿಂಗ್.

  English summary
  Bollywood actor Mahesh Babu praised Telugu super star Mahesh Babu. They Both acted in a cool drink advertisement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X