ಇಟ್ಟಿಗೆ ಬಿದ್ದರೂ ದೀಪಿಕಾಗೆ ಮುತ್ತು ಕೊಡುವುದು ಬಿಟ್ಟಿರಲಿಲ್ಲ ರಣ್ವೀರ್!

ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಬಾಲಿವುಡ್‌ನ ಕ್ಯೂಟ್ ದಂಪತಿಗಳು. ಇವರಿಬ್ಬರು ಮದುವೆಯಾಗುವ ಮುನ್ನ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಬಹಳಷ್ಟು ಕಾಲ ಪ್ರೀತಿಸಿ, ಒಟ್ಟಿಗಿದ್ದು ಬಳಿಕಷ್ಟೆ ಹಸೆಮಣೆ ಏರಿತು ಈ ಜೋಡಿ.

ನಟ ರಣ್ವೀರ್ ಸಿಂಗ್ ಖುಲ್ಲಂಖುಲ್ಲಾ ವ್ಯಕ್ತಿತ್ವದ ವ್ಯಕ್ತಿ. ಅವರ ಎನರ್ಜಿಗೆ ಬಾಲಿವುಡ್‌ನಲ್ಲಿ ಸರಿಸಾಟಿ ಯಾರೂ ಇಲ್ಲ. ಯಾವುದೇ ವಿಷಯವಾಗಲಿ ಖುಲ್ಲಂಖುಲ್ಲಾ ಮಾತನಾಡುತ್ತಾರೆ. ಮುಚ್ಚು ಮರೆ ಕಡಿಮೆ. ದೀಪಿಕಾರನ್ನು ಪ್ರೀತಿಸುತ್ತಿರುವ ವಿಚಾರವನ್ನೂ ಸಹ ಅವರು ಬಚ್ಚಿಟ್ಟಿರಲಿಲ್ಲ.

ಇದೀಗ ತಮ್ಮ ಮದುವೆಗೆ ಮುನ್ನ ಸಿನಿಮಾದ ಸೆಟ್‌ನಲ್ಲಿ ಆದ ಆಸಕ್ತಿಕರ ಘಟನೆಯೊಂದರ ಬಗ್ಗೆ ರಣ್ವೀರ್ ಸಿಂಗ್ ಮಾತನಾಡಿದ್ದಾರೆ.

 Ranveer Singh Remembered He Kisses Deepika Padukone Passionately In Ram Leela Shooting

2013 ರಲ್ಲಿ ಬಿಡಗುಡೆ ಆಗಿದ್ದ 'ರಾಮ್‌-ಲೀಲಾ' ಸಿನಿಮಾದಲ್ಲಿ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಸಿನಿಮಾದಲ್ಲಿ ರಣ್ವೀರ್ ಹಾಗೂ ದೀಪಿಕಾ ನಡುವೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಿದ್ದವು. ಲಿಪ್‌ಲಾಕ್ ದೃಶ್ಯಗಳಂತೂ ಹೇರಳವಾಗಿದ್ದವು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಣ್ವೀರ್ ಸಿಂಗ್‌ರಿಗೆ, ಶೂಟಿಂಗ್ ಮುಗಿದ ಮೇಲೂ ನಿಮಗೆ ನೆನಪಿರುವ ದೃಶ್ಯ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸುತ್ತಾ 'ರಾಮ್ ಲೀಲಾ' ಸಿನಿಮಾದ ಒಂದು ಇಂಟಿಮೇಟ್ ದೃಶ್ಯವನ್ನು ಹೆಸರಿಸಿದ್ದಾರೆ. ಆ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಏನಾಗಿತ್ತು ಎಂಬುದನ್ನೂ ವಿವರಿಸಿದ್ದಾರೆ.

ಸಿನಿಮಾದ ಒಂದು ಇಂಟಿಮೇಟ್ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ರಣ್ವೀರ್ ಹಾಗೂ ದೀಪಿಕಾ ಪರಸ್ಪರ ಮುತ್ತಿಡುತ್ತಾ ತಮ್ಮನ್ನು ತಾವು ಮರೆತು ಬಿಟ್ಟಿದ್ದರಂತೆ ಎಷ್ಟರ ಮಟ್ಟಿಗೆ ಎಂದರೆ ಶೂಟಿಂಗ್ ನಡೆಯುತ್ತಿದ್ದ ಸೆಟ್‌ಗೆ ಇಟ್ಟಿಗೆಗಳನ್ನು ಎಸೆದರೂ ರಣ್ವೀರ್ ಹಾಗೂ ದೀಪಿಕಾಗೆ ಅದರ ಅರಿವೇ ಇಲ್ಲದೆ ಮುತ್ತಿನ ಮತ್ತಿನಲ್ಲೇ ಕಳೆದು ಹೋಗಿದ್ದರಂತೆ.

''ಕೆಲವು ಸನ್ನಿವೇಶಗಳು, ದೃಶ್ಯಗಳಿರುತ್ತವೆ ಆಗ ಕಟ್ ಹೇಳಿದ ಕೂಡಲೇ ನಾವು ಆಗ ಮಾಡುತ್ತಿರುವುದು ಬಿಟ್ಟು ಆ ಜೋನ್‌ನಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆಯಂತೂ ಕಟ್ ಹೇಳುವುದು ನಮಗೆ ಡಿಸ್ಟರ್ಬ್‌ ಎನಿಸುತ್ತದೆ'' ಎಂದಿದ್ದಾರೆ ರಣ್ವೀರ್ ಸಿಂಗ್.

''ರಾಮ್‌ಲೀಲಾ' ಸಿನಿಮಾದ ಶೂಟಿಂಗ್ ವೇಳೆ ನಾನು ದೀಪಿಕಾ ಉದ್ವೇಗದಿಂದ ಮುತ್ತಿಡುವ ದೃಶ್ಯವೊಂದರಲ್ಲಿ ನಟಿಸುತ್ತಿದ್ದೆವು. ಆಗ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ನ ಕಿಟಕಿ ಗಾಜು ಒಡೆದುಕೊಂಡು ಇಟ್ಟಿಗೆಯೊಂದು ಒಳಗೆ ಬಂದು ಬಿತ್ತು, ಗಾಜುಗಳು ಪುಡಿ-ಪುಡಿ ಆದವು ಆದರೆ ನಮಗೆ ಅದ್ಯಾವುದರ ಅರಿವೂ ಇಲ್ಲದೆ ಚಿತ್ರೀಕರಣದಲ್ಲಿ ನಿರತರಾಗಿದ್ದೆವು'' ಎಂದು ನೆನಪಿಸಿಕೊಂಡಿದ್ದಾರೆ ರಣ್ವೀರ್ ಸಿಂಗ್.

ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ, 'ರಾಮ್ ಲೀಲಾ', 'ಪದ್ಮಾವತ್', 'ಭಾಜಿರಾವ್ ಮಸ್ತಾನಿ' '83' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ದೀಪಿಕಾರ 'ಫೈಂಡಿಂಗ್ ಫೆನಿ' ಸಿನಿಮಾದಲ್ಲಿ ರಣ್ವೀರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Ranveer Singh remembers Deepika and him engaged in a kissing scene passionately so they even did not notice brick fall into the room.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X