For Quick Alerts
  ALLOW NOTIFICATIONS  
  For Daily Alerts

  ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?

  |

  ಮುಂಬೈನ ಪ್ರಭಾದೇವಿ ಏರಿಯಾದಲ್ಲಿ ಬೋಮಾಂಡ್ ಟವರ್ಸ್ ನ 26ನೇ ಮಹಡಿಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 4 ಬಿ.ಹೆಚ್.ಕೆ ಫ್ಲ್ಯಾಟ್ ಹೊಂದಿದ್ದಾರೆ. 2010 ರಲ್ಲಿ ಬರೋಬ್ಬರಿ 16 ಕೋಟಿ ರೂಪಾಯಿ ಕೊಟ್ಟು ಈ ಐಷಾರಾಮಿ ಫ್ಲ್ಯಾಟ್ ನ ದೀಪಿಕಾ ಪಡುಕೋಣೆ ಖರೀದಿಸಿದ್ದರು.

  ಇದೀಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ, ಇದೇ ಬೋಮಾಂಡ್ ಟವರ್ಸ್ ನಲ್ಲಿ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್ ಬಾಡಿಗೆ ಮನೆಯೊಂದನ್ನು ಮಾಡಿದ್ದಾರೆ. ಮುಂದೆ ಓದಿರಿ...

  ಲಕ್ಷಾಂತರ ರೂಪಾಯಿ ಬಾಡಿಗೆ

  ಲಕ್ಷಾಂತರ ರೂಪಾಯಿ ಬಾಡಿಗೆ

  ಮೂರು ವರ್ಷಕ್ಕೆ ಮನೆಯನ್ನು ಬಾಡಿಗೆಗೆ ಪಡೆದಿರುವ ರಣ್ವೀರ್ ಸಿಂಗ್ ಮೊದಲೆರಡು ವರ್ಷ ತಿಂಗಳಿಗೆ 7.25 ಲಕ್ಷ ಹಾಗೂ ಕೊನೆಯ ವರ್ಷ 7.97 ಲಕ್ಷವನ್ನು ಬಾಡಿಗೆಯಾಗಿ ನೀಡುವುದಾಗಿ ಒಪ್ಪಿಕೊಂಡಿದ್ದಾರೆ.

  ಅಬ್ಬಬ್ಬಾ! ಬಾಲಿವುಡ್ ಸ್ಟಾರ್ಸ್ ಬಾಡಿಗಾರ್ಡ್ಸ್ ಸಂಬಳ ಕೋಟಿ ಕೋಟಿ, ಯಾರು ಹೆಚ್ಚು?ಅಬ್ಬಬ್ಬಾ! ಬಾಲಿವುಡ್ ಸ್ಟಾರ್ಸ್ ಬಾಡಿಗಾರ್ಡ್ಸ್ ಸಂಬಳ ಕೋಟಿ ಕೋಟಿ, ಯಾರು ಹೆಚ್ಚು?

  ಕಾರಣ ಏನು.?

  ಕಾರಣ ಏನು.?

  ಮುಂಬೈನ ಪ್ರತಿಷ್ಟಿತ ಬೋಮಾಂಡ್ ಟವರ್ಸ್ ನಲ್ಲಿ ಪತ್ನಿ ದೀಪಿಕಾ ಪಡುಕೋಣೆ ಸ್ವಂತ ಮನೆ ಹೊಂದಿದ್ದರೂ, ಅದೇ ಬಿಲ್ಡಿಂಗ್ ನಲ್ಲಿ ಪತಿ ರಣ್ವೀರ್ ಸಿಂಗ್ ಲಕ್ಷಾಂತರ ರೂಪಾಯಿ ಕೊಟ್ಟು ಪ್ರತ್ಯೇಕ ಬಾಡಿಗೆ ಮನೆ ಯಾಕೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಲಭ್ಯವಾಗಿಲ್ಲ.

  'ಚಪಾಕ್' ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಟಿ ದೀಪಿಕಾ ಪಡುಕೋಣೆ'ಚಪಾಕ್' ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಟಿ ದೀಪಿಕಾ ಪಡುಕೋಣೆ

  ಮದುವೆ ಬಳಿಕ ಇಲ್ಲೇ ಶಿಫ್ಟ್ ಆಗಿದ್ದ ರಣ್ವೀರ್

  ಮದುವೆ ಬಳಿಕ ಇಲ್ಲೇ ಶಿಫ್ಟ್ ಆಗಿದ್ದ ರಣ್ವೀರ್

  2018 ರಲ್ಲಿ ಇಟಲಿಯ ಲೇಕ್ ಕೋಮೋದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆ ಬಳಿಕ ದೀಪಿಕಾ ನೆಲೆಸಿದ್ದ ಫ್ಲ್ಯಾಟ್ ಗೆ ರಣ್ವೀರ್ ಸಿಂಗ್ ಶಿಫ್ಟ್ ಆಗಿದ್ದರು ಎಂದು ವರದಿ ಆಗಿತ್ತು. ಈಗ ಅಲ್ಲೇ ರಣ್ವೀರ್ ಸಿಂಗ್ ಬಾಡಿಗೆ ಮನೆ ಮಾಡಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

  ಇಂತಹ ಸಿನಿಮಾಗಳನ್ನು ದೀಪಿಕಾ ಪಡುಕೋಣೆ ಒಪ್ಪಿಕೊಳ್ಳುವುದೇ ಇಲ್ಲವಂತೆಇಂತಹ ಸಿನಿಮಾಗಳನ್ನು ದೀಪಿಕಾ ಪಡುಕೋಣೆ ಒಪ್ಪಿಕೊಳ್ಳುವುದೇ ಇಲ್ಲವಂತೆ

  ಸಿನಿಮಾಗಳಲ್ಲಿ ಪತಿ-ಪತ್ನಿ ಬಿಜಿ

  ಸಿನಿಮಾಗಳಲ್ಲಿ ಪತಿ-ಪತ್ನಿ ಬಿಜಿ

  ಸದ್ಯ ರಣ್ವೀರ್ ಸಿಂಗ್ ಕಪಿಲ್ ದೇವ್ ಜೀವನ ಚರಿತ್ರೆ ಆಧಾರಿತ '83' ಮತ್ತು 'ತಖ್ತ್' ಚಿತ್ರಗಳಲ್ಲಿ ಬಿಜಿಯಿದ್ದಾರೆ. '83' ಚಿತ್ರದಲ್ಲಿ ಕಪಿಲ್ ದೇವ್ ಆಗಿ ರಣ್ವೀರ್ ಸಿಂಗ್ ಅಭಿನಯಿಸಿದ್ದರೆ, ಕಪಿಲ್ ದೇವ್ ಪತ್ನಿಯಾಗಿ ದೀಪಿಕಾ ನಟಿಸಿದ್ದಾರೆ. ಇನ್ನೂ ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ 'ಚಪಾಕ್' ಚಿತ್ರ ಜನವರಿ 10 ರಂದು ಬಿಡುಗಡೆ ಆಗಲಿದೆ.

  Read more about: ranveer singh deepika padukone
  English summary
  According to the reports, Bollywood Actor Ranveer Singh rents flats for Rs.7.25 lakh per month in Wife Deepika Padukone's building.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X