For Quick Alerts
  ALLOW NOTIFICATIONS  
  For Daily Alerts

  ರಣ್ವೀರ್ ವಿಚಿತ್ರ ಕಾಸ್ಟೂಮ್ ನೋಡಿ ಭಯದಿಂದ ಕಣ್ಣೀರು ಹಾಕಿದ ಮಗು

  |

  'ಗಲ್ಲಿ ಬಾಯ್' ರಣ್ವೀರ್ ಸಿಂಗ್ ಒಂಥರಾ ಡಿಫರೆಂಟ್. ಅವರ ಕಾಸ್ಟೂಮ್, ಅವರ ಸ್ಟೈಲ್ ಎಲ್ಲರಿಗಿಂತ ವಿಭಿನ್ನವಾಗಿ ಇರುತ್ತದೆ. ಕೆಲವು ಬಾರಿ ವಿಭಿನ್ನ ಎನ್ನುವುದನ್ನು ಮೀರಿ, ವಿಚಿತ್ರವೂ ಆಗುತ್ತದೆ.

  ರಣ್ವೀರ್ ಸಿಂಗ್ ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಬೇರೆ ಬೇರೆ ಶೈಲಿಯ ಬಟ್ಟೆ ಹಾಗೂ ಸ್ಟೈಲ್ ಗಳು ಮೂಲಕ ಆಕರ್ಷಣೆಗೆ ಕಾರಣ ಆಗಿದ್ದಾರೆ. ಇದೀಗ ಅವರ ವಿಚಿತ್ರ ಸ್ಟೈಲ್ ನೋಡಿ ಒಂದು ಸಣ್ಣ ಮಗು ಭಯದಿಂದ ಕಣ್ಣೀರು ಹಾಕಿದೆ.

  ಉಪೇಂದ್ರ ಸ್ಟೈಲ್ ನಲ್ಲಿ 'ಗಲ್ಲಿ ಬಾಯ್' ರಣ್ವೀರ್ ಸಿಂಗ್ಉಪೇಂದ್ರ ಸ್ಟೈಲ್ ನಲ್ಲಿ 'ಗಲ್ಲಿ ಬಾಯ್' ರಣ್ವೀರ್ ಸಿಂಗ್

  ಈ ತಮಾಷೆ ಘಟನೆ ಇತ್ತೀಚಿಗೆ ಮುಂಬೈನಲ್ಲಿ ನಡೆಯುತ್ತಿತ್ತು. ಮುಂಬೈನ ಡಬ್ಬಿಂಗ್ ಸ್ಟೂಡಿಯೋಯೊಂದರಿಂದ ಕೆಲಸ ಮುಗಿಸಿಕೊಂಡ, ನಟ ರಣ್ವೀರ್ ಆಚೆ ಬಂದರು. ಈ ವೇಳೆ ಅವರ ಕಾರ್ ಬಳಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು, ಅವರಿಗಾಗಿ ಕಾಯುತ್ತಿದ್ದರು.

  ಈ ಗುಂಪಿನಲ್ಲಿ ಒಬ್ಬ ತಂದೆ ತನ್ನ ಮಗುವನ್ನು ಎತ್ತಿಕೊಂಡು ನಿಂತಿದ್ದರು. ಆ ಕಡೆಯಿಂದ ಬಂದ ರಣ್ವೀರ್, ಮಗುವಿನ ಹತ್ತಿರಕ್ಕೆ ಬಂದರು. ಆದರೆ, ರಣ್ವೀರ್ ಅವತಾರ ನೋಡಿದ ಮಗು, ಭಯಪಟ್ಟು ಅಳಲು ಶುರು ಮಾಡಿತು. ನಂತರ ಏನು ಮಾಡುವುದು ತಿಳಿಯದೆ, ರಣ್ವೀರ್ ತಮ್ಮ ಕಾರ್ ಹತ್ತಿ ಮುಂದೆ ನಡೆದರು.

  ಕೆಂಪು ಬಣ್ಣದ ಪುಲ್ ಓವರ್, ಕಪ್ಪು ಕೂಲಿಂಗ್ ಗ್ಲಾಸ್, ಕಪ್ಪು ಬಣ್ಣದ ಪ್ಯಾಂಟ್ ಅನ್ನು ರಣ್ವೀರ್ ಧರಿಸಿದ್ದರು. ಅವರ ಪುಲ್ ಓವರ್ ಕಾಲಿನ ವರೆಗೆ ಇದ್ದು, ತುಂಬ ವಿಚಿತ್ರವಾಗಿ ಕಾಣುತ್ತಿತ್ತು.

  ಈ ಸ್ಟಾರ್ ನಟ ಯಾರು ಅಂತ ಗುರುತಿಸಬಲ್ಲಿರಾ?ಈ ಸ್ಟಾರ್ ನಟ ಯಾರು ಅಂತ ಗುರುತಿಸಬಲ್ಲಿರಾ?

  ಅಂದಹಾಗೆ, ರಣ್ವೀರ್ ಸಿಂಗ್ ಸದ್ಯ, '83' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಭಾರತ ಕ್ರಿಕೆಟ್ ತಂಡದ ಮೊದಲ ವಿಶ್ವಕಪ್ ಕಥೆ ಹೇಳುತ್ತಿದೆ. ರಣ್ವೀರ್ ಇಲ್ಲ ಕಪಿಲ್ ದೇಪ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ವಿಡಿಯೋ ನೋಡಿ

  View this post on Instagram

  Lil kiddo got scared of i Baba 🙄🤔

  A post shared by Viral Bhayani (@viralbhayani) on

  English summary
  Bollywood actor Ranveer Singh's Oversized Red Hoodie Look Leaves Kid Crying.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X