ಬೇರ್ ಬಾಡಿ ಫೋಟೋ ಶೇರ್ ಮಾಡಿದ ರಣ್ವೀರ್ ಸಿಂಗ್: ಪತ್ನಿ ದೀಪಿಕಾ ಹೇಳಿದ್ದೇನು?
ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಡ್ಯಾಶಿಂಗ್ ಫೋಟೋವನ್ನು ಶೇರ್ ಮಾಡಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ರಣ್ವೀರ್ ಸಿಂಗ್ ಬೇರ್ ಬಾಡಿ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಉದ್ದವಾದ ಕೂದಲು ಬಿಟ್ಟಿರುವ ರಣ್ವೀರ್ ಶರ್ಟ್ ಲೆಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಾರ್ಕ್ ಶೇಡ್ ನಲ್ಲಿ ಈ ಫೋಟೋ ಕ್ಲಿಕ್ಕಿಸಲಾಗಿದ್ದು, ರಣ್ವೀರ್ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದಾರೆ.
ರಣ್ವೀರ್ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ರಣ್ವೀರ್ ಹಾಟ್ ಲುಕ್ ಗೆ ಫಿದಾ ಆಗಿದ್ದಾರೆ. ಅಂದಹಾಗೆ ರಣ್ವೀರ್ ಆಗಾಗ ಶರ್ಟ್ ಲೆಸ್ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ.

ಈ ಬಾರಿ ಫೋಟೋ ಶೇರ್ ಮಾಡಿ ರಣ್ವೀರ್, 'ಡೌನ್ ಅಂಡ್ ಡರ್ಟಿ ಮಂಡೇ ಮೋಟಿವೇಶನ್' ಎಂದು ಕ್ಯಾಪ್ಷನ್ ನೀಡಿದ್ದಾರೆ. ವಿಶೇಷ ಎಂದರೆ ರಣ್ವೀರ್ ಈ ಫೋಟೋಗೆ ಪತ್ನಿ ದೀಪಿಕಾ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಫೋಟೋಗೆ ಕಾಮೆಂಟ್ ಮಾಡಿರುವ ದೀಪಿಕಾ, 'B.I.G' ಎಂದು ಹಾಕಿದ್ದಾರೆ. ಹೀಗೆಂದರೆ ಏನು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ದೀಪಿಕಾ ರಿವೀಲ್ ಮಾಡಿಲ್ಲ.
ಲಾಕ್ ಡೌನ್ ಬಳಿಕ ರಣ್ವೀರ್ ಸಿಂಗ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಸೆಟ್ ಗೆ ಎಂಟ್ರಿ ಕೊಟ್ಟ ಬಳಿಕ ಫೋಟೋವನ್ನು ಹಂಚಿಕೊಂಡಿದ್ದರು. ರಣ್ವೀರ್ ಸಿಂಗ್ ಸದ್ಯ ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ 83 ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.


Click it and Unblock the Notifications











