For Quick Alerts
  ALLOW NOTIFICATIONS  
  For Daily Alerts

  ವಾವ್.. ರಣ್ವೀರ್ ಸಿಂಗ್ ಆಗಿಬಿಟ್ರು ಕಪಿಲ್ ದೇವ್

  |
  Ranveer Singh's Nataraja Shot impresses every cricket fan | Oneindia Kannada

  ನಟ ರಣ್ವೀರ್ ಸಿಂಗ್ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶೈಲಿ ನೋಡಿದರೆ, ಅಚ್ಚರಿ ಆಗುತ್ತದೆ. ಪಾತ್ರಗಳ ಆಯ್ಕೆ, ಅದನ್ನು ಅವರ ತೆರೆ ಮೇಲೆ ತರುವ ರೀತಿ ನೋಡಿದರೆ, ವಾಟ್ ಎ ಆಕ್ಟರ್ ಅನಿಸುತ್ತದೆ.

  ಸದ್ಯ, '83' ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ. ಇದು ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವ ಕಪ್ ಗೆದ್ದ ಬಗ್ಗೆ ಬರುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ.

  ಸಮಾರಂಭಗಳಿಗೆ ಬರಲು ರಣ್ವೀರ್ ಸಿದ್ಧ: ಬುಕ್ಕಿಂಗ್ ಗಾಗಿ ದೀಪಿಕಾ ಸಂಪರ್ಕಿಸಿಸಮಾರಂಭಗಳಿಗೆ ಬರಲು ರಣ್ವೀರ್ ಸಿದ್ಧ: ಬುಕ್ಕಿಂಗ್ ಗಾಗಿ ದೀಪಿಕಾ ಸಂಪರ್ಕಿಸಿ

  ಕಪಿಲ್ ದೇವ್ ಪಾತ್ರದ ಒಂದು ಫೋಟೋ ಈ ಹಿಂದೆ ಬಿಡುಗಡೆ ಆಗಿತ್ತು. ಬೌಲಿಂಗ್ ಮಾಡುತ್ತಿರುವ ಫೋಟೋ ಇದಾಗಿತ್ತು. ಇದೀಗ ಕಪಿಲ್ ದೇವ್ ಬ್ಯಾಟ್ ನಟರಾಜ ಶಾಟ್ ಬಾರಿಸಿದ್ದಾರೆ. ಕಪಿಲ್ ದೇವ್ ಪಾತ್ರದ ಮತ್ತೊಂದು ಫೋಟೋವನ್ನು ರಣ್ವೀರ್ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಈ ಒಂದು ಫೋಟೋವೇ ರಣ್ವೀರ್ ಪಾತ್ರದ ತಯಾರಿ, ಅವರ ಡೆಡಿಕೇಶನ್ ಬಗ್ಗೆ ಹೇಳುತ್ತಿದೆ. ಕಪಿಲ್ ದೇವ್ ರೀತಿಯೇ ಈ ಫೋಟೋದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನು ಫರ್ಫೆಕ್ಟ್ ಆಗಿ ತೆರೆ ಮೇಲೆ ಬರುತ್ತಿದ್ದಾರೆ.

  'ಭಜರಂಗಿ ಭಾಯಿಜಾನ್' ಖ್ಯಾತಿಯ ಕಬೀರ್ ಖಾನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ ಸಿನಿಮಾದ ನಾಯಕಿ ಆಗಿದ್ದಾರೆ. ತಮಿಳು ನಟ ಜೀವ ಬ್ಯಾಟ್ಸ್ ಮನ್ ಶ್ರೀಕಾಂತ್ ಕ್ರಿಷ್ಣಮಚಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಣ್ವೀರ್ ವಿಚಿತ್ರ ಕಾಸ್ಟೂಮ್ ನೋಡಿ ಭಯದಿಂದ ಕಣ್ಣೀರು ಹಾಕಿದ ಮಗುರಣ್ವೀರ್ ವಿಚಿತ್ರ ಕಾಸ್ಟೂಮ್ ನೋಡಿ ಭಯದಿಂದ ಕಣ್ಣೀರು ಹಾಕಿದ ಮಗು

  ಉಳಿದಂತೆ, ಅಂದಿನ ತಂಡದಲ್ಲಿದ್ದ ಸುನೀಲ್ ಗವಾಸ್ಕರ್, ಎಂ ಅಮರ್ ನಾಥ್, ರೋಜರ್ ಬಿನ್ನಿ, ಸೈಯದ್ ಕೀರ್ಮಾನಿ, ರವಿ ಶಾಸ್ತ್ರಿ, ದಿಲೀಪ್ ವೆಂಗವಾಸ್ಕರ್ ಅಂತಹ ಆಟಗಾರರಿದ್ದು, ಇವರುಗಳ ಪಾತ್ರದಲ್ಲಿ ಯಾರು ಅಭಿನಯಿಸಬಹುದು ಎಂಬ ಕುತೂಹಲ ಕಾಡ್ತಿದೆ.

  English summary
  83 movie: Bollywood actor Ranveer Singh shares his Kapil Dev character photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X