ಅಲ್ಲು ಅರ್ಜುನ್ 'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ

ತೆಲುಗು ಸ್ಡೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ "ಅಲಾ ವೈಕುಂಠಪುರಂಲೋ" ಸಿನಿಮಾ ರಿಲೀಸ್ ಆಗಿ ತಿಂಗಳುಗಳೆ ಆಗಿದೆ. ಈಗಲೂ ಈ ಸಿನಿಮಾ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಈ ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಾಣುತ್ತಿದ್ದಂತೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದೆ.

ಇತ್ತೀಚಿಗೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳು ಬಾಲಿವುಡ್ ಗೆ ರಿಮೇಕ್ ಆಗುತ್ತಿವೆ. ಸದ್ಯ ಸ್ಟೈಲಿಶ್ ಸ್ಟಾರ್ ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಂಲೋ' ಸಹ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ ಎನ್ನುವ ಮಾತು ಸಾಕಷ್ಟು ದಿನಗಳಿಂದ ಕೇಳಿ ಬರುತ್ತಿದೆ.

ಸದ್ಯ ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಅಲಾ ವೈಕುಂಠಪುರಂಲೋ ಹಿಂದಿ ರಿಮೇಕ್ ನಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ 8 ಕೋಟಿಗೆ ಚಿತ್ರದ ರಿಮೇಕ್ ರೈಟ್ಸ್ ಮಾರಾಟವಾಗಿದ್ದು, ಹಿಂದಿಯಲ್ಲಿ ಸಿನಿಮಾ ಬರುವುದು ಪಕ್ಕಾ ಆಗಿದೆ.

 Ranveer Singh Star In Allu Arjun Starrers Ala Vaikunthapurramuloo Hindi Remake

ಈ ಮೊದಲು ಅಲಾ ವೈಕುಂಠಪುರಂಲೋ ಹಿಂದಿ ರಿಮೇಕ್ ನಲ್ಲಿ ನಟ ಕಾರ್ತಿಕ್ ಆರ್ಯನ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಆದರೀಗ ರಣ್ವೀರ್ ಸಿಂಗ್ ಹೆಸರು ವೈರಲ್ ಆಗಿದೆ. ಆದರೆ ರಣ್ವೀರ್ ಸಿಂಗ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಹಾಗಾಗಿ ರಿಮೇಕ್ ಸಿನಿಮಾದಲ್ಲಿ ರಣ್ವೀರ್ ಕಾಣಿಸಿಕೊಳ್ಳುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಒಟ್ನಲ್ಲಿ ಹಾಡುಗಳ ಮೂಲಕ ಕ್ರೇಜ್ ಹುಟ್ಟುಹಾಕಿರುವ ಅಲಾ ವೈಕುಂಠಪುರಂಲೋ ಬಾಲಿವುಡ್ ನಲ್ಲಿಯೂ ಸದ್ದು ಮಾಡುತ್ತಿದೆ. ಅಲ್ಲು ಅರ್ಜುನ್ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಳ್ಳುತ್ತಾರೋ ಅಥವಾ ಕಾರ್ತಿಕ್ ಆರ್ಯನ್ ಕಾಣಿಸಿಕೊಳ್ಳುತ್ತಾರೋ ಎನ್ನುವುದು ಕಾದುನೋಡಬೇಕು.

More from Filmibeat

English summary
Bollywood Actor Ranveer Singh star In Allu Arjun starrer's Ala Vaikunthapurramuloo Hindi remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X