Cirkus Trailer: 'ಎಲೆಕ್ಟ್ರಿಕ್ ಮ್ಯಾನ್' ರಣ್‌ವೀರ್ ಕಾಮಿಡಿ ಶಾಕ್: ದೀಪಿಕಾ ಪಡುಕೋಣೆ ಸರ್‌ಪ್ರೈಸ್ ಡ್ಯಾನ್ಸ್ ಕಿಕ್

ರೋಹಿತ್ ಶೆಟ್ಟಿ ಬಾಲಿವುಡ್ ಪ್ರೇಕ್ಷಕರಿಗೆ ತೆರೆಮೇಲೆ 'ಸರ್ಕಸ್' ಶೋ ತೋರಿಸೋಕೆ ಬರ್ತಿದ್ದಾರೆ. ರಣ್‌ವೀರ್ ಸಿಂಗ್ 'ಎಲೆಕ್ಟ್ರಿಕ್ ಮ್ಯಾನ್' ಆಗಿ ಏನೇನೋ ಕಸರತ್ತು ಮಾಡಿ ನಗುವಿನ ಕಚಗುಳಿ ಇಡೋಕೆ ರೆಡಿಯಾಗಿದ್ದಾರೆ. ಸದ್ಯ 'ಸರ್ಕಸ್' ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ.

'83' ಹಾಗೂ 'ಜಯೆಶ್‌ಭಾಯ್ ಜೋರ್‌ದಾರ್' ಸಿನಿಮಾಗಳ ಸೋಲಿನ ನಂತರ ರಣ್‌ವೀರ್ ಸಿಂಗ್ ನಟನೆಯ ತಾಜಾ ಸಿನಿಮಾ 'ಸರ್ಕಸ್'. ರೋಹಿತ್ ಶೆಟ್ಟಿ ಈ ಕಾಮೆಡಿ ಎಂಟರ್‌ಟೈನರ್‌ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ರಣ್‌ವೀರ್ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಜಾನಿ ಲಿವರ್, ವರುಣ್ ಶರ್ಮಾ, ಸಂಜಯ್ ಮಿಶ್ರಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೂರುವರೆ ನಿಮಿಷದ ಟ್ರೈಲರ್ ಸಖತ್ ಮಜವಾಗಿದೆ.

ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್‌ಗೆ 'ದೃಶ್ಯಂ -2' ಸಕ್ಸಸ್ ಕೊಂಚಮಟ್ಟಿಗೆ ಸಮಾಧಾನ ತಂದಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ 'ಸರ್ಕಸ್' ಸಿನಿಮಾ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ರಿಲಯನ್ಸ್ ಹಾಗೂ ಟೀ ಸೀರಿಸ್ ಜೊತೆ ಸೇರಿ ಸ್ವತಃ ರೋಹಿತ್ ಶೆಟ್ಟಿ ಸಿನಿಮಾ ನಿರ್ಮಿಸಿದ್ದಾರೆ.

ಪಕ್ಕಾ ಕಾಮಿಡಿ ಎಂಟರ್‌ಟ್ರೈನರ್

ಪಕ್ಕಾ ಕಾಮಿಡಿ ಎಂಟರ್‌ಟ್ರೈನರ್

ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಇಡೀ ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಚಿತ್ರದಲ್ಲಿ 'ಸರ್ಕಸ್' ಕಲಾವಿದನ ಪಾತ್ರದಲ್ಲಿ ರಣ್‌ವೀರ್ ಸಿಂಗ್ ನಟಿಸಿದ್ದಾರೆ. ಆತನ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿರುತ್ತದೆ. ತನಗಿರುವ ಸೂಪರ್ ಪವರ್‌ನಿಂದ ಆತ ಮಾಡುವ ಸಾಹಸಗಳು 'ಸರ್ಕಸ್‌'ನ ಹೈಲೆಟ್ ಆಗಿದೆ. 'ಎಲೆಕ್ಟ್ರಿಕ್ ಮ್ಯಾನ್' ಆಗಿ ತನಗಿರುವ ಸೂಪರ್ ಪವರ್‌ನಿಂದ ಏನೆಲ್ಲಾ ಮಾಡ್ತಾನೆ? ಮುಂದೆ ಅದೇ ಪವರ್ ಆತನಿಗೆ ಹೇಗೆಲ್ಲಾ ಸಮಸ್ಯೆ ಆಗುತ್ತೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಅವಳಿ ಜವಳಿ ಆಟ ಬೊಂಬಾಟ

ಅವಳಿ ಜವಳಿ ಆಟ ಬೊಂಬಾಟ

'ಸರ್ಕಸ್‌' ಚಿತ್ರದಲ್ಲಿ ರಣ್‌ವೀರ್ ಸಿಂಗ್ ಹಾಗೂ ವರುಣ್ ಶರ್ಮಾ ಇಬ್ಬರೂ ಡಬಲ್‌ ರೋಲ್‌ಗಳಲ್ಲಿ ಮಿಂಚಿದ್ದಾರೆ. ಅವಳಿ ಜವಳಿಯಿಂದ ಏನೆಲ್ಲಾ ಗೊಂದಲ ಶುರುವಾಗುತ್ತದೆ ಅನ್ನುವುದನ್ನು ತಮಾಷೆಯಾಗಿ ತೋರಿಸುವ ಪ್ರಯತ್ನ ಮಾಡಲಾಗ್ತಿದೆ. 60ರ ದಶಕದಲ್ಲಿ 'ಸರ್ಕಸ್‌' ಕಥೆಯನ್ನು ಹೇಳಲಾಗುತ್ತಿದೆ. ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಬಹುತೇಕ ಸೆಟ್‌ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಗಾಢ ಬಣ್ಣಗಳನ್ನು ಬಳಸಿ ರೋಹಿತ್ ಶೆಟ್ಟಿ ಹೋಳಿ ಆಟ ಆಡಿದ್ದಾರೆ.

'ಸರ್ಕಸ್‌' ಚಿತ್ರದಲ್ಲಿ ದೀಪಿಕಾ ಸರ್‌ಪ್ರೈಸ್

'ಸರ್ಕಸ್‌' ಚಿತ್ರದಲ್ಲಿ ದೀಪಿಕಾ ಸರ್‌ಪ್ರೈಸ್

ಚಿತ್ರದಲ್ಲಿ ರಣ್‌ವೀರ್ ಸಿಂಗ್‌ಗೆ ನಾಯಕಿಯರಾಗಿ ಪೂಜಾ ಹೆಗ್ಡೆ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಆದರೆ ಸಾಂಗ್‌ ಒಂದರಲ್ಲಿ ರಣ್‌ವೀರ್‌ ಸಿಂಗ್ ಜೊತೆ ಪತ್ನಿ ದೀಪಿಕಾ ಪಡುಕೋಣೆ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. 'ಕರೆಂಟ್ ಲಗಾರೇ' ಎಂದು ಇಬ್ಬರೂ ಹಾಡಿ ಕುಣಿದಿದ್ದಾರೆ. ಅಭಿಮಾನಿಗಳಿಗೆ ಇದು ನಿಜಕ್ಕೂ ಸರ್‌ಪ್ರೈಸ್. ಇನ್ನು ಅಜಯ್ ದೇವಗನ್ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಫನ್ ರೋರಲ್ ಕೋಸ್ಟರ್ ರೈಡ್

ಫನ್ ರೋರಲ್ ಕೋಸ್ಟರ್ ರೈಡ್

'ಸರ್ಕಸ್‌' ಪಕ್ಕಾ ಬಾಲಿವುಡ್ ಸ್ಟೈಲ್ ಮಸಾಲಾ ಕಾಮಿಡಿ ಸಿನಿಮಾ. ದೇವಿ ಶ್ರೀ ಪ್ರಸಾದ್, ಬಾದ್‌ಶಾ, ಲಿಜೋ ಜಾರ್ಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನು ಜಾನಿ ಲಿವರ್ ಒನ್‌ಲೈನರ್ಸ್ ಪ್ರೇಕ್ಷಕರಿಗೆ ಮಜಾ ಕೊಡುವಂತಿದೆ. ಈ ವರ್ಷ ಜುಲೈನಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಶೂಟಿಂಗ್ ತಡವಾಗಿ ಇದೀಗ ರಿಲೀಸ್‌ಗೆ ರೆಡಿಯಾಗಿದೆ.

More from Filmibeat

English summary
Ranveer Singh Starrer Cirkus Trailer Released. The film is based on super hit film 'Angoor', which in turn was a loose adaptation of William Shakespeare's play 'The Comedy of Errors'. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X