ದೀಪಿಕಾ ಪಡುಕೋಣೆ NCB ವಿಚಾರಣೆ ಬಳಿಕ ಮೊದಲ ಬಾರಿಗೆ ಟ್ವೀಟ್ ಮಾಡಿದ ಪತಿ ರಣ್ವೀರ್ ಸಿಂಗ್

ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್ ಸಿ ಬಿ ವಿಚಾರಣೆ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ನಟಿ ದೀಪಿಕಾ ಹೆಸರು ಕೇಳಿಬರುತ್ತಿದ್ದಂತೆ ದೀಪಿಕಾ ಅಭಿಮಾನಿಗಳು ಸೇರಿದಂತೆ ಇಡೀ ಬಾಲಿವುಡ್ ಗೆ ಶಾಕ್ ಆಗಿತ್ತು. ಆದರೀಗ ವಿಚಾರಣೆ ಮುಗಿಸಿ ಮತ್ತೆ ದೀಪಿಕಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಇತ್ತ ಪತಿ ರಣ್ವೀರ್ ಸಿಂಗ್ ಸಹ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಎನ್ ಸಿ ಬಿ ನೋಟಿಸ್ ನೀಡಿದ ಬಳಿಕ ರಣ್ವೀರ್ ಪತ್ನಿಯನ್ನು ಗೋವಾದಿಂದ ಮುಂಬೈಗೆ ಕರೆದುಕೊಂಡು ಬರುವಾಗ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಇದಕ್ಕು ಮೊದಲು ಅಥವಾ ಬಳಿಕ ರಣ್ವೀರ್ ಸಿಂಗ್ ಲಾಕ್ ಡೌನ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದೀಗ ರಣ್ವೀರ್ ಅನೇಕ ತಿಂಗಳುಗಳ ಬಳಿಕ ಟ್ವಿಟ್ಟರ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಬಳಿಕ ರಣ್ವೀರ್ ಸಿಂಗ್ ಯಾವುದೇ ಟ್ವೀಟ್ ಮಾಡಿರಲಿಲ್ಲ. ಕೊನೆಯದಾಗಿ ಸುಶಾಂತ್ ಸಿಂಗ್ ಆತ್ಮಕ್ಕೆ ಶಾಂತಿ ಕೋರಿ ರಣ್ವೀರ್ ಟ್ವೀಟ್ ಮಾಡಿದ್ದರು. ಇದೀಗ ಅನೇಕ ತಿಂಗಳ ಬಳಿಕ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

Ranveer Singh Tweets for the First Time After NCB Summoned Deepika Padukone

ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವ ಮತ್ತು ಆರ್ಥಿಕತೆಯನ್ನು ಪುನಃ ಬಲಪಡಿಸುವ ಬಗ್ಗೆ ನರೇಂದ್ರ ಮೋದಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಅಭಿಯಾನಕ್ಕೆ ರಣ್ವೀರ್ ಸಿಂಗ್ ಕೈ ಜೋಡಿಸಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಕಲಾವಿದರು ಈ ಅಭಿಯಾನಕ್ಕೆ ಕೈ ಜೋಡಿದ್ದಾರೆ. ಇದೀಗ ರಣ್ವೀರ್ ಸಿಂಗ್ ಕೂಡ ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಅನ್ನು ಶೇರ್ ಮಾಡಿ ಕೊರೊನಾ ವಿರುದ್ಧ ಹೋರಾಟಕ್ಕೆ ಒಂದಾಗೋಣ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ದೀಪಿಕಾ ಎನ್ ಸಿ ಬಿ ವಿಚಾರಣೆ ಎದುರಿಸಿದ ಬಗ್ಗೆ ರಣ್ವೀರ್ ಎಲ್ಲಿಯೂ ಮಾತನಾಡಿರಲಿಲ್ಲ. ಮೋದಿ ಅಭಿಯಾನಕ್ಕೆ ಕೈ ಜೋಡಿಸುವ ರಣ್ವೀರ್ 4 ತಿಂಗಳ ಬಳಿಕ ಟ್ವಿಟ್ಟರ್ ನಲ್ಲಿ ಅಕ್ವೀಟ್ ಆಗಿದ್ದಾರೆ. ಸಿನಿಮಾದ ವಿಚಾರಕ್ಕೆ ಬರುವುದಾದರೆ ರಣ್ವೀರ್ ಅಭಿನಯದ '83' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಸಹ ನಟಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಇನ್ನು 'ಜಯೇಶ್ ಭಾಯ್ ಜೋರ್ದಾರ್' ಮತ್ತು 'ಸೂರ್ಯವಂಶಿ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಣ್ವೀರ್ ಬ್ಯುಸಿಯಾಗಿದ್ದಾರೆ.

Recommended Video

ಎಷ್ಟೇ ಪ್ರಯತ್ನ ಪಟ್ರು KGF ತಂಡದಿಂದ ಇದನ್ನು ತಡೆಯೋಕೇ ಆಗ್ತಿಲ್ಲಾ | Filmibeat Kannada

More from Filmibeat

English summary
Actor Ranveer Singh Tweets for the First Time After NCB Summoned Deepika Padukone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X