₹300 ಕೋಟಿ ಅಲ್ಲ ಅದಕ್ಕಿಂತ ಜಾಸ್ತಿ; ತಲೈವಾ, ಪ್ರಭಾಸ್, ಶಾರುಖ್ ಹಿಂದಿಕ್ಕಿದ 'ಧುರಂಧರ್' ರಣ್ವೀರ್ ಸಂಭಾವನೆ

ಬಾಲಿವುಡ್ ಚಿತ್ರರಂಗಕ್ಕೆ ಹೊಸ ಬಾಕ್ಸಾಫೀಸ್ ಸುಲ್ತಾನ್ ಸಿಕ್ಕಿದ್ದಾರೆ. ಖಾನ್‌ತ್ರಯರು ಅಲ್ಲ, ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಕೂಡ ಅಲ್ಲ. ರಣ್ವೀರ್ ಸಿಂಗ್ ಈಗ ಬಾಲಿವುಡ್‌ನ ಹೊಸ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. 'ಧುರಂಧರ್' ಸರಣಿ ಸಿನಿಮಾಗಳು 3000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಗೊತ್ತೇಯಿದೆ. ಹಮ್ಜಾ ಅಲಿ ಮಜಾರಿ ಪಾತ್ರದಲ್ಲಿ ರಣ್ವೀರ್ ನಟನೆ ಮರೆಯೋಕೆ ಸಾಧ್ಯವಿಲ್ಲ. ಚಿತ್ರಕ್ಕಾಗಿ ಭಾರೀ ಮೊತ್ತದ ಸಂಭಾವನೆ ಅವರಿಗೆ ಸಿಕ್ಕಿದೆ.

ರಜನಿಕಾಂತ್, ಸಲ್ಮಾನ್ ಖಾನ್, ಪ್ರಭಾಸ್, ಶಾರುಖ್ ಖಾನ್, ಅಲ್ಲು ಅರ್ಜುನ್ ಹಾಗೂ ಯಶ್ ರೀತಿಯ ಸ್ಟಾರ್ಸ್ ಸಂಭಾವನೆ 100 ಕೋಟಿ ರೂ. ಗಡಿ ದಾಟಿದೆ ಎನ್ನುವ ಮಾತುಗಳು ಪದೇ ಪದೆ ಕೇಳಿ ಬರುತ್ತದೆ. ಈಗ ಅವರನ್ನೆಲ್ಲಾ ಹಿಂದಿಕ್ಕಿ ರಣ್ವೀರ್ ಸಿಂಗ್ ಹೊಸ ದಾಖಲೆ ಬರೆದಿದ್ದಾರೆ. 'ಧುರಂಧರ್' ಸರಣಿ ಚಿತ್ರಗಳಿಗಾಗಿ ಸಂಭಾವನೆ ಹಾಗೂ ಬೇರೆ ಬೇರೆ ಆದಾಯ ಮೂಲಗಳಿಂದ 300 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಅವರು ಪಡೆದುಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಮಾಧ್ಯಮ ವರದಿ ಮಾಡಿದೆ. ಈ ಸುದ್ದಿ ಕೇಳಿ ಸಿನಿರಸಿಕರು ಹುಬ್ಬೇರಿಸಿದ್ದಾರೆ.

Ranveer singh s Record-Breaking remuneration for Dhuradhar series Revealed

ಸಲ್ಲು, ರಜನಿಕಾಂತ್ ಹಾಗೂ ಪ್ರಭಾಸ್ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳ ಮೂಲಕ ಹೀರೊಗಳ ಸಂಭಾವನೆ ಹೆಚ್ಚುವಂತೆ ಮಾಡಿದ್ದರು. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ದಕ್ಷಿಣದ ಹೀರೊಗಳು 100 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆಯಲು ಆರಂಭಿಸಿದ್ದರು. ತಮಿಳು ನಟ ದಳಪತಿ ವಿಜಯ್ ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತಿದೆ. ಅದನ್ನೆಲ್ಲಾ ಮೀರಿ ಈಗ ರಣ್ವೀರ್ ದಾಖಲೆ ಬರೆದಂತಾಗಿದೆ.

'ಧುರಂಧರ್' ಸರಣಿಯ 2 ಸಿನಿಮಾಗಳ ಬಜೆಟ್ 250 ಕೋಟಿ ರೂ. ಮೀರಲಿಲ್ಲ. ಕಡಿಮೆ ವೆಚ್ಚದಲ್ಲೇ ನಿರ್ಮಾಣವಾಗಿದ್ದ ಸಿನಿಮಾ ಅಕ್ಷರಶಃ ಬಾಕ್ಸಾಫೀಸ್ ಲೂಟಿ ಮಾಡಿತ್ತು. ಆದಿತ್ಯಧರ್ ನಿರ್ದೇಶನ ರಣ್ವೀರ್ ಜೊತೆಗೆ ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್ ರೀತಿಯ ಅನುಭವಿ ಕಲಾವಿದರು ನಟನೆ ಎಲ್ಲಾ ಸೇರಿ ಸಿನಿಮಾ ಸಂಚಲನ ಸೃಷ್ಟಿಸಿತ್ತು. ಭಾರತೀಯ ಚಿತ್ರರಂಗದ ಎಲ್ಲಾ ಸಿನಿಮಾಗಳ ದಾಖಲೆ ಮುರಿದು 'ಧುರಂಧರ್' ಸಿನಿಮಾ ಹುಬ್ಬೇರಿಸಿತ್ತು. ಓಟಿಟಿ, ಸ್ಯಾಟಲೈಟ್ ರೈಟ್ಸ್ ಮೂಲಕ ಕೂಡ ಒಳ್ಳೆ ಆದಾಯ ಸಿಕ್ಕಿತ್ತು.

Ranveer singh s Record-Breaking remuneration for Dhuradhar series Revealed

'ಧುರಂಧರ್' ಚಿತ್ರಕ್ಕಾಗಿ ರಣ್ವೀರ್ ಸಿಂಗ್ ಬರೋಬ್ಬರಿ 325 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸಿನಿಮಾ ಡಿಸ್ಟ್ರಿಬ್ಯೂಷನ್ ಶೇರ್, ಥ್ರಿಯೇಟ್ರಿಕಲ್ ಬೋನಸ್, ಓಟಿಟಿ, ಸ್ಯಾಟಲೈಟ್ ಹಾಗೂ ಮ್ಯೂಸಿಕ್ ರೈಟ್ಸ್ ಹೀಗೆ ಎಲ್ಲದರಲ್ಲೂ ರಣ್ವೀರ್ ಸಿಂಗ್ ಪಾಲು ಪಡೆದಿದ್ದಾರೆ. 2ನೇ ಭಾಗದ ಚಿತ್ರಕ್ಕೆ ತಾವೇ ಕೊಂಚ ಬಂಡವಾಳ ಕೂಡ ಹೂಡಿಕೆ ಮಾಡಿದ್ದರು. ಹಾಗಾಗಿ ರಣ್ವೀರ್ ಭಾರೀ ಮೊತ್ತದ ಆದಾಯ ವಾಪಸ್ ಪಡೆದಿದ್ದಾರೆ ಎಂದು ಚರ್ಚೆ ಆಗ್ತಿದೆ. ಒಂದು ಅಂದಾಜಿನ ಪ್ರಕಾರ ಈ ಚಿತ್ರದಲ್ಲಿ ಅವರು ಗಳಿಸಿದ ಆದಾಯ 325 ಕೋಟಿ ರೂ. ಎಂದು ಹೇಳಲಾಗ್ತಿದೆ. ಅದಕ್ಕಿಂತಲೂ ಜಾಸ್ತಿ ಸಿಕ್ಕಿರಬಹುದು ಎನ್ನುವ ಊಹಾಪೋಹ ಕೂಡ ಇದೆ.

ಒಂದ್ಕಾಲದಲ್ಲಿ 100 ಕೋಟಿ ರೂ. ಸಂಭಾವನೆ ಎನ್ನುವುದು ಅಚ್ಚರಿಯ ಸಂಗತಿ ಆಗಿತ್ತು. ಆದರೆ ಈಗ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆದು ಸ್ಟಾರ್ಸ್ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮೇಕಿಂಗ್ ಕೂಡ ಇರಬೇಕು. 'ಜನನಾಯಗನ್' ಚಿತ್ರಕ್ಕೆ ವಿಜಯ್, 'ರಾಕಾ' ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಅದನ್ನೆಲ್ಲಾ ಮೀರಿ ರಣ್ವೀರ್ ಸಂಚಲನ ಸೃಷ್ಟಿಸಿದ್ದಾರೆ.

Read more about: ranveer singh actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X