ನಟಿಗೆ ಆತ್ಯಾಚಾರ ಮತ್ತು ಆಸಿಡ್ ದಾಳಿ ಬೆದರಿಕೆ ವ್ಯಕ್ತಿ ಬಂಧನ

ಸಿನಿಮಾ ನಟಿಗೆ ಆಸಿಡ್ ದಾಳಿ ಹಾಗೂ ಅತ್ಯಾಚಾರ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Recommended Video

ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

ಬೆಂಗಾಳಿ ನಟಿ ಸ್ವಸ್ತಿಕಾ ಮುಖರ್ಜಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಹಾಗೂ ಆಸಿಡ್ ದಾಳಿಯ ಬೆದರಿಕೆಗಳು ಸತತವಾಗಿ ಬರುತ್ತಿದ್ದವು, ಈ ಬಗ್ಗೆ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರು.

ನಟಿ ಸ್ವಸ್ಥಿಕಾ ಮುಖರ್ಜಿ ಅವರಿಗೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.

ವೆಬ್‌ಸೈಟ್ ಒಂದು ಸುಶಾಂತ್ ಸಿಂಗ್ ಸಾವಿನನ ಬಗ್ಗೆ ಸ್ವಸ್ತಿಕಾ ಮುಖರ್ಜಿ ಹೇಳಿಕೆಯನ್ನು ತಿರುಚಿ ವರದಿ ಮಾಡಿದ ನಂತರ ಈ ರೀತಿಯ ಬೆದರಿಕೆ ಕಮೆಂಟ್‌ಗಳು ಹೆಚ್ಚಾದವು ಎಂದು ಸ್ವಸ್ತಿಕಾ ಮುಖರ್ಜಿ ಹೇಳಿದ್ದಾರೆ.

ವೆಬ್ ಪತ್ರಿಕೆಯೊಂದು, 'ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಫ್ಯಾಷನ್ ಆಗಿದೆ' ಎಂದು ಸ್ವಸ್ತಿಕಾ ಮುಖರ್ಜಿ ಹೇಳಿದ್ದಾರೆ ಎಂದು ವರದಿ ಮಾಡಿತ್ತು. ಆದರೆ ತಾವು ಹಾಗೆ ಹೇಳಿಲ್ಲವೆಂದು ಸ್ವಸ್ತಿಕಾ ಮುಖರ್ಜಿ ಹೇಳಿದ್ದಾರೆ.

ದಿಲ್ ಬೇಚಾರ ಸಿನಿಮಾದಲ್ಲಿ ನಟನೆ

ದಿಲ್ ಬೇಚಾರ ಸಿನಿಮಾದಲ್ಲಿ ನಟನೆ

ಸ್ವಸ್ತಿಕಾ ಮುಖರ್ಜಿ ಅವರು ಸುಶಾಂತ್ ಸಿಂಗ್ ಅವರ ಕೊನೆಯ ಸಿನಿಮಾ 'ದಿಲ್ ಬೇಚಾರಾ' ಸಿನಿಮಾದಲ್ಲಿ ನಟಿಸಿದ್ದರು. ಸುಶಾಂತ್ ಸಿಂಗ್ ಜೊತೆಗೆ ಉತ್ತಮ ಗೆಳೆತನವನ್ನೂ ಸ್ವಸ್ತಿಕಾ ಹೊಂದಿದ್ದರು.

ತಪ್ಪಾಗಿ ಅರ್ಥಿಸಿ ವರದಿ ಮಾಡಿದ್ದಾನೆ

ತಪ್ಪಾಗಿ ಅರ್ಥಿಸಿ ವರದಿ ಮಾಡಿದ್ದಾನೆ

ಅವರೇ ಹೇಳಿರುವ ಪ್ರಕಾರ, ತಮ್ಮ ಹೇಳಿಕೆಯನ್ನು ಪತ್ರಕರ್ತನೊಬ್ಬ ತಪ್ಪಾಗಿ ಅರ್ಥೈಸಿ ವರದಿ ಮಾಡಿದ್ದನಂತೆ. ವರದಿ ಪ್ರಕಟವಾದ ನಂತರ ತಮ್ಮ ಮೇಲೆ ಸಾಮಾಜಿಕ ಜಾಲತಾಣದಲ್ಲಿ ದಾಳಿಗಳು ಹೆಚ್ಚಾದವು ಎಂದು ನಟಿ ಹೇಳಿದ್ದಾರೆ.

ಪತ್ರಕರ್ತನ ಬಂಧನ

ಪತ್ರಕರ್ತನ ಬಂಧನ

ಸ್ವಸ್ತಿಕಾ ಅವರ ಹೇಳಿಕೆಯನ್ನು ತಿರುಚಿ ಪ್ರಕಟಿಸಿದ್ದ ಪತ್ರಕರ್ತ ಶುವಾಮ್ ಚಕ್ರೊವರ್ತಿಯನ್ನು ಕೊಲ್ಕತ್ತ ಪೊಲೀಸರು ಬಂಧಿಸಿದ್ದು, ಆತನು ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

'ಆನ್‌ಲೈನ್ ದೌರ್ಜನ್ಯ ಸಹಿಸಬೇಡಿ'

'ಆನ್‌ಲೈನ್ ದೌರ್ಜನ್ಯ ಸಹಿಸಬೇಡಿ'

ಮಂದುವರೆದು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿರುವ ಸ್ವಸ್ತಿಕಾ, 'ಆನ್‌ಲೈನ್ ದೌರ್ಜನ್ಯವನ್ನು ಯಾರೂ ಸಹಿಸಬೇಡಿ, ಆನ್‌ಲೈನ್ ದೌರ್ಜನ್ಯವನ್ನು ದಿಟ್ಟವಾಗಿ ಎದುರಿಸಿ, ಕಾನೂನಿನ ಮೂಲಕ ಅವರಿಗೆ ಉತ್ತರ ನೀಡಿ ಎಂದು ಮನವಿ ಮಾಡಿದ್ದಾರೆ.

ಸುಶಾಂತ್ ಸಾವಿನ ಹಿಂದೆ ಗಣ್ಯರ ಕೈವಾಡ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರ

More from Filmibeat

English summary
Bengali actress receive rape and acid attack treats. Kolkatta police arrested who gave threats.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X