For Quick Alerts
  ALLOW NOTIFICATIONS  
  For Daily Alerts

  ಮದುವೆಗೆ 4 ದಿನ ಬಾಕಿ, ಈಗ ಸ್ಟಾರ್ ನಟನ ಮಗನ ವಿರುದ್ಧ ಅತ್ಯಾಚಾರ ಆರೋಪ.!

  By Bharath Kumar
  |
  ಮದುವೆ ಆಗೊದಾಗಿ ನಂಬಿಸಿ ಅತ್ಯಾಚಾರವ್ಯಸಗಿದ ಸ್ಟಾರ್ ನಟನ ಪುತ್ರ...! | Filmibeat Kannada

  ಬಾಲಿವುಡ್ ಸೂಪರ್ ಸ್ಟಾರ್ ನಟ ಮಿಥುನ್ ಚಕ್ರವರ್ತಿ ಅವರ ಮಗನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಯುವತಿಯೊಬ್ಬಳನ್ನ ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿ, ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಾಗಿದೆ.

  ಈ ಬಗ್ಗೆ ದೆಹಲಿ ಹೈ ಕೋರ್ಟ್ ಎಫ್.ಐ.ಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಇಲ್ಲಿ ಗಮನಿಸಬೇಕಾದ ವಿಚಾರವಂದ್ರೆ ಮಿಥುನ್ ಚಕ್ರವರ್ತಿ ಮಗನಿಗೆ ಇತ್ತೀಚಿಗಷ್ಟೆ ಮದುವೆ ಬೇರೆ ನಿಶ್ಚಿಯವಾಗಿತ್ತು.

  ಈ ಮದುವೆ ನೆರವೇರುವ ಮುನ್ನವೇ ಈಗ ಮಿಥುನ್ ಮಗನಿಗೆ ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ, ಮಿಥುನ್ ಚಕ್ರವರ್ತಿ ಮಗನ ವಿರುದ್ಧ ಆರೋಪ ಮಾಡಿರುವ ಆ ಯುವತಿ ಯಾರು.? ಏನಿದು ಈ ಪ್ರಕರಣ ಎಂದು ಪೂರ್ತಿ ತಿಳಿಯಲು ಈ ಸ್ಟೋರಿ ಓದಿ.....

  ಬೋಜ್ ಪುರಿ ನಟಿಯಿಂದ ಆರೋಪ

  ಬೋಜ್ ಪುರಿ ನಟಿಯಿಂದ ಆರೋಪ

  ಮಿಥುನ್ ಚಕ್ರವರ್ತಿ ಅವರ ಮಗ ಮಹಾಕ್ಷಯ ಚಕ್ರವರ್ತಿ ಬೋಜ್ ಪುರಿ ನಟಿಯನ್ನ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಯುವತಿಯ ಈ ದೂರನ್ನ ಕೇಳಿದ ಕೋರ್ಟ್ ನಟನ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಸೂಚಿಸಿದೆ.

  ಗರ್ಭಪಾತ ಮಾಡಿಸಿದ್ದ ನಟ

  ಗರ್ಭಪಾತ ಮಾಡಿಸಿದ್ದ ನಟ

  ಆ ನಟಿಯ ಜೊತೆ ಮಹಾಕ್ಷಯ್ ಸುಮಾರು ನಾಲ್ಕು ವರ್ಷದಿಂದ ಪರಿಚಯದಲ್ಲಿದ್ದು, ದೈಹಿಕವಾಗಿ ಸಂಬಂಧ ಕೂಡ ಇಟ್ಟುಕೊಂಡಿದ್ದನಂತೆ. ಅಷ್ಟೇ ಅಲ್ಲದೇ ಒಂದು ಬಾರಿ ಆಕೆಗೆ ಗರ್ಭಪಾತ ಕೂಡ ಮಾಡಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

  ಮಹಾಕ್ಷಯ್ ತಾಯಿಯ ವಿರುದ್ಧವೂ ದೂರು

  ಮಹಾಕ್ಷಯ್ ತಾಯಿಯ ವಿರುದ್ಧವೂ ದೂರು

  ಮಹಾಕ್ಷಯ್ ಮಾಡಿರುವ ಈ ವಂಚನೆಗೆ ಅವರ ತಾಯಿಯ ಬೆಂಬಲ ಇದೆ. ಮಹಾಕ್ಷಯ್ ಅವರ ತಾಯಿ ಯೋಗಿತಾ ಬಾಲಿ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾಳೆ. ಆದ್ರೆ, ಯೋಗಿತಾ ಬಾಲಿ ಆಗಲಿ, ಅಥವಾ ಮಿಥುನ್ ಚಕ್ರವರ್ತಿ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಮಹಾಕ್ಷಯಗೆ ಮದುವೆ ನಿಶ್ಚಿಯ

  ಮಹಾಕ್ಷಯಗೆ ಮದುವೆ ನಿಶ್ಚಿಯ

  ಎಲ್ಲ ಅಂದುಕೊಂಡಂತೆ ಆಗಿದ್ದರೇ, ಜುಲೈ 7 ರಂದು ಮಿಥುನ್ ಚಕ್ರವರ್ತಿ ಅವರ ಮಗ ಮಹಾಕ್ಷಯ್ ಅವರ ಮದುವೆ ನಿಶ್ಚಿಯವಾಗಿತ್ತು. ಬಾಲಿವುಡ್ ನಿರ್ಮಾಪಕ ಸುಭಾಶ್ ಶರ್ಮಾ ಅವರ ಮಗಳು ಮಾದಲಸಾ ಜೊತೆ ಮದುವೆ ನಿಶ್ಚಯವಾಗಿತ್ತು. ಈಗ ಕಲ್ಯಾಣವೇನಾಗತ್ತೋ.?

  'ಮಹಾಕ್ಷಯ' ಅಭಿನಯದ ಚಿತ್ರಗಳು

  'ಮಹಾಕ್ಷಯ' ಅಭಿನಯದ ಚಿತ್ರಗಳು

  ಅಂದ್ಹಾಗೆ, ಮಿಥುನ್ ಅವರ ಮಗ ಮಹಾಕ್ಷಯ್ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2008 ರಲ್ಲಿ 'ಜಿಮ್ಮಿ' ಚಿತ್ರದ ಮೂಲಕ ಮಹಾಕ್ಷಯ ನಾಯಕನಾಗಿ ಅಭಿನಯಿಸಿದ್ರು. ನಂತರ 'ದಿ ಮರ್ಡರರ್', 'ಹಂಟೆಡ್', 'ಲೂಟ್', 'ರಾಕಿ', 'ಎನಿಮಿ', ತುಕಾ ಫಿಟ್, ಸೇರಿದಂತೆ

  English summary
  A Delhi court has ordered registration of first information report (FIR) against veteran actor Mithun Chakraborty's son Mahaakshay and wife Yogita Bali on a complaint of rape and cheating filed by a woman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X