For Quick Alerts
  ALLOW NOTIFICATIONS  
  For Daily Alerts

  ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ: ಕಿರುತೆರೆ ನಟ ಬಂಧನ

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಪರ್ಲ್ ವಿ ಪುರಿಯನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿರುವ ವಿಚಾರ ಹೊರಬಿದ್ದಿದೆ.

  ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪದಲ್ಲಿ ನಟ ಸೇರಿದಂತೆ ಒಟ್ಟು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  ಪತ್ನಿಯನ್ನು ಕೊಂದ ಆರೋಪದಲ್ಲಿ ಜನಪ್ರಿಯ ಯೂಟ್ಯೂಬರ್ ಬಂಧನಪತ್ನಿಯನ್ನು ಕೊಂದ ಆರೋಪದಲ್ಲಿ ಜನಪ್ರಿಯ ಯೂಟ್ಯೂಬರ್ ಬಂಧನ

  ವಾಸೈ ವಲಯದ ಡಿಸಿಪಿ ಪಾಟೀಲ್ ಪಾಟೀಲ್ ಈ ಕುರಿತು ಮಾಹಿತಿ ನೀಡಿದ್ದು, ''ಘಟನೆ ಹಳೆಯದು. 17 ವರ್ಷ ಅಪ್ರಾಪ್ತೆ ಬಾಲಕಿ ತನ್ನ ತಾಯಿಯ ಜೊತೆ ಬಂದು ದೂರು ನೀಡಿದ್ದಾರೆ. ಈ ಹಿನ್ನೆಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 2012ರ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ'' ಎಂದು ತಿಳಿಸಿದ್ದಾರೆ.

  ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಪೊಲೀಸರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿರುವುದಾಗಿ ವರದಿಯಾಗಿದೆ.

  ಹಿಂದಿಯ ನಾಗಿನ್ 3 ಮತ್ತು ಬೆಪನಾ ಪ್ಯಾರ್ ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಪರ್ಲ್ ಪುರಿ ನಟಿಸಿದ್ದಾರೆ. ಇನ್ನು ಈ ಘಟನೆ ಬಗ್ಗೆ ನಾಗಿನ್ ಧಾರಾವಾಹಿಯಲ್ಲಿ ಪರ್ಲ್ ಜೊತೆ ನಟಿಸಿರುವ ಸಹ ಕಲಾವಿದೆ ಅನಿತಾ ಹಸಾನಂದಾನಿ ಪ್ರತಿಕ್ರಿಯಿಸಿದ್ದು, ''ಅವರ ಬಗ್ಗೆ ನಾನು ಚೆನ್ನಾಗಿ ಬಲ್ಲೆ, ಇದು ನಿಜವಲ್ಲ'' ಎಂದು ನಟನ ಪರ ಬೆಂಬಲಿಸಿದ್ದಾರೆ.

  ಪ್ರಾಣಿಗಳನ್ನು ದತ್ತು ಪಡೆದು ಕಾಪಾಡಿ ಎಂದು ಮನವಿ ಮಾಡಿಕೊಂಡ Darshan | Filmibeat Kannada

  ಅನಿತಾ ಅವರ ಪೋಸ್ಟ್ ಬೆಂಬಲಿಸಿರುವ ಅಧಿಕ್ ಮಹಾಜನ್ ಸಹ ''ನಿಮ್ಮ ಮಾತಿಗೆ ನಾನು ಬದ್ದನಾಗಿದ್ದೇನೆ'' ಎಂದಿದ್ದಾರೆ. ಇನ್ನು ಪರ್ಲ್ ಅಭಿಮಾನಿಗಳು ಈ ಸುದ್ದಿಯಿಂದ ಆಘಾತಕ್ಕೆ ಒಳಗಾಗಿದ್ದು, ''IstandwithPearlpuri'' ಎಂದು ಅಭಿಯಾನ ಆರಂಭಿಸಿದ್ದಾರೆ.

  English summary
  Television actor Pearl Puri has been arrested by the Mumbai Police. He was arrested in Vasai in connection with the rape of a minor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X