»   » 18 ವರ್ಷಗಳ ಹಿಂದೆ ಐಶ್-ರಣಬೀರ್ ಕಪೂರ್ ಹೇಗಿದ್ರು ಗೊತ್ತಾ?

18 ವರ್ಷಗಳ ಹಿಂದೆ ಐಶ್-ರಣಬೀರ್ ಕಪೂರ್ ಹೇಗಿದ್ರು ಗೊತ್ತಾ?

Posted By: Sonu Gowda
Subscribe to Filmibeat Kannada

ಬೆಕ್ಕಿನ ಕಣ್ಣಿನ ಚೆಲುವೆ, ಬಚ್ಚನ್ ಫ್ಯಾಮಿಲಿ ಸೊಸೆ, ನಟಿ ಐಶ್ವರ್ಯ ಅವರು ತಮಗಿಂತ ಚಿಕ್ಕವರಾಗಿರುವ ನಟ ರಣಬೀರ್ ಕಪೂರ್ ಅವರ ಜೊತೆ 'ಏ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ರೋಮ್ಯಾನ್ಸ್ ಮಾಡಿರೋದು, ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.

ಅದರಲ್ಲೂ ಬಚ್ಚನ್ ಕುಟುಂಬಕ್ಕಂತೂ, ಸೊಸೆಯ ವಿಭಿನ್ನ ವರಸೆಯಿಂದ ಇರುಸು-ಮುರುಸಾಗಿದೆ. 40 ಪ್ಲಸ್ ನಲ್ಲಿರುವ ನಟಿ ಐಶ್ವರ್ಯ ರೈ ಎಲ್ಲಿ, 30 ಪ್ಲಸ್ ನಲ್ಲಿರುವ ನಟ ರಣಬೀರ್ ಕಪೂರ್ ಎಲ್ಲಿ. ಆದ್ರೂ ಇವರಿಬ್ಬರನ್ನು ರೋಮ್ಯಾಂಟಿಕ್ ಮೂಡ್ ಗೆ ಕರೆದೊಯ್ಯುವಲ್ಲಿ ನಿರ್ದೇಶಕ ಕರಣ್ ಜೋಹರ್ ಯಶಸ್ವಿಯಾಗಿದ್ದಾರೆ.[ಐಶ್ವರ್ಯ ಮೇಲೆ ಬಚ್ಚನ್ ಫ್ಯಾಮಿಲಿಗ್ಯಾಕೆ ಅಷ್ಟೊಂದು ಕೋಪ]

Rare Picture Of Ranbir when He Met Aishwarya For The FIRST TIME

ಇದೀಗ ನಟಿ ಐಶ್ವರ್ಯ ರೈ ಮತ್ತು ನಟ ರಣಬೀರ್ ಕಪೂರ್ ಅವರು ತೆಗೆಸಿಕೊಂಡಿರುವ ಹಳೇ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸದ್ಯಕ್ಕೆ ತೆರೆ ಮೇಲೆ ರೋಮ್ಯಾನ್ಸ್ ಮಾಡುತ್ತಿರುವ ಜೋಡಿ, ಸುಮಾರು 18 ವರ್ಷಗಳ ಹಿಂದೆ ಹೇಗಿದ್ದಿರಬಹುದು?, ಊಹಿಸಿದ್ದೀರಾ?.[ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?]

Rare Picture Of Ranbir when He Met Aishwarya For The FIRST TIME

ಇಲ್ವಾ, ಹಾಗಿದ್ರೆ ಈ ಫೋಟೋ ನೋಡಿ, ನಿರ್ದೇಶಕ ಕಮ್ ಲೇಖಕ ರೂಮಿ ಜಾಫ್ರಿ ಅವರು ತಮ್ಮ ಜೊತೆ ಇದ್ದ ಹಳೇ ಫೋಟೋ ಒಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

Rare Picture Of Ranbir when He Met Aishwarya For The FIRST TIME

"ನಾನು ಹಲವು ವರ್ಷಗಳ ಹಿಂದೆ ಯುಎಸ್ಎ ನಲ್ಲಿ ತೆಗೆದ ಫೋಟೋ, ಇಬ್ಬರು ಆವಾಗ ಹೇಗೆ ಕಾಣಿಸುತ್ತಿದ್ದರು ನೋಡಿ. ಇದೀಗ ಇವರಿಬ್ಬರು ಒಟ್ಟಾಗಿ, ಒಂದೇ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ನಿಜಕ್ಕೂ ಖುಷಿ ತಂದಿದೆ. ಈ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಬೇಡಿಕೊಳ್ಳುತ್ತೇನೆ" ಎಂದು ರಮಿ ಜಾಫ್ರಿ ಫೋಟೋ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ.

18 ವರ್ಷಗಳ ಹಿಂದೆ ರಣಬೀರ್ ಸ್ಮಾರ್ಟ್ ಆಗಿ, ಒಳ್ಳೆ ಚಾಕಲೇಟ್ ಬಾಯ್ ತರ ಇದ್ರು. ಈಗ್ಲೂ ಸ್ಪಲ್ಪ ಹಾಗೆ ಇದ್ದಾರೆ.

Rare Picture Of Ranbir when He Met Aishwarya For The FIRST TIME

'ಏ ದಿಲ್ ಹೈ ಮುಷ್ಕಿಲ್' ತೆರೆಗೆ ಬರಲು ಸಜ್ಜಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಚಿತ್ರದಲ್ಲಿ ಇವರಿಬ್ಬರ ಜೊತೆ ನಟಿ ಅನುಷ್ಕಾ ಶರ್ಮ ಮತ್ತು ನಟ ಫವಾದ್ ಖಾನ್ ಅಭಿನಯಿಸಿದ್ದಾರೆ. ಸದ್ಯಕ್ಕೆ ನಟ ಫವಾದ್ ಖಾನ್ ಪಾಕಿಸ್ತಾನಕ್ಕೆ ಪರಾರಿಯಾಗಿದ್ದು, ಇನ್ನು ಈ ಸಿನಿಮಾ ತೆರೆ ಕಾಣುವ ಸಂದರ್ಭದಲ್ಲಾದರೂ ಭಾರತಕ್ಕೆ ವಾಪಸಾಗುತ್ತಾರಾ ಕಾದು ನೋಡಬೇಕಿದೆ.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]

English summary
Actress Aishwarya Rai and Actor Ranbir Kapoor are working together in 'Ae Dil Hai Mushkil' and people are loving their sizzling chemistry in the film. But not many people know that Ranbir Kapoor and Aishwarya Rai met for the first time on the sets of 'Aa Ab Laut Chalen'. Here is the Rare Picture Of Ranbir Kapoor when He Met Aishwarya Rai For The FIRST Time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada