ಈ ವರ್ಷ ಚಿತ್ರರಂಗಕ್ಕೆ ಬಂದ ಈ 'ಸ್ಟಾರ್‌ಕಿಡ್‌'ಗಳಲ್ಲಿ ಗೆದ್ದವರು ಯಾರು ? ಸೋತವರು ಯಾರು ?

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ.

ಇನ್ನೂ ಕೆಲವರು ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ. ಈ ವರ್ಷ ಕೂಡ ಬಾಲಿವುಡ್‌ ಇದೆಲ್ಲದರಿಂದ ಹೊರತಾಗಿಲ್ಲ. 2025ರ ಈ 07 ತಿಂಗಳಿನಲ್ಲಿ ಹಲವಾರು ಜನ ತಮ್ಮ ತಂದೆ-ತಾಯಿ ಮತ್ತು ಸಂಬಂಧಿಕರ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಈ ವರ್ಷ ಯಾರೆಲ್ಲ ಸ್ಟಾರ್‌ ಗಳ ಮಕ್ಕಳು ಚಿತ್ರರಂಗಕ್ಕೆ ಬಂದಿದ್ಧಾರೆ..? ಅವರ ಚಿತ್ರಗಳ ಫಲಿತಾಂಶವೇನಾಯ್ತು.. ? ಎಂದು ತಿಳಿಯಲು ಮುಂದೆ ಓದಿ.

Rasha Thadani to Shanaya Kapoor 2025 s Mid-Year Star Kid Report Card

ರಾಶಾ ತಡಾನಿ ಮತ್ತು ಅಮಾನ್ ದೇವಗನ್

ಉಪೇಂದ್ರ ಮತ್ತು ಕೆಜಿಎಫ್ 2 ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ರವೀನಾ ಟಂಡನ್ ಅವರ ಮಗಳು ರಾಶಾ ಈ ವರ್ಷ ಚಿತ್ರರಂಗಕ್ಕೆ ಪ್ರವೇಶ ನೀಡಿದವರಲ್ಲಿ ಮೊದಲಿಗರು. ಇವರ ಮೊದಲ ಚಿತ್ರದಲ್ಲಿ ಇವರಿಗೆ ಜೋಡಿಯಾಗಿದ್ದು ಬೇರೆ ಯಾರು ಅಲ್ಲ ಬದಲಿಗೆ ಅಜಯ್ ದೇವಗನ್ ಅವರ ಸೋದರಳಿಯ ಅಮಾನ್ ದೇವಗನ್ ಎನ್ನುವುದು ವಿಶೇಷ.

ಅಭಿಷೇಕ್ ಕಪೂರ್ ನಿರ್ದೇಶನದ ''ಆಜಾದ್'' ಚಿತ್ರದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 17ರಂದು ತೆರೆಗೆ ಬಂದ ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಗೆಸ್ಟ್ ರೋಲ್ ಮಾಡಿದ್ದರು.

ಇನ್ನು ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಈ ಹಿನ್ನೆಲೆ.. ಮೊದಲ ಪ್ರಯತ್ನದಲ್ಲಿಯೇ ಇಬ್ಬರಿಗೆ ಗೆಲುವಿನ ಗುಲಾಬ್ ಜಾಮೂನು ಸಿಗುತ್ತೆ ಎಂದೇ ಅನೇಕರು ಅಂದುಕೊಂಡಿದ್ದರು. ಆದರೆ ಆಗಿದ್ದು ಉಲ್ಟಾ. ರಾಶಾ ಅಭಿನಯವನ್ನು ಅನೇಕರು ಮೆಚ್ಚಿಕೊಂಡರಷ್ಟೇ. ಅಮಾನ್ ದೇವಗನ್‌ಗೆ ಯಾರು ಕೇರ್ ಮಾಡಲಿಲ್ಲ. ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

ಇಬ್ರಾಹಿಂ ಅಲಿ ಖಾನ್

ಸೈಫ್ ಅಲಿ ಖಾನ್ ಅವರ ಮುದ್ದಿನ ಮಗ ಇಬ್ರಾಹಿಂ ಅಲಿ ಖಾನ್ ಕೂಡ ಈ ವರ್ಷ ಚಿತ್ರರಂಗಕ್ಕೆ ಬಂದರು. ಸಾರಾ ಅಲಿ ಖಾನ್ ಈಗಾಗಲೇ ಬಾಲಿವುಡ್‌ನಲ್ಲಿ ನೆಲೆಯೂರಿರುವ ಹಿನ್ನೆಲೆ ಇಬ್ರಾಹಿಂ ಮೇಲೆ ಕೂಡ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಯೆಂಬ ಮೊದಲ ಪರೀಕ್ಷೆಯಲ್ಲಿ ಇಬ್ರಾಹಿಂ ಫೇಲ್ ಆದರು. ಇಬ್ರಾಹಿಂ ಅಭಿನಯದ ನಾದಾನಿಯಾ ಚಿತ್ರವನ್ನು ಪ್ರೇಕ್ಷಕರು ನೋಡಲು ನಿರಾಕರಿಸಿದರು. ವಿಮರ್ಷಕರು ಕೂಡ ಚಿತ್ರವನ್ನು ನೋಡಿ ತಲೆ ಚಚ್ಚಿಕೊಂಡರು.

Rasha Thadani to Shanaya Kapoor 2025 s Mid-Year Star Kid Report Card

ಈ ಚಿತ್ರದಲ್ಲಿ ಇಬ್ರಾಹಿಂ ಅಲಿ ಖಾನ್ ಎದುರು ಜಾಹ್ನವಿ ಕಪೂರ್ ಅವರ ಸಹೋದರಿ ಖುಷಿ ಕಪೂರ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. 2023ರಲ್ಲಿ ದಿ ಆರ್ಚಿಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಖುಷಿ ಪಾಲಿಗೆ ಇದು ಮೂರನೇ ಪ್ರಯತ್ನ. ಆದರೆ.. ಖುಷಿಗೆ ಗೆಲುವಿನ ಖುಷಿ ಸಿಗಲಿಲ್ಲ.

ಅಂದ್ಹಾಗೇ ಈ ಚಿತ್ರ ಚಿತ್ರಮಂದಿರಗಳಲ್ಲಿ ಅಲ್ಲ ಬದಲಿಗೆ ನೇರವಾಗಿ ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಸದ್ಯ ಇಬ್ರಾಹಿಂ ಅಲಿ ಖಾನ್‌ ಸರ್‌ಜಮೀನ್ ಎಂಬ ಚಿತ್ರವನ್ನು ಮಾಡಿದ್ಧಾರೆ. ಈ ಚಿತ್ರ ಚಿತ್ರಮಂದಿರದಲ್ಲಿ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

ವೀರ್ ಪಹಾರಿಯಾ

ಮಾಜಿ ಮುಖ್ಯಮಂತ್ರಿ ಸುಶೀಲ್​ಕುಮಾರ್​ ಶಿಂಧೆ ಅವರ ಮೊಮ್ಮಗ ವೀರ್‌ ಪಹಾರಿಯಾ ಕೂಡ ಈ ವರ್ಷ ಚಿತ್ರರಂಗಕ್ಕೆ ಬಂದರು. ಅಕ್ಷಯ್ ಕುಮಾರ್ ಅಭಿನಯದ ಸ್ಕ್ರೈ ಫೋರ್ಸ್ ಚಿತ್ರದಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದರು. ಆದರೆ.. ರಾಶಾ ಮತ್ತು ಇಬ್ರಾಹಿಂ ಅಲಿ ಖಾನ್ ಅವರಂತೆ ಇವರಿಗೆ ಮೊದಲ ಪ್ರಯತ್ನದಲ್ಲಿ ಸೋಲಿನ ದರ್ಶನವಾಗಲಿಲ್ಲ. ಹಾಗಂಥ ಗೆಲ್ಲಲೂ ಇಲ್ಲ. ಬದಲಿಗೆ ಸಮಾಧಾನಕರ ಬಹುಮಾನವನ್ನು ಪ್ರೇಕ್ಷಕರು ಮತ್ತು ವಿಮರ್ಷಕರು ವೀರ್ ಪಹಾರಿಯಾಗೆ ನೀಡಿದರು.

ಶನಾಯಾ ಕಪೂರ್

ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಮತ್ತು ಅವರ ಪತ್ನಿ ಮಹೀಪ್ ಕಪೂರ್ ಅವರ ಮುದ್ದಿನ ಮಗಳು ಶನಾಯಾ ಕಪೂರ್ ಕೂಡ ಈ ವರ್ಷ ಚಿತ್ರರಂಗಕ್ಕೆ ಬಂದರು.

Rasha Thadani to Shanaya Kapoor 2025 s Mid-Year Star Kid Report Card

ಶನಾಯಾ ಅಭಿನಯದ ಚೊಚ್ಚಲ ಚಿತ್ರ ''ಆಂಖೋಂ ಕಿ ಗುಸ್ತಾಖಿಯಾನ್'' ಕಳೆದ ವಾರವಷ್ಟೇ ತೆರೆಗೆ ಬಂದಿದ್ದು ಈ ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸಾಫೀಸ್‌ನಲ್ಲಿ ಸದ್ಯ ಚಿತ್ರ ತೆವಳುತ್ತಾ ಸಾಗುತ್ತಿದೆ. ಚಿತ್ರದ ಫಲಿತಾಂಶ ಮುಂಬರುವ ದಿನಗಳಲ್ಲಿ ನಿಖರವಾಗಿ ಗೊತ್ತಾಗಲಿದೆಯಾದರು ಕೂಡ ಶನಾಯಾ ಅವರ ಅಭಿನಯಕ್ಕೆ ವ್ಯಾಪಕವಾದ ಮೆಚ್ಚುಗೆ ಸಿಗುತ್ತಿದೆ. ಹೊಸದಾಗಿ ಬಂದ ಸ್ಟಾರ್‌ ಕಿಡ್‌ಗಳಲ್ಲಿ ಶನಾಯಾ ಮುಂದೊಂದು ಮಿಂಚುತ್ತಾರೆ ಎನ್ನುವ ಭವಿಷ್ಯವಾಣಿ ಕೂಡ ಕೇಳಿ ಬರುತ್ತಿದೆ.

More from Filmibeat

English summary
Bollywood's new generation has arrived! Dive into the mid-year performance of Rasha Thadani, Shanaya Kapoor & other star kids who debuted in 2025. Will they conquer the silver screen
Read more about: nepotism filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X