For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನ 'ಗುಡ್ ಬೈ' ಪಾರ್ಟಿಯಲ್ಲಿ ರಶ್ಮಿಕಾ ಸಖತ್ ಡಾನ್ಸ್: ಫೋಟೋ ವೈರಲ್

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಿಂದಿಯ ಮೊದಲ ಸಿನಿಮಾ ಬಿಡುಗಡೆಗೂ ಮೊದಲೇ ರಶ್ಮಿಕಾ ಎರಡು-ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಸದ್ಯ ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ಮುಂಬೈ ಗೆ ಹಾರಿರುವ ರಶ್ಮಿಕಾ ಹಿಂದಿಯ ಬಹುನಿರೀಕ್ಷೆಯ 'ಗುಡ್ ಬೈ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಗುಡ್ ಬೈ ಸಿನಿಮಾದಲ್ಲಿ ರಶ್ಮಿಕಾ ಅಮಿತಾಬ್ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಅಮಿತಾಬ್ ಜೊತೆ ರಶ್ಮಿಕಾ ಕಣಿಸಿಕೊಳ್ಳುತ್ತಿದ್ದು, ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ. ಅಂದಹಾಗೆ ಚಿತ್ರತಂಡ ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ.

  ಮತ್ತೆ ಟ್ರೋಲಿಗೆ ಗುರಿಯಾದ ರಶ್ಮಿಕಾ: 'ಓವರ್ ಆಕ್ಟಿಂಗ್' ಎಂದು ಜರಿದ ನೆಟ್ಟಿಗರುಮತ್ತೆ ಟ್ರೋಲಿಗೆ ಗುರಿಯಾದ ರಶ್ಮಿಕಾ: 'ಓವರ್ ಆಕ್ಟಿಂಗ್' ಎಂದು ಜರಿದ ನೆಟ್ಟಿಗರು

  ಇದೇ ಖುಷಿಯಲ್ಲಿ ಚಿತ್ರತಂಡ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಇಡೀ ಚಿತ್ರತಂಡ ಸಖತ್ ಸ್ಟೆಪ್ ಹಾಕಿ ಮಸ್ತ್ ಮಜಾ ಮಾಡಿದೆ. ಪಾರ್ಟಿಯಲ್ಲಿ ರಶ್ಮಿಕಾ ಡಾನ್ಸ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೆ ಪಾರ್ಟಿಯ ಫೋಟೋವನ್ನು ನಟ ಪವೈಲ್ ಹಂಚಿಕೊಂಡಿದ್ದಾರೆ. ಪಾರ್ಟಿಯಲ್ಲಿ ನಟ ಬಿಗ್ ಬಿ ಕೂಡ ಇದ್ದರು. 'ಅಮಿತಾಬ್ ಡಿಜೆ ಆಗಿದ್ದರು' ಎಂದು ಪವೈಲ್ ಬರೆದುಕೊಂಡಿದ್ದಾರೆ.

  ನಟಿ ರಶ್ಮಿಕಾ ಡೆನಿಮ್ ಪ್ಯಾಂಟ್ ಮತ್ತು ಟಿ ಶರ್ಟ್ ನಲ್ಲಿ ಇಡೀ ತಂಡದ ಸಖತ್ ಡಾನ್ಸ್ ಮಾಡಿದ್ದಾರೆ. ಬಾಲಿವುಡ್ ಪಾರ್ಟಿಯಲ್ಲಿ ರಶ್ಮಿಕಾ ಕಾಣಿಸಿಕೊಂಡಿರುವ ಫೋಟೋಗಳು ಮೊದಲ ಬಾರಿಗೆ ವೈರಲ್ ಆಗಿವೆ. ಈ ಫೋಟೋಗಳನ್ನು ಈಗ ಫ್ಯಾನ್ ಪೇಜ್ ಗಳಲ್ಲೂ ಹರಿದಾಡುತ್ತಿವೆ.

  ಅಂದಹಾಗೆ ಗುಡ್ ಬೈ ಸಿನಿಮಾ ನಿರ್ದೇಶಕ ವಿಕಾಸ್ ಬಹ್ಲ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಮುಂದಿನ ಹಂತದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಇನ್ನು ರಶ್ಮಿಕಾ ಈ ಸಿನಿಮಾ ಜೊತೆಗ 'ಮಿಷನ್ ಮಜ್ನು' ಸಿನಿಮಾದಲ್ಲೂ ನಿರತರಾಗಿದ್ದಾರೆ.

   Rashmika and Amitabh Bachchans ‘Goodbye’ completes the first schedule; see wrap-up party pics
  ನಮ್ಮ ನಿರ್ಮಾಪಕರ ಕೈವಾಡ ಇಲ್ಲ ಎಂದು ಆರೋಪ-ಪ್ರತ್ಯಾರೋಪಕ್ಕೆ ಬ್ರೇಕ್ ಹಾಕಿದ Darshan | Filmibeat Kannada

  ಬಾಲಿವುಡ್ ಜೊತೆಗೆ ರಶ್ಮಿಕಾ ತೆಲುಗು ಸಿನಿಮಾಗಳಲ್ಲೂ ಕಿರಿಕ್ ಸುಂದರಿ ಬ್ಯುಸಿಯಾಗಿದ್ದಾರೆ. ತೆಲುಗಿನ ಬಹುನಿರೀಕ್ಷೆಯ 'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್ ಎರಡು ಸಿನಿಮಾರಂಗಗಳಲ್ಲಿ ರಶ್ಮಿಕಾ ಏಕಕಾಲಕ್ಕೆ ಸಿನಿಮಾಗಳನ್ನು ಮಾಡುತ್ತಿದ್ದಾರೆ.

  English summary
  Actress Rashmika and Amitabh Bachchan Starrer ‘Goodbye’ completes the first schedule; see wrap-up party pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X