ಒಳ ಉಡುಪಿನ ಜಾಹೀರಾತಿನಲ್ಲಿ ರಶ್ಮಿಕಾ: ಗರಂ ಆದ ನೆಟ್ಟಿಗರು

ನಟಿ ರಶ್ಮಿಕಾ ಮಂದಣ್ಣ ಬಹು ಕಡಿಮೆ ಅವಧಿಯಲ್ಲಿಯೇ ಸಿನಿಮಾ ರಂಗದಲ್ಲಿ ಹೊಸ ಎತ್ತರಗಳಿಗೆ ಏರಿದ್ದಾರೆ. ತೆಲುಗು, ತಮಿಳುಗಳಲ್ಲಿ ದೊಡ್ಡ ಸ್ಟಾರ್‌ಗಳೊಂದಿಗೆ ನಟಿಸಿರುವ ರಶ್ಮಿಕಾ, ಬಾಲಿವುಡ್‌ನಲ್ಲಿಯೂ ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಿಸಿದ್ದಾರೆ.

ರಶ್ಮಿಕಾರ ನಟನೆಯನ್ನು ಬಾಲಿವುಡ್‌ ಬಹುವಾಗಿ ಮೆಚ್ಚಿಕೊಂಡಿದ್ದು, ಸಿನಿಮಾಗಳು ಮಾತ್ರವೇ ಅಲ್ಲದೆ ಹಲವು ಜಾಹೀರಾತುಗಳ ಆಫರ್‌ಗಳು ಸಹ ರಶ್ಮಿಕಾ ಪಾಲಿಗೆ ಬರುತ್ತಿವೆ.

ಕೆಲವು ಜಾಹೀರಾತುಗಳಲ್ಲಿ ಈಗಾಗಲೇ ನಟಿಸಿದ್ದಾರೆ ರಶ್ಮಿಕಾ ಮಂದಣ್ಣ ಆದರೆ ಇತ್ತೀಚೆಗೆ ರಶ್ಮಿಕಾ ನಟಿಸಿರುವ ಹೊಸ ಜಾಹಿರಾತು ಅವರ ಅಭಿಮಾನಿಗಳಿಗೆ ಹಾಗೂ ಕೆಲವು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ನಟಿ ರಶ್ಮಿಕಾ ಮಂದಣ್ಣ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ರಶ್ಮಿಕಾರ ವರ್ತನೆ ಸಮಂಜಸವಾಗಿಲ್ಲ. ಇದು ಜಾಹೀರಾತು ಬರೆದವರ ತಪ್ಪಾದರೂ ರಶ್ಮಿಕಾ ಏಕೆ ಇಂಥಹಾ ಜಾಹೀರಾತುಗಳನ್ನು ಒಪ್ಪಿಕೊಳ್ಳಬೇಕು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಒಳ ಉಡುಪಿನ ಜಾಹೀರಾತಲ್ಲಿ ರಶ್ಮಿಕಾ

ಒಳ ಉಡುಪಿನ ಜಾಹೀರಾತಲ್ಲಿ ರಶ್ಮಿಕಾ

ಮಾಚೊ ಬ್ರ್ಯಾಂಡ್‌ನ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ರಶ್ಮಿಕಾ ನಟಿಸಿದ್ದು, ರಶ್ಮಿಕಾ ಜೊತೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಸಹ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ರಶ್ಮಿಕಾ ಯೋಗ ಶಿಕ್ಷಕಿ ಆಗಿದ್ದು, ವಿಕ್ಕಿ ಕೌಶಲ್ ಯೋಗದ ಭಂಗಿಯೊಂದನ್ನು ಮಾಡುವಾಗ ಅವರು ತೊಟ್ಟಿರುವ ಒಳುಡುಪು ಕಾಣುತ್ತದೆ. ಕೂಡಲೇ ರಶ್ಮಿಕಾ ಆ ಒಳ ಉಡುಪನ್ನೇ ನೋಡುತ್ತಾ ನಿಂತು ಬಿಡುತ್ತಾರೆ. ಒಳ ಉಡುಪಿನ ಪ್ರಚಾರಕ್ಕಾಗಿ ಮಾಡಿರುವ ಈ ಜಾಹೀರಾತು ಸದಬಿರುಚಿಯಾಗಿಲ್ಲ ಎಂಬುದು ನೆಟ್ಟಿಗರ ವಾದ.

ಸದಭಿರುಚಿಯ ಜಾಹೀರಾತಲ್ಲ ಎಂಬ ಆರೋಪ

ಸದಭಿರುಚಿಯ ಜಾಹೀರಾತಲ್ಲ ಎಂಬ ಆರೋಪ

ಅದೇ ಬ್ರ್ಯಾಂಡ್‌ನ ಮತ್ತೊಂದು ಜಾಹೀರಾತಿನಲ್ಲಿ ವಿಕ್ಕಿ ಕೌಶನ್ ತಮ್ಮ ಯೋಗ ಮ್ಯಾಟ್‌ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಅದನ್ನು ರಶ್ಮಿಕಾ ಮಂದಣ್ಣ ಮೇಲಿನ ಕಪಾಟಿನಲ್ಲಿಟ್ಟಿರುತ್ತಾರೆ. ಮೇಲಿನ ಕಪಾಟಿನಲ್ಲಿರುವ ಯೋಗ ಮ್ಯಾಟ್‌ ಅನ್ನು ವಿಕ್ಕಿ ತೆಗೆದುಕೊಳ್ಳಲು ಯತ್ನಿಸಿದಾಗ ಅವರು ತೊಟ್ಟಿರುವ ಒಳ ಉಡುಪು ಕಾಣುತ್ತದೆ. ಇದನ್ನು ನೋಡುವ ರಶ್ಮಿಕಾ ಮನದಲ್ಲಿಯೇ ಸುಖಿಸುತ್ತಾರೆ. ಈ ಎರಡೂ ಜಾಹಿರಾತುಗಳು ಕೀಳು ಮಟ್ಟದ ಆಲೋಚನೆಯನ್ನು ಹೊಂದಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಗ್ಲಾಮರಸ್ ಆಗೇನು ಕಾಣಿಸಿಕೊಂಡಿಲ್ಲ ರಶ್ಮಿಕಾ

ಗ್ಲಾಮರಸ್ ಆಗೇನು ಕಾಣಿಸಿಕೊಂಡಿಲ್ಲ ರಶ್ಮಿಕಾ

ಜಾಹೀರಾತಿನಲ್ಲಿ ರಶ್ಮಿಕಾ ಗ್ಲಾಮರಸ್ ಆಗಿಯೇನೂ ಕಾಣಿಸಿಕೊಂಡಿಲ್ಲ ಅಥವಾ ತೀರಾ ಸೆಡಕ್ಟಿವ್ (ಮೋಹಕ ಮಾದರಿ) ರೀತಿಯ ನಟನೆಯನ್ನು ಮಾಡಿಲ್ಲ ಆದರೆ ಜಾಹೀರಾತು ಸೂಚಿಸುತ್ತಿರುವು ಉದ್ದೇಶ ಸ್ಪಷ್ಟ. ವ್ಯಕ್ತಿಯ ಒಳ ಉಡುಪು ನೋಡಿ ಯುವತಿಯೊಬ್ಬಳು ಖುಷಿ ಪಡುವುದು ಅಥವಾ ಮನದೊಳಗೆ ಸುಖಿಸುವುದು ಒಪ್ಪತಕ್ಕದ್ದಲ್ಲ ಎಂದು ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಲವು ಜಾಹೀರಾತುಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ

ಹಲವು ಜಾಹೀರಾತುಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ

ಮಾಚೊ ಒಳ ಉಡುಪುಗಳ ಜಾಹಿರಾತು ಅಲ್ಲದೆ ಹಲವು ಜಾಹೀರಾತುಗಳಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ವಿಶ್ವವಿಖ್ಯಾತ ಬ್ರ್ಯಾಂಡ್ ಮೆಕ್‌ಡೊನಾಲ್ಡ್ಸ್‌ಗೆ ರಶ್ಮಿಕಾ ಮಂದಣ್ಣ ರಾಯಭಾರಿ ಆಗಿದ್ದು, ಆ ಬ್ರ್ಯಾಂಡ್‌ನ ಹಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಖಜಾನಾ ಆಭರಣ ಮಳಿಗೆಯ ಜಾಹೀರಾತಿನಲ್ಲಿ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವು ಒಳ್ಳೆಯ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾದಲ್ಲಿ ಯಾವಾಗ ನಟಿಸುತ್ತಾರೆ ರಶ್ಮಿಕಾ?

ಕನ್ನಡ ಸಿನಿಮಾದಲ್ಲಿ ಯಾವಾಗ ನಟಿಸುತ್ತಾರೆ ರಶ್ಮಿಕಾ?

ರಶ್ಮಿಕಾ ಮಂದಣ್ಣ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಬಹುನಿರೀಕ್ಷಿತ ಸಿನಿಮಾ 'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದರ ಜೊತೆಗೆ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಮಲಯಾಳಂಗೂ ಪಾದಾರ್ಪಣೆ ಮಾಡಿದ್ದು ಅಲ್ಲಿ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಜೊತೆಗೆ ರಶ್ಮಿಕಾ ನಟಿಸಲಿದ್ದಾರೆ. ಕನ್ನಡ ಸಿನಿಮಾದಲ್ಲಿ ಯಾವಾಗ ನಟಿಸಲಿದ್ದೀರಿ ಎಂಬ ಪ್ರಶ್ನೆಗೆ ಇತ್ತೀಚೆಗೆ ಉತ್ತರಿಸಿರುವ ರಶ್ಮಿಕಾ, ''ಸದ್ಯಕ್ಕೆ ಸಮಯವಿಲ್ಲ'' ಎಂದಿದ್ದಾರೆ. 'ಪೊಗರು' ರಶ್ಮಿಕಾ ಮಂದಣ್ಣ ನಟಿಸಿದ್ದ ಕೊನೆಯ ಸಿನಿಮಾ.

More from Filmibeat

English summary
Actress Rashmika Mandanna acted in men's under garment advertisement. Rashmika's fans and few netizen express unhappiness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X