For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಜೊತೆ ರಶ್ಮಿಕಾ ಸಿನಿಮಾ: ಇಷ್ಟೊಂದು ಸಂಭಾವನೆ ಪಡೆದ್ರಾ ಕಿರಿಕ್ ಸುಂದರಿ?

  |

  ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಬಳಿಕ ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದ ಚಿತ್ರೀಕರಣ ಮುಗಿಯುವುದರೊಳಗೆ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ.

  Rashmika mandanna to become a daughter of amitha bachchan!

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ ಎನ್ನುವ ಮಾತು ಅನೇಕ ಸಮಯದಿಂದ ಕೇಳಿಬರುತ್ತಿದೆ. ಚಿತ್ರದಲ್ಲಿ ಅಮಿತಾಬ್ ನಿವೃತ್ತ ಆರ್ಮಿ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತಾಬ್ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸಿನಿಮಾಗೆ ಡೆಡ್ಲಿ ಎಂದು ಹೆಸರಿಡಲಾಗಿತ್ತು. ಆದರೀಗ ಸಿನಿಮಾದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಮುಂದೆ ಓದಿ..

  ಹೊಲದಲ್ಲಿ ಉಳುಮೆ ಮಾಡುತ್ತಿರುವ ನಟಿ ರಶ್ಮಿಕಾ: ವಿಡಿಯೋ ವೈರಲ್ಹೊಲದಲ್ಲಿ ಉಳುಮೆ ಮಾಡುತ್ತಿರುವ ನಟಿ ರಶ್ಮಿಕಾ: ವಿಡಿಯೋ ವೈರಲ್

  ಡೆಡ್ಲಿ ಶೀರ್ಷಿಕೆ ಬದಲಾವಣೆ

  ಡೆಡ್ಲಿ ಶೀರ್ಷಿಕೆ ಬದಲಾವಣೆ

  ಈಗಾಗಲೇ ಚಿತ್ರಕ್ಕೆ ಡೆಡ್ಲಿ ಎಂದು ಟೈಟಲ್ ಇಡಲಾಗಿತ್ತು. ಆದರೀಗ ಸಿನಿಮಾದ ಟೈಟಲ್ ಬದಲಾವಣೆ ಮಾಡಲಾಗಿದೆಯಂತೆ. ಚಿತ್ರಕ್ಕೆ ಗುಡ್ ಬಾಯ್ ಎಂದು ಶೀರ್ಷಿಕೆ ಇಡಲಾಗಿದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ಸಿನಿಮಾ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  ವಿಕಾಸ್ ಬಹ್ಲ್ ನಿರ್ದೇಶನ

  ವಿಕಾಸ್ ಬಹ್ಲ್ ನಿರ್ದೇಶನ

  ಅಂದ ಹಾಗೆ ಗುಡ್ ಬಾಯ್ ಸಿನಿಮಾಗೆ ಬಾಲಿವುಡ್ ನ ಖ್ಯಾತ ನಿರ್ದೇಶಕ ವಿಕಾಸ್ ಬಹ್ಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕ್ವೀನ್ ಮತ್ತು ಸೂಪರ್ 30 ಅಂತ ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕ ಜೊತೆ ರಶ್ಮಿಕಾ ಮಂದಣ್ಣ ಸಿನಿಮಾ ಮಾಡುತ್ತಿದ್ದಾರೆ.

  ಬಾಲಿವುಡ್ ಚಿತ್ರದ ಶೂಟಿಂಗ್ ಆರಂಭಿಸಿದ ರಶ್ಮಿಕಾ ಮಂದಣ್ಣಬಾಲಿವುಡ್ ಚಿತ್ರದ ಶೂಟಿಂಗ್ ಆರಂಭಿಸಿದ ರಶ್ಮಿಕಾ ಮಂದಣ್ಣ

  5 ಕೋಟಿ ರೂ. ಸಂಭಾವನೆ ಪಡೆದ ರಶ್ಮಿಕಾ

  5 ಕೋಟಿ ರೂ. ಸಂಭಾವನೆ ಪಡೆದ ರಶ್ಮಿಕಾ

  ಇನ್ನು ಮೂಲಗಳ ಪ್ರಕಾರ ರಶ್ಮಿಕಾ ಈ ಸಿನಿಮಾಗಾಗಿ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಅಮಿತಾಬ್ ಮಗಳಾಗಲು ರಶ್ಮಿಕಾ 5 ಕೋಟಿ ರೂ. ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಂದ ಹಾಗೆ ಗುಡ್ ಬಾಯ್ ಸಿನಿಮಾ ಇದೇ ತಿಂಗಳು 29ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

  ಮುಂಬೈನಲ್ಲೇ ಸೆಟಲ್ ಆಗ್ತಾರಾ ರಶ್ಮಿಕಾ ?

  ಮುಂಬೈನಲ್ಲೇ ಸೆಟಲ್ ಆಗ್ತಾರಾ ರಶ್ಮಿಕಾ ?

  ಈ ಸಿನಿಮಾದಲ್ಲಿ ನೀನಾ ಗುಪ್ತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಿಷನ್ ಮಜ್ನು ಮೂಲಕ ಬಾಲಿವುಡ್‌ನಲ್ಲಿ ಖಾತೆ ತೆರೆದ ರಶ್ಮಿಕಾ ಬಳಿಕ ಮುಂಬೈನಲ್ಲಿ ಮನೆ ಕೂಡ ಖರೀದಿಸಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ರಶ್ಮಿಕಾ ಮುಂಬೈನಲ್ಲೇ ಸೆಟಲ್ ಆಗುವ ಸಾಧ್ಯತೆ ಹೆಚ್ಚಿದೆ.

  English summary
  Actress Rashmika Mandanna And Amitabh Bachchan's new movie titled Good Boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X