ಮೊದಲ ದಿನವೇ 'ಪಠಾಣ್' ದಾಖಲೆ ಮುರಿದ ರಣಬೀರ್ ಕಪೂರ್- ರಶ್ಮಿಕಾ ನಟನೆಯ 'ಅನಿಮಲ್'!

ಅನಿಮಲ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮತ್ತು ಕಬೀರ್ ಸಿಂಗ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ತೆರೆಗೆ ಅಪ್ಪಳಿಸಿದೆ. ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಸಿನಿಮಾ, ಬಾಕ್ಸ್ ಅಫೀಸ್‌ನಲ್ಲಿ ಒಳ್ಳೆ ಕಮಾಲ್ ಮಾಡಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಫ್ಯಾಮಿಲಿ ಕ್ರೈಮ್ ಡ್ರಾಮಾ 'ಅನಿಮಲ್' ಮೊದಲ ದಿನವೇ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ದಾಖಲೆಯನ್ನು ಮುರಿದು ಹಾಕಿದೆ. Sacnilk ವರದಿ ಮಾಡಿದ ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನದಂದು 60 ಕೋಟಿ ರೂಪಾಯಿ ಗಳಿಸಿದೆ.

Rashmika Mandanna and Ranbir Kapoors Animal Box Office Collection Day 1

60 ಕೋಟಿ ರೂಪಾಯಿ ಗಳಿಸಿದ ಅನಿಮಲ್

ಅನಿಮಲ್ ಸಿನಿಮಾ ಮೊದಲ ದಿನ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ 49.50 ಕೋಟಿ ರೂಪಾಯಿ ಹಾಗೂ ತೆಲುಗಿನಲ್ಲಿ 10 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದೇ ವರದಿ ಈ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 100 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಲಿದೆ ಎಂದು ಭವಿಷ್ಯ ನುಡಿದಿದೆ.

2017 ರ ತೆಲುಗು ಬ್ಲಾಕ್‌ಬಸ್ಟರ್ ಅರ್ಜುನ್ ರೆಡ್ಡಿಯನ್ನು ನಿರ್ದೇಶನ ಮಾಡಿದ್ದ ಸಂದೀಪ್ ರೆಡ್ಡಿ ವಂಗಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಪುಷ್ಪ: ದಿ ರೂಲ್ ಮತ್ತು ಸೀತಾ ರಾಮಂ ಸಿನಿಮಾಗಳಂತಹ ಹಿಟ್ ಕೊಟ್ಟಿರುವ ರಶ್ಮಿಕಾ ಮಂದಣ್ಣ ಇದರಲ್ಲೂ ನಾಯಕಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ದೊಡ್ಡ ಹಿಟ್‌ಗಾಗಿ ಕಾಯುತ್ತಿರುವ ಅವರಿಗೆ ಇದು ಒಳ್ಳೆ ಚಾನ್ಸ್.

Rashmika Mandanna and Ranbir Kapoors Animal Box Office Collection Day 1

ಅನಿಮಲ್

ಅನಿಮಲ್‌ ತಂದೆ- ಮಗನ ನಡುವಿನ ಬಾಂಧವ್ಯವನ್ನು ತಿಳಿಸುವ, ತಂದೆಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರುವ ಮಗನ ಕುರಿತ ಸಿನಿಮಾ. ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೊತೆಗೆ ಅನಿಲ್ ಕಪೂರ್, ಬಾಬಿ ಡಿಯೋಲ್, ಶಕ್ತಿ ಕಪೂರ್, ಪ್ರೇಮ್ ಚೋಪ್ರಾ ಮತ್ತು ಟ್ರಿಪ್ತಿ ಡಿಮ್ರಿ ಕೂಡ ನಟಿಸಿದ್ದಾರೆ. ಚಿತ್ರವು ಬರೋಬ್ಬರಿ 3 ಗಂಟೆ 21 ನಿಮಿಷವಿದೆ.

'ಅನಿಮಲ್' ಸಿನಿಮಾದ ಫಸ್ಟ್ ಹಾಫ್ ಸ್ವಲ್ಪ ನಿಧಾನಗತಿಯಲ್ಲಿದೆ ಅಂತ ಅನಿಸಿದ್ದರೂ, ಸೆಕೆಂಡ್ ಹಾಫ್‌ನಲ್ಲಿ ವೇಗ ಕಂಡುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸೌತ್ ಇಂಡಿಯನ್ ಹುಡುಗಿಯ ಪಾತ್ರ ಮಾಡಿದ್ದಾರೆ. ಹಾಗಾಗಿ ಅವರ ಹಿಂದಿ ಸಹಿಸಿಕೊಳ್ಳಬಹುದು. ಇಡೀ ಸಿನಿಮಾವನ್ನು ರಣ್‌ಬೀರ್ ಕಪೂರ್ ಆವರಿಸಿಕೊಂಡಿದ್ದಾರೆ. ಅವರ ವೃತ್ತಿ ಬದುಕಿನಲ್ಲೇ ಉತ್ತಮ ಸಿನಿಮಾ ಎಂದು ಹಲವು ಮಂದಿ ಹೇಳಿದ್ದಾರೆ. ಜೊತೆಗೆ ಅನಿಲ್ ಕಪೂರ್ ಈ ಸಿನಿಮಾದಲ್ಲಿ ಸಪ್ಪೆಯಾಗಿದ್ದಾರೆ. ಅವರ ಆಕ್ಟಿಂಗ್‌ನಲ್ಲಿ ಜೀವವಿಲ್ಲ ಎಂದು ಹಲವು ಮಂದಿ ನೆಟ್ಟಿಗರು ಬರೆದುಕೊಂಡಿದ್ದಾರೆ.

ಅನಿಮಲ್ ಸಿನಿಮಾ ವಿಕ್ಕಿ ಕೌಶಲ್ ನಟಿಸಿರುವ ಮೇಘನಾ ಗುಲ್ಜಾರ್ ಅವರ 'ಶ್ಯಾಮ್ ಬಹದ್ದೂರ್' ಜೊತೆಗೆ ಸಿನಿಮಾ ಮಂದಿರಗಳಿಗೆ ಬಿಡುಗಡೆಯಾಗಿದೆ. 'ಶ್ಯಾಮ್ ಬಹದ್ದೂರ್' ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರ ಪಾತ್ರಕ್ಕೆ ಭಾರಿ ಮೇಚ್ಚುಗೆ ವ್ಯಕ್ತವಾಗಿದೆ. ಆದರೆ ಆ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ. Sacnilk ವರದಿ ಮಾಡಿದ ಆರಂಭಿಕ ಅಂದಾಜಿನ ಪ್ರಕಾರ, ಇದು ಭಾರತದಲ್ಲಿ ಮೊದಲ ದಿನ ಕೇವಲ 5 ಕೋಟಿ ರೂಪಾಯಿಯನ್ನು ಗಳಿಸಿದೆ.

More from Filmibeat

English summary
Animal Box Office Collection Day 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X