ರಶ್ಮಿಕಾ ಮಂದಣ್ಣ ಮೊದಲ ಬಾಲಿವುಡ್ ಚಿತ್ರ ರಿಲೀಸ್ ದಿನಾಂಕ ಪ್ರಕಟ!

ನಟಿ ರಶ್ಮಿಕಾ ಮಂದಣ್ಣ ಬ್ಯಾಕ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪುಷ್ಪ ಸಿನಿಮಾದ ಬಳಿಕ ರಶ್ಮಿಕಾಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಪುಷ್ಪ ಸಕ್ಸಸ್ ಬಳಿಕ ಬಾಲಿವುಡ್‌ನಲ್ಲಿ ರಶ್ಮಿಕಾ ಬೇಡಿಕೆ ಹೆಚ್ಚಾಗಿದ್ದು, ಕರಣ್ ಜೋಹರ್ ಅವರನ್ನು ಭೇಟಿ ಮಾಡಿಕೊಂಡು ಬಂದಿದ್ದಾರೆ ರಶ್ಮಿಕಾ.

ಪುಷ್ಪ ಚಿತ್ರದ ರಿಲೀಸ್‌ಗೂ ಮೊದಲೆ ರಶ್ಮಿಕಾ ಬಾಲಿವುಡ್‌ನ 2 ಚಿತ್ರಗಳಲ್ಲಿ ಅಭಿನಯಿಸಿದರು. ಈಗ ರಶ್ಮಿಕಾ ಅಭಿನಯದ ಮೊದಲ ಬಾಲಿವುಡ್ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಕನ್ನಡದ ನಂತರ ತೆಲುಗು, ತಮಿಳು ಈಗ ಬಾಲಿವುಡ್. ರಶ್ಮಿಕಾ ಮೊದಲ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ನಟಿ ರಶ್ಮಿಕಾ ಮೊದಲ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ಮಿಷನ್ ಮಜ್ನು' ಬಾಲಿವುಡ್‌ನ ನಿರೀಕ್ಷಿತ ಚಿತ್ರ. ಹಾಗಾಗಿ ಈ ಚಿತ್ರದ ಮೂಲಕವೂ ರಶ್ಮಿಕಾ ಸಕ್ಸಸ್ ಕಾಣುತ್ತಾರೆ ಎನ್ನಲಾಗುತ್ತಿದೆ.

ಚಿತ್ರದ ರಿಲೀಸ್ ದಿನಾಂಕ ಪ್ರಕಟ ಮಾಡಿದೆ 'ಮಿಷನ್ ಮಜ್ನು' ಚಿತ್ರತಂಡ. ಈ ಚಿತ್ರ ಈ ಹಿಂದೆ ಮೇ 13 2022ರಂದು ರಿಲೀಸ್ ದಿನಾಂಕವನ್ನು ನಿಗಧಿ ಮಾಡಿಕೊಂಡಿತ್ತು. ಆದರೆ ಈಗ ಚಿತ್ರದ ರಿಲೀಸ್ ದಿನಾಂಕ ಬದಲಾಗಿದ್ದು, ಜೂನ್ 10 2022ಕ್ಕೆ ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನು ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Rashmika Mandanna And Sidharth Malhotra Starrer Mission Majnu Gets New Release Date

ಜೊತೆಗೆ ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ "ಭಾರತ ಹೆಮ್ಮೆ ಪಡುವಂತಹ ಮಿಷನ್ ಇದು. ಹೇಳದೆ ಉಳಿದ ಇತಿಹಾಸದ ಪುಟದ ಅನುಭವ ಪಡೆಯಲು ನೀವು ಸಜ್ಜಾಗಿ. 2022 ಜೂನ್ 10ಕ್ಕೆ ಮಿಷನ್ ಮಜ್ನು ರಿಲೀಸ್." ಎಂದು ಬರೆದು, ಚಿತ್ರದ ಪೋಸ್ಟರ್ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

ಶಾಂತನು ಬಗ್ಚೀ ನಿರ್ದೇಶನದ ಮಿಷನ್ ಮಜ್ನೂ ನೈಜ ಘಟನೆ ಆಧಾರಿತ ಚಿತ್ರ. 2020ರ ಡಿಸೆಂಬರ್​ನಲ್ಲಿ ಸಿನಿಮಾ ಅನೌನ್ಸ್ ಮಾಡಲಾಯಿತು. ಇದೇ 2021ರ ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭ ಮಾಡಲಾಯಿತು. ಕೊರೊನಾ ಲಾಕ್ ಡೌನ್ ನಡುವೆ ಚಿತ್ರ ಸಂಪೂರ್ಣವಾಗಿ ಸಿದ್ಧವಾಗಿದೆ. ಸದ್ಯ ಹೊಸ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದೆ.

ಇನ್ನು ರಶ್ಮಿಕಾ ವಿಚಾರಕ್ಕೆ ಬರುವುದಾದರೆ, ಆಕೆ ಅಭಿನಯದ ಒಂದು ಬಾಲಿವುಡ್ ಚಿತ್ರ ಕೂಡ ರಿಲೀಸ್ ಆಗಿಲ್ಲ. ಆದರೆ ಮೊದಲೇ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ 'ಗುಡ್ ಬೈ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಸದ್ಯದಲ್ಲೇ ಆ ಚಿತ್ರ ಕೂಡ ತೆರೆಕಾಣಲಿದೆ. ಆದರೆ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ಗೆದ್ದರೆ ಬಾಲಿವುಡ್‌ನಲ್ಲಿ ಆಕೆಯ ಗ್ರಾಫ್ ಮತ್ತಷ್ಟು ಮೇಲೆ ಏರಲಿದೆ. ಚಿತ್ರ ಸಕ್ಸಸ್ ಆದರೆ ಅವರು ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಇದೆ.

ಸದ್ಯ ರಶ್ಮಿಕಾ ಅಭಿನಯದ ತೆಲುಗಿನ 'ಆಡವಾಳ್ಳು ಮೀಕು ಜೋಹರ್ಲು' ಚಿತ್ರ ರಿಲೀಸ್ ಆಗಿದೆ. 'ಪುಷ್ಪ ಭಾಗ 2' ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಲಿದ್ದಾರೆ. 'ಪುಷ್ಪ 2' ಬಿಟ್ಟರೆ ರಶ್ಮಿಕಾ ಕೈಯಲ್ಲಿ ಮತ್ಯಾವ ಸಿನಿಮಾ ಇಲ್ಲ. ಹೊಸ ಸಿನಿಮಾ ಯಾವುದೂ ಪ್ರಕಟ ಆಗಿಲ್ಲ.

More from Filmibeat

English summary
Rashmika Mandanna And Sidharth Malhotra Starrer Mission Majnu Gets New Release Date, Rashmika Tweet About It,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X