ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ಬಯಸಿದೊಂದು ಆಗಿದ್ದು ಇನ್ನೊಂದು

ಕನ್ನಡ ನಟಿಯರಾದ ರಶ್ಮಿಕಾ ಹಾಗೂ ಶ್ರೀಲೀಲಾ ಈಗ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ಇಬ್ಬರೂ ಕನ್ನಡ ಸಿನಿಮಾಗಳಿಗೆ ಗುಡ್ ಬೈ ಹೇಳಿ ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

ಅದ್ಯಾಕೋ ಇಬ್ಬರ ನಸೀಬು ಚೆನ್ನಾಗಿ ಇಲ್ಲ ಎನ್ನುವಂತಾಗಿದೆ. ರಶ್ಮಿಕಾ ಮಂದಣ್ಣ ಗೆಲುವಿನ ಓಟಕ್ಕೆ 'ಸಿಕಂದರ್' ಬ್ರೇಕ್ ಆಗಿದ್ದಾನೆ. ಅತ್ತ ಶ್ರೀಲೀಲಾ ನಟನೆಯ 'ರಾಬಿನ್‌ಹುಡ್' ಸಿನಿಮಾ ಹೀನಾಯವಾಗಿ ಸೋತಿದೆ. ಬರೀ ಸಿನಿಮಾ ಸೋತಿರುವುದು ಮಾತ್ರವಲ್ಲ ಇಬ್ಬರ ಪಾತ್ರಗಳ ಬಗ್ಗೆ ಟ್ರೋಲ್ ಶುರುವಾಗಿದೆ. ಸರಿಯಾದ ಪಾತ್ರ ಆಯ್ಕೆ ಮಾಡಿಕೊಳ್ಳಲಿಲ್ಲ ಎಂದು ಟೀಕೆ ವ್ಯಕ್ಯವಾಗುತ್ತಿದೆ.

Rashmika Mandanna and Srileela Face Setbacks as Sikandar amp amp Robin Hood Fail at Box Office

ನಿತಿನ್ ನಟನೆಯ 'ರಾಬಿನ್‌ಹುಡ್' ಸಿನಿಮಾ ಕಳೆದ ವಾರ ತೆರೆಗೆ ಬಂದಿದೆ. ವೆಂಕಿ ಕುಡುಮುಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಸ್ಟ್ರೀಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಾಮಿಡಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿತ್ತು.

ಎ. ಆರ್ ಮುರುಗದಾಸ್ ನಿರ್ದೇಶನದ 'ಸಿಕಂದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ರಶ್ಮಿಕಾ ಮಿಂಚಿದ್ದಾರೆ. ಈ ಸಂಭ್ರಮದಲ್ಲಿ ಇತ್ತೀಚೆಗೆ ಸಿನಿಮಾ ತೆರೆಗೆ ಬಂದಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಆದರೆ ಪ್ರೇಕ್ಷಕರು ಸಿನಿಮಾ ನೋಡಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಪ್ರೇಕ್ಷಕರು ಬರದೇ ಶೋಗಳನ್ನು ಕ್ಯಾನ್ಸಲ್ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Rashmika Mandanna and Srileela Face Setbacks as Sikandar amp amp Robin Hood Fail at Box Office

ಅಚ್ಚರಿಯ ಸಂಗತಿ ಅಂದರೆ 'ರಾಬಿನ್ ಹುಡ್' ಚಿತ್ರಕ್ಕೆ ಮೊದಲು ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದರು. ಈ ಹಿಂದೆ ವೆಂಕಿ ಕುಡುಮುಲ ನಿರ್ದೇಶನದ 'ಭೀಷ್ಮ' ಚಿತ್ರದಲ್ಲಿ ನಿತಿನ್ ಹಾಗೂ ರಶ್ಮಿಕಾ ನಟಿಸಿ ಗೆದ್ದಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಆದರೆ ದಿಢೀರನೆ ರಶ್ಮಿಕಾ ಚಿತ್ರದಿಂದ ಹೊರ ಬಂದಿದ್ದರು. ಹಾಗಾಗಿ ಆ ಪಾತ್ರ ಶ್ರೀಲೀಲಾ ಪಾಲಾಗಿತ್ತು.

'ಸಿಕಂದರ್' ಅವಕಾಶ ಸಿಗುತ್ತಿದ್ದಂತೆ ಡೇಟ್ಸ್ ಸಮಸ್ಯೆ ಕಾರಣ ಕೊಟ್ಟು 'ರಾಬಿನ್‌ಹುಡ್' ಚಿತ್ರದಿಂದ ರಶ್ಮಿಕಾ ಹೊರ ನಡೆದಿದ್ದರು. 'ರಾಬಿನ್‌ಹುಡ್' ಫಲಿತಾಂಶ ನೋಡಿದ ಮೇಲೆ ಚಿತ್ರದಿಂದ ಕೊಡಗಿನ ಕುವರಿ ಹೊರಬಂದಿದ್ದು ಒಳ್ಳೆಯೇ ಆಯಿತು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಆದರೆ ಅತ್ತ 'ಸಿಕಂದರ್' ಸಿನಿಮಾ ಕೂಡ ಸೋತು ನಿರಾಸೆ ಮೂಡಿಸಿದೆ.

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿತ್ತು. ಇತ್ತೀಚೆಗೆ ಆಕೆ ನಟಿಸಿದ 'ಅನಿಮಲ್', 'ಪುಷ್ಪ'-2, 'ಛಾವ' ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದವು. ಆದರೆ 'ಸಿಕಂದರ್' ಸೋಲಿನ ಸುಳಿಗೆ ಸಿಲುಕಿದೆ. ಸಲ್ಮಾನ್ ಖಾನ್ ರೀತಿಯ ಸ್ಟಾರ್ ನಟನೊಟ್ಟಿಗೆ ನಟಿಸಿ ಪ್ರಯೋಜನವಾಗದಂತಾಗಿದೆ. 'ತಮ' ಎಂಬ ಮತ್ತೊಂದು ಬಾಲಿವುಡ್ ಸಿನಿಮಾ ಚೆಲುವೆಯ ಕೈಯಲ್ಲಿದೆ.

ಟಾಲಿವುಡ್‌ ಅಂಗಳದಲ್ಲಿ ಶ್ರೀಲೀಲಾ ಕ್ರೇಜ್ ಕಮ್ಮಿ ಆಗಿದೆ. ಸದ್ಯ ಒಂದು ತಮಿಳು ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ 2 ಅವಕಾಶಗಳು ಸಿಕ್ಕಿತ್ತು. ಕಾರ್ತಿಕ್ ಆರ್ಯನ್ ಜೋಡಿಯಾಗಿ ಇನ್ನು ಹೆಸರಿಡದ ಚಿತ್ರದಲ್ಲಿ ಕಿಸ್ ಬೆಡಗಿ ನಟಿಸುತ್ತಿದ್ದಾರೆ. ಆತನ ಜೊತೆಗೆ 'ಪತಿ ಪತ್ನಿ ಔರ್ ವೋ'-2 ಚಿತ್ರದಲ್ಲಿ ಆಕೆ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ ಆಕೆಯ ಜಾಗಕ್ಕೆ ರಶಾ ತದಾನಿ ಬಂದಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಒಟ್ಟಾರೆ ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ಇಬ್ಬರ ಲೆಕ್ಕಾಚಾರ ತಪ್ಪಾಗುತ್ತಿದೆ. ಕಿಸ್ ಬೆಡಗಿ ಅಂತೂ ಇದೀಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದು ಮುಂದೆ ಅಲ್ಲಿ ಹೇಗೆ ಕಮಾಲ್ ಮಾಡುತ್ತಾರೆ ಕಾದು ನೋಡಬೇಕಿದೆ.

More from Filmibeat

English summary
Rashmika Mandanna and Srileela face a rough patch in Bollywood, Fans and critics question their recent film choices.
Read more about: rashmika mandanna sreeleela
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X