ಮಾಲ್ಡೀವ್ಸ್‌ಗೆ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಟೂರ್? ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೇಗೆ?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಗುಸುಗುಸು ಬಹಳ ದಿನಗಳಿಂದ ಕೇಳಿಬರ್ತಿದೆ. ಆದರೆ ಈ ಬಗ್ಗೆ ಇಬ್ಬರು ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಈ ಪ್ರಶ್ನೆಗೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎನ್ನುವ ಅದೇ ರೆಡಮೇಡ್ ಉತ್ತರ ಕೊಡುತ್ತಾ ಬರುತ್ತಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಂದ ಕೊಂಚ ಬಿಡುವು ಮಾಡಿಕೊಂಡಿರುವ ಇಬ್ಬರು ಮಾಲ್ಡೀವ್ಸ್‌ಗೆ ರೊಮ್ಯಾಂಟಿಕ್ ಟೂರ್ ಹೋಗಿದ್ದಾರೆ ಎನ್ನಲಾಗ್ತಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಒಬ್ಬರಾದ ಮೇಲೆ ಮತ್ತೊಬ್ಬರು ಕಾಣಿಸಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಸಿನಿಮಾ ಸೋಲಿನಿಂದ ಹೊರಬರದ ವಿಜಯ್ ಸದ್ಯ ಯಾವುದೇ ಚಿತ್ರದಲ್ಲಿ ನಟಿಸ್ತಿಲ್ಲ. ಅಮಿತಾಬ್ ಬಚ್ಚನ್ ಜೊತೆಗೆ ರಶ್ಮಿಕಾ ಮಂದಣ್ಣ ನಟನೆಯ 'ಗುಡ್‌ಬೈ' ಸಿನಿಮಾ ಬಿಡುಗಡೆಯಾಗಿದೆ. ಇದು ಕೊಡಗಿನ ಕುವರಿಯ ಚೊಚ್ಚಲ ಬಾಲಿವುಡ್ ಸಿನಿಮಾ. 'ಗುಡ್‌ಬೈ' ರಿಲೀಸ್ ಬೆನ್ನಲ್ಲೇ ರಶ್ಮಿಕಾ ದ್ವೀಪರಾಷ್ಟ್ರದ ಫ್ಲೈಟ್ ಏರಿದ್ದಾರೆ. 'ಗೀತಾ ಗೋವಿಂದಂ' ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿ ಮೋಡಿ ಮಾಡಿದ್ದಾರೆ. ನಂತರ ಇವರಿಬ್ಬರು ನಟಿಸಿದ 'ಡಿಯರ್ ಕಾಮ್ರೆಡ್' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.

'ಗೀತಾ ಗೋವಿಂದಂ' ಚಿತ್ರದಲ್ಲಿ ವಿಜಯ್ ದೇರವಕೊಂಡ ಹಾಗೂ ರಶ್ಮಿಕಾ ಮಂದಣ್ಣ ಲಿಪ್‌ಲಾಕ್ ವಿಚಾರ ಭಾರೀ ಸದ್ದು ಮಾಡಿತ್ತು. ಇದೇ ಕಾರಣಕ್ಕೆ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಕೂಡ ಮುರಿದು ಬಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಸದ್ಯ ಇಬ್ಬರು ತಮ್ಮ ತಮ್ಮ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸಿದ್ದಾರೆ.

ವಿಜಯ್ - ರಶ್ಮಿಕಾ ರೊಮ್ಯಾಂಟಿಕ್ ಟೂರ್?

ವಿಜಯ್ - ರಶ್ಮಿಕಾ ರೊಮ್ಯಾಂಟಿಕ್ ಟೂರ್?

ದಿನದಿಂದ ದಿನಕ್ಕೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಬಾಂಧವ್ಯ ಗಟ್ಟಿಯಾಗುತ್ತಿದೆಯಂತೆ. ಇಬ್ಬರೂ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರ್ತಿದೆ. ರಜೆಯ ಮಜೆ ಕಳೆಯಲು ವಿಜಿ, ರೋಶ್ ದ್ವೀಪರಾಷ್ಟ್ರಕ್ಕೆ ರೊಮ್ಯಾಂಟಿಕ್ ಟೂರ್ ಹೋಗಿದ್ದಾರೆ ಎನ್ನುವ ಗುಸುಗುಸು ಬಿಟೌನ್‌ನಲ್ಲಿ ಕೇಳಿಬರ್ತಿದೆ. ಇಬ್ಬರು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗಿದೆ. ಮದುವೆಗೂ ಮುನ್ನ ರೊಮ್ಯಾಂಟಿಕ್ ಟೂರ್ ಹೋಗ್ತಿದ್ದಾರಾ? ಎಂದು ಕೆಲವರು ಹುಬ್ಬೇರಿಸಿದ್ದಾರೆ.

ರಶ್ಮಿಕಾ- ವಿಜಯ್ ಏರ್‌ಪೋರ್ಟ್ ಲುಕ್ ಸೂಪರ್

ರಶ್ಮಿಕಾ- ವಿಜಯ್ ಏರ್‌ಪೋರ್ಟ್ ಲುಕ್ ಸೂಪರ್

ಮುಂಬೈ ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಿಕ್ ಬೆಡಗಿ ದೊಗಲೇ ಪ್ಯಾಂಟು, ಟಾಪ್‌ನಲ್ಲಿ ಮೇಕಪ್ ಇಲ್ಲದೇ ದರ್ಶನ ಕೊಟ್ಟಿದ್ದಾರೆ. ಫೋಟೊಗ್ರಾಫರ್‌ಗಳನ್ನು ಕಂಡು ಮಾಸ್ಕ್ ತೆಗೆದು ಮಾತನಾಡಿಸಿ ಕೈಬೀಸಿ ಹೊರಟಿದ್ದಾರೆ. ಇನ್ನು ದೊಗಲೇ ಟೀಶರ್ಟ್, ಪ್ಯಾಂಟ್‌ನಲ್ಲಿ ಸನ್‌ ಗ್ಲಾಸ್ ತೊಟ್ಟು ಮೊಬೈಲ್ ನೋಡುತ್ತಾ ವಿಜಯ್ ದೇವರಕೊಂಡು ಏರ್‌ಪೋರ್ಟ್ ಒಳಗೆ ಹೋಗಿದ್ದಾರೆ. ಈ ಫೋಟೊಗಳು ಈಗ ಸಖತ್ ಸದ್ದು ಮಾಡ್ತಿದೆ.

ಮತ್ತೆ ಒಂದೇ ಚಿತ್ರದಲ್ಲಿ ವಿಜಯ್ - ರಶ್ಮಿಕಾ

ಮತ್ತೆ ಒಂದೇ ಚಿತ್ರದಲ್ಲಿ ವಿಜಯ್ - ರಶ್ಮಿಕಾ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ಗಾಸಿಪ್ ಬಗ್ಗೆ ರಶ್ಮಿಕಾ ಮಾತನಾಡಿದ್ದರು. ''ನಾನು ಹಾಗೂ ವಿಜಯ್ ಸಾಕಷ್ಟು ಸಿನಿಮಾಗಳನ್ನು, ಜಾಹೀರಾತುಗಳನ್ನು ಒಟ್ಟಿಗೆ ಮಾಡಿದ್ದೇವೆ. ಅದೂ ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಹಾಗಾಗಿ ಈ ರೀತಿ ಸುದ್ದಿಗಳು ಹಬ್ಬಿರಬಹುದು. ನನಗೆ ಉದ್ಯಮ ಏನು ಎಂಬುದು ಅಷ್ಟಾಗಿ ಗೊತ್ತಿಲ್ಲದೇ ಇರುವಾಗ ನಾನು ವಿಜಯ್ ಜೊತೆ ಕೆಲಸ ಮಾಡಿದೆ. ವಿಜಯ್‌ಗೂ ಸಹ ನಾಯಕನಾಗಿ ಆಗಷ್ಟೆ ಮೇಲೆ ಬರುತ್ತಿದ್ದ ಇಬ್ಬರಿಗೂ ಈ ಉದ್ಯಮ ಹೊಸದು. ಆ ಸಮಯದಲ್ಲಿ ಒಂದೇ ಮನಸ್ಥಿತಿಯ ಇಬ್ಬರು ಒಟ್ಟಿಗೆ ನಟಿಸಿದಾಗ ಗೆಳೆಯರಾಗುವುದು ಸಹಜ. ಅಲ್ಲದೆ, ನನಗೆ ಹೈದರಾಬಾದ್‌ನಲ್ಲಿ ಒಂದು ಗೆಳೆಯರ ಗ್ಯಾಂಗ್ ಇತ್ತು, ವಿಜಯ್‌ಗೂ ಒಂದು ಗ್ಯಾಂಗ್ ಇತ್ತು. ನಾವೆಲ್ಲರೂ ಒಟ್ಟಿಗೆ ಸೇರಿ ಚಿಲ್ ಮಾಡುತ್ತಿದ್ದೆವು, ಇದನ್ನೇ ಜನ ಲವ್, ಡೇಟಿಂಗ್ ಎಂದುಕೊಂಡರು. ಇನ್ನು ಶೀಘ್ರದಲ್ಲೇ ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸ್ತೀವಿ'' ಎಂದು ಹೇಳಿದ್ದರು.

'ಗುಡ್‌ಬೈ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ

'ಗುಡ್‌ಬೈ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ

ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ನಂತರ ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ರೋಶ್ ನಟನೆಯ ಚೊಚ್ಚಲ ಬಾಲಿವುಡ್ ಸಿನಿಮಾ 'ಗುಡ್‌ಬೈ' ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಫ್ಯಾಮಿಲಿ ಕಾಮಿಡಿ ಚಿತ್ರದಲ್ಲಿ ಬಿಗ್‌ಬಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ಮಿಂಚಿದ್ದಾರೆ. ಬಾಲಿವುಡ್‌ನಲ್ಲಿ ಅದು ಕೂಡ ಮೊದಲ ಪ್ರಯತ್ನದಲ್ಲೇ ಬಿಗ್‌ಬಿ ಜೊತೆ ನಟಿಸೊ ಅವಕಾಶ ಸಿಕ್ಕಿರೋದು ಕೊಡಗಿನ ಚೆಲುವೆಯ ಅದೃಷ್ಟವೇ ಸರಿ. ಇಷ್ಟು ದಿನ ಪೋಸ್ಟರ್, ಟೀಸರ್, ಸಾಂಗ್ಸ್‌ನಿಂದ ಸದ್ದು ಮಾಡಿದ 'ಗುಡ್‌ಬೈ' ಸಿನಿಮಾ ತೆರೆಗಪ್ಪಳಿಸಿದೆ. ಆದರೆ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

More from Filmibeat

English summary
Rashmika Mandanna and Vijay Deverakonda fly together to Maldives for Romantic Vacation. Vijay Deverakonda and Rashmika Mandanna were spotted at the Mumbai airport. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X