ವೇದಿಕೆಯಲ್ಲೇ F*** ಪದ ಬಳಸಿದ ರಶ್ಮಿಕಾ ಮಂದಣ್ಣ; ಕೂಡಲೇ ಕ್ಷಮೆಯಾಚನೆ

ಮದುವೆ ಬಳಿಕ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. 'ರಣಬಾಲಿ', 'ಮೈಸಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಕಾಕ್‌ಟೇಲ್- 2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಫಸ್ಟ್ ಲುಕ್ ಲಾಂಚ್ ಈವೆಂಟ್ ಇತ್ತೀಚೆಗೆ ನಡೆದಿದೆ. 2 ಹಾಡುಗಳು ಬಿಡುಗಡೆಯಾಗಿದೆ. ಶಾಹಿದ್ ಕಪೂರ್, ಕೃತಿ ಸನೂನ್ ಜೊತೆಗೆ ಈ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.

ಸಿಕ್ಕಾಪಟ್ಟೆ ಬಿಂದಾಸ್ ಅವತಾರಗಳಲ್ಲಿ ರಶ್ಮಿಕಾ ಹಾಗೂ ಕೃತಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಹೊಮಿ ಅದಜಾನಿಯ 'ಕಾಕ್‌ಟೇಲ್- 2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಡೋಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಫಸ್ಟ್ ಲುಕ್ ಲಾಂಚ್ ಈವೆಂಟ್ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ಬಾಯ್ತಪ್ಪಿ F*** ಎಂಬ ಅಸಭ್ಯ ಪದ ಬಳಕೆ ಮಾಡಿದ್ದಾರೆ. ಕೂಡಲೇ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.

Rashmika Mandanna apologises after using F-word in cocktail 2 film promotional event

ಕೃತಿ ಸನೂನ್ ಬಗ್ಗೆ ಮಾತನಾಡುತ್ತಾ ರಶ್ಮಿಕಾ ಈ ಪದ ಬಳಸಿದ್ದಾರೆ. ಕೃತಿ ನೀನು ಸಿನಿಮಾದಲ್ಲಿ ನಿಜಕ್ಕೂ ಸಖತ್ F**** ಹಾಟ್ ಆಗಿ ಕಾಣಿಸಿಕೊಂಡಿದ್ದೀಯಾ ಎಂದು ಹೇಳಿದ್ದಾರೆ. ಆ ಪದ ತಪ್ಪು ಎಂದು ಅರ್ಥವಾಗುತ್ತಿದ್ದಂತೆ "ಕ್ಷಮಿಸಿ, ಆ ಪದ ಮ್ಯೂಟ್ ಮಾಡಿ" ಎಂದು ಮನವಿ ಮಾಡಿದ್ದಾರೆ. ಆದರೂ ಲೈವ್‌ನಲ್ಲಿ ವೀಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ರಶ್ಮಿಕಾ ಮುಜುಗರ ಎದುರಿಸುವಂತಾಗಿದೆ. 'ಥಮ್ಮಾ' ಬಳಿಕ 'ಕಾಕ್‌ಟೇಲ್- 2' ಮೂಲಕ ಮತ್ತೆ ರಶ್ಮಿಕಾ ಬಾಲಿವುಡ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಚಿತ್ರದಲ್ಲಿ ರಶ್ಮಿಕಾ ಹಾಗೂ ಕೃತಿ ಸಲಿಂಗ ಕಾಮಿಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 10 ವರ್ಷಗಳ ಹಿಂದೆ ಬಂದಿದ್ದ 'ಕಾಕ್‌ಟೇಲ್' ಸಿನಿಮಾ ಹಿಟ್ ಆಗಿತ್ತು. ಫನ್, ಜಾಲಿ, ಬಿಕಿನಿ ಬಾಲೆಯರ ಗ್ಲಾಮರ್ ಚಿತ್ರಕ್ಕಿತ್ತು. ಇದೀಗ 'ಕಾಕ್‌ಟೇಲ್'-2 ಚಿತ್ರದಲ್ಲೂ ಅದೇ ಫ್ಲೇವರ್ ಇರಲಿದೆ. ಜೂನ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮೇ 19ರಂದು ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ.

ಮದುವೆ ಬಳಿಕ ಬಿಡುಗಡೆ ಆಗುತ್ತಿರುವ ರಶ್ಮಿಕಾ ನಟನೆಯ ಮೊದಲು ಸಿನಿಮಾ ಇದು. ಅದರಲ್ಲೂ ಬಾಲಿವುಡ್ ಸಿನಿಮಾ. ಹಾಗಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಚಿತ್ರಕ್ಕಾಗಿ ಕೊಡಗಿನ ಬೆಡಗಿ ಗ್ಲಾಮರ್ ಡೋಸ್ ಹೆಚ್ಚಿಸಿ ಬಿಕಿನಿ ಧರಿಸಿದ್ದಾರೆ ಎನ್ನಲಾಗ್ತಿದೆ. 'ಕಾಕ್‌ಟೇಲ್- 2' ಸಿನಿಮಾ ಕಾರ್ಯಕ್ರಮದಲ್ಲೇ ರಶ್ಮಿಕಾ ಮಂದಣ್ಣ ಭುಜದ ಮೇಲೆ ನಟ ಶಾಹಿದ್ ಕಪೂರ್ ಕೈ ಹಾಕಿದ್ದಾರೆ. ಈ ವೇಳೆ ರಶ್ಮಿಕಾ ಅದಕ್ಕೆ ನಿರಾಕರಿಸಿದ್ದಾರೆ. ಬಳಿಕ ಚಿತ್ರದ ನಿರ್ದೇಶಕ ಹೋಮಿ ಆದಜಾನಿಯಾ ಭುಜದ ಮೇಲೆ ಕೈ ಹಾಕಿದ್ದಾಗ ಸುಮ್ಮನೆ ಇರುವುದು ಕಂಡುಬಂದಿದೆ. ಯಾಕೆ ಹೀಗೆ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

2012ರಲ್ಲಿ ಬಂದಿದ್ದ 'ಕಾಕ್‌ಟೇಲ್' ಚಿತ್ರಕ್ಕೂ ಹೋಮಿ ಅದಜಾನಿಯಾ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಹಿಟ್ ಆಗಿತ್ತು. ಸೈಫ್ ಅಲಿಖಾನ್, ದೀಪಿಕಾ ಪಡುಕೋಣೆ, ಡೈನಾ ಪೆಂಟಿ, ಡಿಂಪಲ್ ಕಪಾಡಿಯಾ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೂ ಈಗ ಬರುತ್ತಿರುವ ಚಿತ್ರಕ್ಕೂ ಇರುವ ಲಿಂಕ್ ಏನು ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

ಮದುವೆಯಾದ ಒಂದೇ ವಾರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತಮ್ಮ ಸಿನಿಮಾ ಕೆಲಸಗಳಿಗೆ ಮರಳಿದ್ದರು. ಇದನ್ನೆಲ್ಲಾ ಗಮನಿಸಿದರೆ ಕೊಡಗಿನ ಚೆಲುವೆ ಸದ್ಯಕ್ಕೆ ಯಾವುದೇ ಬ್ರೇಕ್ ತೆಗೆದುಕೊಳ್ಳುವಂತೆ ಕಾಣ್ತಿಲ್ಲ. 'ರಣಬಾಲಿ' ಚಿತ್ರದಲ್ಲಿ ಪತಿ ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸುತ್ತಿದ್ದಾರೆ. ಇದು ಇಬ್ಬರ ಕಾಂಬಿನೇಷನ್‌ನಲ್ಲಿ ಬರ್ತಿರೋ 3ನೇ ಸಿನಿಮಾ. ಇನ್ನು ಐತಿಹಾಸಿಕ ಕಥಾಹಂದರ 'ಮೈಸಾ' ಚಿತ್ರವೂ ನಿರೀಕ್ಷೆ ಮೂಡಿಸಿದೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X