ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ ಇದೀಗ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ. ಕನ್ನಡದ ನಂತರ, ತೆಲುಗು ಮತ್ತು ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ' ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ತಷ್ಟು ರಶ್ಮಿಕಾ ಕ್ರೇಜ್ ಹೆಚ್ಚಿದೆ. ಈ ಒಂದೇ ಚಿತ್ರದ ಮೂಲಕ ನಾರ್ತ್‌ನಲ್ಲೂ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಅವರ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿ ತನಕ ಒಂದು ಸಿನಿಮಾ ಕೂಡ ತೆರೆಕಂಡಿಲ್ಲ.

ಇದೀಗ ರಶ್ಮಿಕಾ ಅಭಿಮಾನಿಗಳಿಗೆ ಸಿಹಿ-ಸುದ್ದಿ ಸಿಕ್ಕಿದೆ. ಅಂತೂ ಇಂತೂ ರಶ್ಮಿಕಾ ನಟನೆಯ ಮೊದಲ ಬಾಲಿವುಡ್ ಸಿನಿಮಾ ತೆರೆಗೆ ಬರುತ್ತಿದೆ. ಈ ಹಿಂದೆಯೇ ಗುಡ್ ಬೈ ಚಿತ್ರದ ರಿಲೀಸ್ ದಿನಾಂಕ ಪ್ರಕಟಗೊಂಡಿತ್ತು. ಇದೀಗ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.

ರಶ್ಮಿಕಾ ಗುಡ್ ಬೈ ಚಿತ್ರದ ಪೋಸ್ಟರ್ ರಿಲೀಸ್!

ರಶ್ಮಿಕಾ ಗುಡ್ ಬೈ ಚಿತ್ರದ ಪೋಸ್ಟರ್ ರಿಲೀಸ್!

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಬಳಿಕ, ಅದೃಷ್ಟ ಒಲಿದು ಬಂತು. ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಯಾವುದೋ ಸಿನಿಮಾ ಮಾಡುವುದರ ಬದಲು ಹೆಸರಾಂತ ಕಲಾವಿದರು ಮತ್ತು ಹೆಸರಾಂತ ಟೀಮ್ ಜೊತೆಗೆ ಸೇರಿಕೊಂಡು ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಶ್ಮಿಕಾ ಬಾಲಿವುಡ್ ಸಿನಿಮಾಗಳ ಲಿಸ್ಟ್ ನಲ್ಲಿ ಇರುವುದು ಎಲ್ಲವೂ ಬಹುತೇಕ ದೊಡ್ಡ ಸಿನಿಮಾಗಳೇ. ಆ ಸಾಲಿನಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಗುಡ್‌ ಬೈ' ಸಿನಿಮಾ ಕೂಡ ಒಂದು. ಈ ಚಿತ್ರ ಇದೇ ಅಕ್ಟೋಬರ್ 7ಕ್ಕೆ ತೆರೆಗೆ ಬರ್ತಿದೆ. ಈಗ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ.

ಬಿಗ್ ಬಿ ಮಗಳ ಪಾತ್ರದಲ್ಲಿ ರಶ್ಮಿಕಾ!

ಬಿಗ್ ಬಿ ಮಗಳ ಪಾತ್ರದಲ್ಲಿ ರಶ್ಮಿಕಾ!

ಇನ್ನು 'ಗುಡ್ ಬೈ' ಚಿತ್ರದ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರ ಏನು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಇಗ ಈ ಕುತೂಲಕ್ಕೆ ತೆರೆಬಿದ್ದಿದೆ. ನಟಿ ರಶ್ಮಿಕಾ ಮಂದಣ್ಣ, ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಇದನ್ನು ನಟಿ ರಶ್ಮಿಕಾ ಮಂದಣ್ಣ ರಿವಿಲ್ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ರಶ್ಮಿಕಾ ಮತ್ತು ಅಮಿತಾಬ್ ಬಚ್ಚನ್ ಗಾಲೀ ಪಟವನ್ನು ಹಾರಿಸುತ್ತಿದ್ದಾರೆ. ಈ ಪೋಸ್ಟರ್ ಹಂಚಿಕೊಂಡಿರುವ ರಶ್ಮಿಕಾ 'ಅಪ್ಪ ಮತ್ತು ನಾನು ಅಕ್ಟೋಬರ್ 7ಕ್ಕೆ ನಿಮ್ಮ ಕುಟುಂಬನ್ನು ಭೇಟಿಯಾಗಲು ಬರುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಅಕ್ಟೋಬರ್ 7ಕ್ಕೆ ಗುಡ್ ಬೈ ರಿಲೀಸ್!

ಅಕ್ಟೋಬರ್ 7ಕ್ಕೆ ಗುಡ್ ಬೈ ರಿಲೀಸ್!

ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಗುಡ್ ಬೈ' ಸಿನಿಮಾದ ರಿಲೀಸ್ ದಿನಾಂಕ ನಿಗದಿಯಾಗಿದೆ. ರಶ್ಮಿಕಾ ಸಾಲು ಸಾಲಾಗಿ ಬಾಲಿವುಡ್‌ನಲ್ಲಿ ಸಿನಿಮಾಗಳನ್ನ ಮಾಡುತ್ತಿದ್ದರು ಕೂಡ ಯಾವೊಂದು ಸಿನಿಮಾವೂ ಇನ್ನೂ ರಿಲೀಸ್ ಆಗಿಲ್ಲ. ಆದರೆ ಈಗ 'ಗುಡ್ ಬೈ' ಸಿನಿಮಾ ರಿಲೀಸ್ ದಿನಾಂಕ ಪ್ರಕಟವಾಗಿದೆ. ಹಾಗಾಗಿ ರಿಲೀಸ್ ಆಗ್ತಿರುವ ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.

ಮಿಷನ್ ಮಜ್ನು ರಿಲೀಸ್ ಲೇಟ್!

ಮಿಷನ್ ಮಜ್ನು ರಿಲೀಸ್ ಲೇಟ್!

ಅಷ್ಟಕ್ಕೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಮೊಟ್ಟಮೊದಲ ಹಿಂದಿ ಸಿನಿಮಾ 'ಮಿಷನ್ ಮಜ್ನು'. ಈ ಸಿನಿಮಾ ಈಗಾಗಲೇ ಹಲವು ಬಾರಿ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿತ್ತು. ಆದರೆ ಕಾರಣಾಂತರಗಳಿಂದ ಹಲವು ಬಾರಿ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿತ್ತು. ಆದ್ರೀಗ 'ಮಿಷನ್ ಮಜ್ನು' ಸಿನಿಮಾ ರಿಲೀಸ್ ಯಾವಾಗ ಎನ್ನುವ ಬಗ್ಗೆ ಚಿತ್ರತಂಡ ಇನ್ನು ಕೂಡ ಖಚಿತಪಡಿಸಿಲ್ಲ.

More from Filmibeat

English summary
Rashmika Mandanna As Amitabh bachchan Daughter In 'Good Bye' Film Releasing On October 7th, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X