ಇದು ಕ್ರೇಜ್ ಅಂದ್ರೆ, ದೇವರ ನಾಡಿನಲ್ಲಿ ರಶ್ಮಿಕಾ ಮಂದಣ್ಣ ನೋಡಲು ನೂಕುನುಗ್ಗಲು..!
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.
ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್.. ಟಾಲಿವುಡ್‌ನಿಂದ ಕಾಲಿವುಡ್.. ಕಾಲಿವುಡ್‌ನಿಂದ ಮರಳಿ ಟಾಲಿವುಡ್‌ಗೆ ಬಂದು ಆ ನಂತರ ಸೀದಾ ಬಾಲಿವುಡ್ ಗೆ ಹೋದ ರಶ್ಮಿಕಾಗೆ ಕೇವಲ ಆಂಧ್ರ.. ಮುಂಬೈ ಅಲ್ಲದೇ ದೇಶದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ದೇವರ ನಾಡು ಕೇರಳದಲ್ಲಿ ನೂಕು ನುಗ್ಗಲು ನಡೆದಿದೆ.

ಹೌದು, ಪುಷ್ಪಾ -02 ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ರಶ್ಮಿಕಾ, ಮೊನ್ನೆ ಕೇರಳ ರಾಜ್ಯಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಬೃಹತ್ ಚಿನ್ನಾಭರಣ ಮಳಿಗೆಯೊಂದನ್ನು ಉದ್ಘಾಟಿಸುವ ಮೂಲಕ ಶುಭಾಶಯ ಕೋರಿದರು. ಇಡೀ ಇವೆಂಟ್‌ನಲ್ಲಿ ನೂತನ ಮಳಿಗೆ ಮಾತ್ರವಲ್ಲದೇ ಹಸಿರು ಸೀರೆಯಲ್ಲಿ ಬೊಂಬೆಯಂತೆ ಮಿಂಚುತ್ತಿದ್ದ ನಟಿ ರಶ್ಮಿಕಾ ಅವರೇ ಕೇಂದ್ರ ಬಿಂದುವಾಗಿದ್ದರು. ವಿಶೇಷ ಅಂದರೆ ಮಳಿಗೆ ಮುಂದೆ ನಟಿ ರಶ್ಮಿಕಾ ಮಂದಣ್ಣ ನೋಡಲು ಜನಸಾಗರವೇ ತುಂಬಿತ್ತು. ಬಾಲಿವುಡ್ ಗೋಲ್ಡನ್ ಗರ್ಲ್ ಎಂದು ಕರೆಯುವ ಅಭಿಮಾನಿಗಳ ಮುಂದೆಯೇ ರಶ್ಮಿಕಾ ಪ್ರತ್ಯಕ್ಷವಾಗಿದ್ದರು. ಇದನ್ನು ಕಂಡು ಫ್ಯಾನ್ ದಿಲ್ ಖುಷ್ ಆಗಿದ್ದ ಕಂಡು ಬಂತು
ಇನ್ನೂ..ಅಂದ-ಚೆಂದ ಹಾಗೂ ಆಕ್ಟಿಂಗ್ ಜೊತೆಗೆ ತಮ್ಮ ವಿಶೇಷ ಸ್ಮೈಲ್, ಹಾರ್ಟ್ ಸಂಕೇತದೊಂದಿಗೆ ಸದಾ ಅಭಿಮಾನಿಗಳಿಗೆ ದರ್ಶನ ಕೊಡುವ ನಟಿ ರಶ್ಮಿಕಾರ ಸೌಂದರ್ಯಕ್ಕೆ ಕೇರಳ ಫ್ಯಾನ್ ಕಳೆದೋಗಿದ್ದರು. ಪ್ರತಿಯಾಗಿ ಅವರು ಹಾರ್ಟ್ ಸಿಂಬಾಲ್ ತೋರಿಸುವ ಮೂಲಕ ರಶ್ಮಿಕಾ ಮೇಲಿನ ಅಭಿಮಾನ ಮೆರೆದರು. ಇಷ್ಟದ ನಟಿ ಜೊತೆಗೆ ಫ್ಯಾನ್ಸ್ ಸಮೂಹ ಸೆಲ್ಫಿ ಕ್ಲಿಕ್ಕಿಸಿಕೊಂಡ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ, ಹಲವು ಜಾಹೀರಾತುಗಳಲ್ಲಿ ಕಾಣಸಿಗುತ್ತಾರೆ. ಮೊಬೈಲ್ ಸೇರಿದಂತೆ ಕೆಲವು ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿಯು ಉತ್ಪನ್ನಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಕೇರಳಕ್ಕೆ ಭೇಟಿ ನೀಡಿ ಮಳಿಗೆ ಉದ್ಘಾಟಿಸಿ, ಅಭಿಮಾನಿಗಳೊಂದಿಗೆ ಕೆಲ ಕಾಲ ಕಳೆದು ಖುಷಿ ಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಗೋಲ್ಡನ್ ಝರಿಯಿಂದ ಅಲಂಕರಿಸಲ್ಪಟ್ಟ ಗಿಳಿ ಹಸಿರು ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದ ನಟಿ ರಶ್ಮಿಕಾ ಅವರನ್ನು ನೋಡಲು 2000ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ವೇದಿಕೆ ಮೇಲೆ 'ರಂಜಿತಾಮೆ' ಹಾಡಿಗೆ ನೃತ್ಯ ಮಾಡಿ, ಫ್ಯಾನ್ಸ್‌ಗೆ ರಂಜಿಸಿದರು. ಈ ವೇಳೆ ಫ್ಯಾನ್ಸ್ ಝೆಂಕಾರ ಮುಗಿಲು ಮುಟ್ಟಿತ್ತು.
ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ತಮ್ಮ ನಟಿಯಲ್ಲಿನ ನಟನಾ ಪ್ರತಿಭೆಯಿಂದ ಮಾತ್ರವಲ್ಲದೆ, ಅವರಲ್ಲಿನ ಸರಳತೆ, ಮುಗ್ಧತೆಯನ್ನು ಪ್ರೀತಿಸುತ್ತಾರೆ. ಈ ಕಾರಣದಿಂದಲೇ ನಟಿಯು ಆಗಾಗ ತಮ್ಮ ಅಭಿಮಾನಿಗಳ ಮುಂದೆ ಹೀಗೆ ಕಾರ್ಯಕ್ರಮ, ಲೈವ್, ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ಕೊಡುವ ಮೂಲಕ ಸಂಪರ್ಕ ಸಾಧಿಸುತ್ತಾರೆ.
ಸದ್ಯ ರಶ್ಮಿಕಾ ಮಂದಣ್ಣಾ ಅವರು ಬಿಟೌನ್‌ನಲ್ಲಿನ 'ಅನಿಮಲ್' ಸಿನಿಮಾ ಸಕ್ಸಸ್ ನಲ್ಲಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ಹಿಂದಿ ಸಿನಿಮಾ 'ಛಾವಾ' ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಪುಷ್ಪ-2 ಸಿನಿಮಾ ರಿಲೀಸ್ ಆಗಲಿದೆ. ಅಭಿಮಾನಿಗಳಿಗೆ ಈ ವರ್ಷಾಂತ್ಯಕ್ಕೆ ವಿಭಿನ್ನ ಸಿನಿಮಾ, ಪಾತ್ರಗಳ ಮೂಲಕ ರಶ್ಮಿಕಾ ತೆರೆ ಮೇಲೆ ದರ್ಶನ ಕೊಡಲಿದ್ದಾರೆ.


Click it and Unblock the Notifications











