ಬೇರೆಯವರ ಕಣ್ಣು ಕುಕ್ಕುತ್ತಿದೆಯಾ ರಶ್ಮಿಕಾ ಬೆಳವಣಿಗೆ ? ಹಣ ಕೊಟ್ಟು ಟ್ರೋಲ್ ಮಾಡಿಸಿದ್ದು ಯಾರು ?

ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಆದರೆ .. ಹೀಗೆ ಮಾಡಲಾಗುವ ಟ್ರೋಲ್‌ ಹಿಂದೆ, ಇನ್ಯಾರದ್ದೋ ಷಡ್ಯಂತ್ರ ಮತ್ತು ಪಿತೂರಿ ಒಮ್ಮೊಮ್ಮೆ ಕೆಲಸ ಮಾಡುತ್ತಿರುತ್ತೆ. ಅಸೂಯೆ.. ಹಗೆತನ.. ದ್ವೇಷದಿಂದ ಹಣವನ್ನು ನೀಡಿ ತನ್ನ ಎದುರಾಳಿಯ ಅಥವಾ ಪ್ರತಿಸ್ಫರ್ಧಿಯ ತೇಜೋವಧೆಯನ್ನು ಮಾಡಲಾಗುತ್ತೆ.

ಬಣ್ಣದ ಪ್ರಪಂಚದಲ್ಲಿ ಈಗೀಗ ಈ ಕೆಲಸವನ್ನು ಕೆಲವರು ಅವ್ಯಾಹತವಾಗಿ ಈಗೀಗ ಕೆಲವರು ಮಾಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿಯೇ ರಶ್ಮಿಕಾ ಮಂದಣ್ಣ ಹಂಚಿಕೊಂಡ ಅನುಭವ. ಹೌದು, ಕನ್ನಡದಿಂದ ವಲಸೆ ಹೋಗಿ ರಶ್ಮಿಕಾ ಮಂದಣ್ಣ ಬೆಳೆದು ನಿಂತ ಪರಿ ಎಲ್ಲರಿಗೆ ಗೊತ್ತಿರುವಂತಹದ್ದೇ.

Rashmika Mandanna Blasts Negative PR and Trolls If You Can t Be Kind Don t Say Anything

ಇವತ್ತು ರಶ್ಮಿಕಾ ಮಂದಣ್ಣ ಭಾರತದ ಬೇಡಿಕೆಯ ನಾಯಕಿ. ಎಲ್ಲಾ ಭಾಷೆಯಲ್ಲಿ ತಮ್ಮ ಚಾಪು ಮೂಡಿಸಿರುವ ರಶ್ಮಿಕಾ ಸದ್ಯ ಬಾಲಿವುಡ್‌ನ ನಾಯಕಿಯರ ತಲೆ ನೋವನ್ನು ಕೂಡ ಹೆಚ್ಚಿಸಿದ್ದಾರೆ. ಒಂದಾದ ಮೇಲೊಂದು ಹಿಂದಿಯಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಆದರೆ ಇವರ ಈ ಬೆಳವಣಿಗೆ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ರಶ್ಮಿಕಾ ವಿರುದ್ಧ ಅಪಪ್ರಚಾರವನ್ನು ಒಂದು ತಂಡ ಮಾಡುತ್ತಿದೆ. ಖುದ್ದು ರಶ್ಮಿಕಾ ಮಂದಣ್ಣ ಅವರೇ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

''ಸ್ನ್ಯಾಪ್ ವಿತ್ ಸ್ಟಾರ್ಸ್‌'' ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿರುವ ರಶ್ಮಿಕಾ ನಾನು ತುಂಬಾನೇ ಭಾವನಾತ್ಮಕ ವ್ಯಕ್ತಿ. ಲೆಕ್ಕಾಚಾರದ ಬದುಕು ನನಗೆ ಬದುಕಲು ಬರುವುದಿಲ್ಲ, ನಾನು ಹೇಗಿದ್ದೇನೋ ಹಾಗೆಯೇ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ನಾನು ನನ್ನತನವನ್ನು ನನ್ನ ಭಾವನೆಗಳನ್ನು ಬಹಿರಂಗವಾಗಿ ಹೊರಗೆ ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ, ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ದಯೆ ತೋರುವುದು ಫೇಕ್ ಎಂದು ನೋಡುತ್ತಾರೆ, ದಯಾಳುವಾಗಿರುವುದು ದೌರ್ಬಲ್ಯ ಎಂದು ಪರಿಗಣಿಸುತ್ತಾರೆ, ಇಲ್ಲವಾದಲ್ಲಿ ಎಲ್ಲಾ ಕ್ಯಾಮೆರಾಗಾಗಿ ರಶ್ಮಿಕಾ ಈ ರೀತಿ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾರೆ ಎಂದಿರುವ ರಶ್ಮಿಕಾ ಮಂದಣ್ಣ ಹೆಚ್ಚು ನೈಜವಾಗಿದ್ದರೆ ನಮ್ಮನ್ನು ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

rashmika-mandanna-blasts-negative-pr-and-trolls-if-you-cant-be-kind-dont-say-anything

ಇನ್ನು ನಿರಂತರವಾಗಿ ತಮ್ಮ ಮೇಲೆ ನಡೆಯುವ ಸೈಬರ್ ದಾಳಿ, ಟ್ರೋಲ್‌ಗಳ ಕುರಿತು ಕೂಡ ಮಾತನಾಡಿರುವ ರಶ್ಮಿಕಾ ಪಿಆರ್‌ಗಳ ಮೂಲಕ ಹಣ ನೀಡಿ ನನ್ನನ್ನು ಟ್ರೋಲ್ ಮಾಡಿಸಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನಕಾರಾತ್ಮಕ ವಿಚಾರಗಳನ್ನು ಹರಡಿಸಿದ್ದಾರೆ ಎಂದು ಹೇಳಿದ್ದಾರೆ. ದಯೆ ತೋರಿಸಲು ಸಾಧ್ಯವಾಗದೇ ಇದ್ದರೆ ಮೌನವಾಗಿರಬೇಕು ಎಂದು ಹೇಳಿರುವ ರಶ್ಮಿಕಾ ಉಸಿರಾಡಲು ಬಿಡಿ ಯಾಕೆ ಜನರನ್ನು ಉಸಿರುಗಟ್ಟಿಸುತ್ತಿರಾ ಎಂದು ಖಾರವಾಗಿ ಪ್ರಶ್ನೆ ಕೇಳಿದ್ದಾರೆ. ಯಾಕೆ ಕತ್ತು ಹಿಸುಕುವ ಪ್ರಯತ್ನ ಮಾಡಬೇಕು ಎಂದಿದ್ದಾರೆ.

ಮುಂದುವರೆದು ನಾವೆಲ್ಲರೂ ಬೆಳೆಯಲು ಇಲ್ಲಿ ಸಾಕಷ್ಟು ಸ್ಥಳ ಇದೆ. ಪ್ರಪಂಚ ತುಂಬಾ ದೊಡ್ಡದಾಗಿದೆ. ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ ಅದನ್ನು ಯಾಕೆ ತಡೆಯಬೇಕು? ಎಂದಿರುವ ರಶ್ಮಿಕಾ ಜನರು ಈ ರೀತಿ ಯಾಕೆ ಕ್ರೂರವಾಗಿ ವರ್ತಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದು ತುಂಬಾ ದುಃಖಕರ ವಿಷಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಕಾರಾತ್ಮಕತೆಯಿಂದ ಹೊರ ಬನ್ನಿ ಎಂದು ಹೇಳಿದ್ದಾರೆ.

ಸದ್ಯ ರಶ್ಮಿಕಾ ಅವರ ಈ ಮಾತು ಚಿತ್ರನಗರಿಯಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ರಶ್ಮಿಕಾ ಬೆಳವಣಿಗೆಯನ್ನು ಸಹಿಸದೇ ದುಡ್ಡು ಕೊಟ್ಟು ರಶ್ಮಿಕಾ ಅವರನ್ನು ಟ್ರೋಲ್ ಮಾಡಿಸಿದ್ದು ಯಾರು ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ವಿಚಾರದ ಕುರಿತು ಚರ್ಚೆಯನ್ನು ಮಾಡಲಾಗುತ್ತಿದೆ. ಇನ್ನುಳಿದಂತೆ ರಶ್ಮಿಕಾ ಸದ್ಯ 'ಥಾಮಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರು ಅಭಿನಯಿಸಿರುವ ''ದಿ ಗರ್ಲ್‌ಫ್ರೆಂಡ್‌'' ತೆರೆಗೆ ಬರಬೇಕಿದೆ.

More from Filmibeat

English summary
In a candid interview, Rashmika Mandanna discusses how kindness is "misunderstood" in a world of constant trolling and negative PR. Read her full, powerful statement.
Read more about: rashmika mandanna actress troll
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X