ಅಮಿತಾಬ್ ಬಚ್ಚನ್‌ ಮುದ್ದಾದ ಗೊಂಬೆ ಎಂದು ಹಾಡಿ ಹೊಗಳಿದ ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ನಟನೆ ಮೂಲಕ ಉತ್ತುಂಗದಲ್ಲಿ ಇರುವ ನಟಿ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಸಾಕಷ್ಟು ಬ್ಯುಸಿಯಾಗಿರುವ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಹೆಸರು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸದ್ಯ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಪ್ಪ ಸಿನಿಮಾ ರಿಲೀಸ್ ಆಗಿ ಉತ್ತಮ ಕಲೆಕ್ಷನ್ ಕೂಡ ಮಾಡಿದೆ. ಪುಷ್ಪ ಸಿನಿಮಾದ ಯಶಸ್ಸಿನ ನಂತರ ಎಲ್ಲರ ಚಿತ್ರ ಪುಷ್ಪ ಪಾರ್ಟ್ 2ನತ್ತ ನೆಟ್ಟಿದೆ. ಪುಷ್ಪ ಚಿತ್ರದ ಕ್ಲೈಮ್ಯಾಕ್ಸ್‌ ಪುಷ್ಪ ಭಾಗ2 ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮೂಡಿಸಿದೆ. ಪುಷ್ಪ ಪಾರ್ಟ್ 2 ಆರಂಭಕ್ಕೂ ಮೊದಲು ಈಗ ನಟಿ ರಶ್ಮಿಕಾ ಬಂದಣ್ಣ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.

Recommended Video

ಮಕ್ಕಳನ್ನು ದೂರ ತಳ್ಳಿ ಹೋದ್ರಂತೆ ರಶ್ಮಿಕಾ

ರಶ್ಮಿಕಾ ಮಂದಣ್ಣ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ 'ಮಿಷನ್ ಮಜ್ನು' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ರಶ್ಮಿಕಾ ಅವರ ಚೊಚ್ಚಲ ಚಿತ್ರ 'ಮಿಷನ್ ಮಜ್ನು' ಬಿಡುಗಡೆಯ ಮುಂಚೆಯೇ, ರಶ್ಮಿಕಾ ತನ್ನ ಎರಡನೇ ಚಿತ್ರ 'ಗುಡ್‌ಬೈ' ನಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಇದರಲ್ಲಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ನೀನಾ ಗುಪ್ತಾ ಕೂಡ ನಟಿಸಿದ್ದಾರೆ. ರಶ್ಮಿಕಾ ಅಭಿನಯಿಸುತ್ತಿರುವ ಈ ಎರಡೂ ಚಿತ್ರಗಳ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಹಾಗೇ 'ಗುಡ್ ಬೈ' ಚಿತ್ರದ ಮೊದಲ ಶೆಡ್ಯೂಲ್ ಅನ್ನು ರಶ್ಮಿಕಾ ಪೂರ್ಣಗೊಳಿಸಿದ್ದಾರೆ. ಹಾಗೆ ಈ ಸಂದರ್ಭದಲ್ಲಿ 'ಗುಡ್ ಬೈ' ಚಿತ್ರದ ಅನುಭವ ಮತ್ತು ಅಮಿತಾಬ್ ಬಚ್ಚನ್ ಅವರ ಜೊತೆ ತೆರೆ ಹಂಚಿಕೊಂಡ ಖುಷಿಯನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಚಿತ್ರ ಪುಷ್ಪ: ದಿ ರೈಸ್ ಚಿತ್ರದಲ್ಲಿ ನೋಡಿದ ಬಾಲಿವುಡ್ ವೀಕ್ಷಕರು ರಶ್ಮಿಕಾ ಅವರನ್ನು ಆದಷ್ಟು ಬೇಗ ಬಾಲಿವುಡ್ ಸಿನಿಮಾದಲ್ಲಿ ನೋಡಲು ಕಾತರರಾಗಿದ್ದಾರೆ. ರಶ್ಮಿಕಾ ಕೈನಲ್ಲಿ ಸದ್ಯ ಬಾಲಿವುಡ್ನ ಸಿನಿಮಾಗಳಾದ 'ಗುಡ್ ಬೈ' ಮತ್ತು 'ಮಿಷನ್ ಮಜ್ನು ಚಿತ್ರಗಳು ಇದೆ. ಇತ್ತೀಚಿಗೆ ರಶ್ಮಿಕಾ ಮಂದಣ್ಣ ನೀಡಿರುವ ಖಾಸಗೀ ಸಂದರ್ಶನದಲ್ಲಿ 'ಗುಡ್ ಬೈ' ಚಿತ್ರ ಮತ್ತು ಅಮಿತಾಬ್ ಬಚ್ಚನ್ ಬಗ್ಗೆ ಮಾತು ಹಂಚಿಕೊಂಡಿದ್ದಾರೆ. ಅಲ್ಲದೇ ಅಮಿತಾಬ್ ಬಚ್ಚನ್ ಗೊಂಬೆ ಇದ್ದಂತೆ ಎಂದು ತಿಳಿಸಿದ್ದಾರೆ.

Rashmika Mandanna calls Amitabh Bachchan an absolute doll

ಖಾಸಗೀ ಸಂದರ್ಶನದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ 'ಗುಡ್ ಬೈ' ಚಿತ್ರದಲ್ಲಿ ಕೆಲಸ ಮಾಡಿರುವುದು ಅದ್ಭುತ ಎಂದು ರಶ್ಮಿಕಾ ತಿಳಿಸಿದ್ದಾರೆ. "ಅಮಿತಾಬ್ ಬಚ್ಚನ್ ಅವರು ಸೆಟ್‌ಗೆ ಬಂದ್ರು ಅಂದರೆ ಸಾಕು ತುಂಬ ಖುಷಿ ಆಗುತ್ತಿತ್ತು. ಅವರು ಸೆಟ್‌ನಲ್ಲಿ ತಾನೊಬ್ಬ ದೊಡ್ಡ ನಟ ಎಂಬುದನ್ನು ಮರೆತು ಎಲ್ಲರೊಂದಿಗೂ ಆರಾಮದಾಯಕವಾಗಿ ಇದ್ದರು. ಅಷ್ಟೇ ಅಲ್ಲದೇ ಅಮಿತಾಬ್ ಬಚ್ಚನ್ ಸಂಪೂರ್ಣ ಗೊಂಬೆಯಂತೆ. ಅವರು ಅಂತಹ ಅದ್ಭುತ ವ್ಯಕ್ತಿ. ಸೆಟ್‌ನಲ್ಲಿ ನಮಗೆ ಅವರೊಂದಿಗೆ ಅಭಿನಯಿಸಲು ಏನು ಭಯ ಆಗುತ್ತಿರಲಿಲ್ಲ, ಅಷ್ಟು ಹೊಂದಿಕೊಂಡಿದ್ದರು. ಸೆಟ್‌ನಲ್ಲಿ ರಿಹರ್ಸಲ್ ಸೇರಿದಂತೆ ಆಕ್ಟಿಂಗ್ ಕೂಡ ಏನೂ ಮಿಸ್ ಆಗದಂತೆ ಮಾಡುತ್ತಿದ್ದರು. ಅವರ ವ್ಯೆಕ್ತಿತ್ವವೇ ಅದ್ಭುತ. ಅವರ ಬಗ್ಗೆ ಹೇಳಲು ಪದಗಳು ತುಂಬಾ ಕಡಿಮೆ" ಎಂದಿದ್ದಾರೆ ರಶ್ಮಿಕಾ.

ಗುಡ್ ನ್ಯೂಸ್ ಏನೆಂದರೇ ರಶ್ಮಿಕಾ ಅಭಿನಯದ ಮಿಷನ್ ಮಜ್ನು ಜೊತೆಗೆ ಗುಡ್‌ಬೈ ಸಿನಿಮಾ ಕೂಡ ಈ ವರ್ಷ ಬಿಡುಗಡೆಯಾಗುತ್ತದೆ ಎಂದಿದ್ದಾರೆ ರಶ್ಮಿಕಾ. ತನ್ನ ಎರಡೂ ಹಿಂದಿ ಚಿತ್ರಗಳನ್ನು ಜನರು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. "ನನ್ನ ಎರಡೂ ಚಿತ್ರಗಳ ಬಗ್ಗೆ ನಾನು ತುಂಬಾ ಉತ್ಸುಕಳಾಗಿದ್ದೇನೆ ಮತ್ತು ವೀಕ್ಷಕರು ನನ್ನ ಸಿನಿಮಾಗಳನ್ನು ಯಾವಾಗ ನೋಡಲು ಸಾಧ್ಯವಾಗುತ್ತೆ ಅಂತ ನಾನು ಕಾಯಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದ್ದಾರೆ.

ಗುಡ್ ಬೈ ಚಿತ್ರದ ಕುರಿತು ಮಾತನಾಡುತ್ತಾ, ಚಿತ್ರದ ಶೂಟಿಂಗ್ ಕಳೆದ ವರ್ಷ ಪ್ರಾರಂಭವಾಗಿದೆ.ಸೆಟ್‌ನಲ್ಲಿ ಬಚ್ಚನ್ ಅವರು ಸಾಕು ಪ್ರಾಣಿಯೊಂದಿಗೆ ಆಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ ತನ್ನ ಹುಟ್ಟುಹಬ್ಬವನ್ನು ಸೆಟ್‌ನಲ್ಲಿ ಆಚರಿಸಿಕೊಂಡಿದ್ದೆ. ಎಂಬೆಲ್ಲ ನೆನಪುಗಳನ್ನು ರಶ್ಮಿಕಾ ಶೇರ್ ಮಾಡಿಕೊಂಡಿದ್ದಾರೆ. ಈ ವರ್ಷ ಈ ಎರಡೂ ಸಿನಿಮಾಗಳು ರಿಲೀಸ್ ಆಗುವ ಸಾಧ್ಯತೆ ಕೂಡ ಇದೆ.

More from Filmibeat

English summary
Rashmika Mandanna has a film Goodbye with legendary megastar Amitabh Bachchan. Now, in a recent chat, Rashmika has opened up about working with Mr Bachchan and has called him an 'absolute doll'.'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X