Rashmika Mandanna: ಬಾಲಿವುಡ್‌ನ ಮತ್ತೊಂದು ಸಿನಿಮಾಗೆ ಆಯ್ಕೆ ಆದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಲಕ್ ಬದಲಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಪುಷ್ಪ' ಸಿನಿಮಾದ ಬಳಿಕ ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿ ಇರುವ ರಶ್ಮಿಕಾ 'ಮಿಷನ್ ಮಜ್ನು' ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದಾರೆ.

ಅದ್ಯಾಕೊ ರಶ್ಮಿಕಾ ಬಾಲಿವುಡ್‌ನಲ್ಲೇ ಸೆಟಲ್ ಆಗುವಂತೆ ಕಾಣುತ್ತಿದ್ದಾರೆ. ಯಾಕಂದ್ರೆ 'ಪುಷ್ಪ' ಸಿನಿಮಾದ ಬಳಿಕ ವಿಜಯ್ ದಳಪತಿಯ ತಮಿಳು ಸಿನಿಮಾ ಒಂದನ್ನು ಬಿಟ್ಟು ಬೇರೆ ಚಿತ್ರವನ್ನು ಅವರು ಒಪ್ಪಿಕೊಂಡಿಲ್ಲಾ. ಹೀಗಾಗಿ ಬಾಲಿವುಡ್‌ ಚಿತ್ರಗಳತ್ತ ರಶ್ಮಿಕಾ ಚಿತ್ತ ಇದೇ ಎನ್ನಲಾಗುತ್ತಿದೆ.

ಇದಕ್ಕೆ ಪೂರಕವಾಗಿ ರಶ್ಮಿಕಾಗೆ ಬಾಲಿವುಡ್‌ನಲ್ಲಿ ಮತ್ತೊಂದು ಜಾಕ್ ಪಾಟ್ ಹೊಡೆದಿದೆ. 'ಮಿಷನ್ ಮಜ್ನು' 'ಗುಡ್ ಬೈ' ಸಿನಿಮಾಗಳ ಬಳಿಕ ಇದೀಗ ಮತ್ತೊಂದು ಬಾಲಿವುಡ್ ಸಿನಿಮಾಗೆ ರಶ್ಮಿಕಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ರಣ್‌ಬೀರ್ ಕಪೂರ್ ಹೊಸ ಚಿತ್ರ 'ಅನಿಮಲ್'

ರಣ್‌ಬೀರ್ ಕಪೂರ್ ಹೊಸ ಚಿತ್ರ 'ಅನಿಮಲ್'

ಕಳೆದ ವರ್ಷ ಆರಂಭದಲ್ಲಿ ಬಾಲಿವುಡ್ ನಟ ರಣ್‌ಬೀರ್ ಕಪೂರ್ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ರಣ್‌ಬೀರ್ ಕಪೂರ್ ಹೊಸ ಚಿತ್ರಕ್ಕೆ 'ಅನಿಮಲ್' ಎಂದು ಟೈಟಲ್ ನಿಗಧಿ ಆಗಿತ್ತು. ಇದು ರಣ್‌ಬೀರ್ ಕಪೂರ್ ಸಿನಿಮಾ ಜರ್ನಿಯಲ್ಲಿಯೇ ಬಹು ದೊಡ್ಡ ಸಿನಿಮಾ ಎನ್ನುವ ಮಾತು ಕೂಡ ಇದೆ. ಇದೀಗ ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ರೊಮ್ಯಾನ್ಸ್ ಮಾಡಲು ರಶ್ಮಿಕಾ ಮಂದಣ್ಣ ಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಂದರೆ ರಣ್‌ಬೀರ್ ಕಪೂರ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ.

ಪರಿಣಿತಿ ಛೋಪ್ರ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತು

ಪರಿಣಿತಿ ಛೋಪ್ರ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತು

'ಅನಿಮಲ್' ಸಿನಿಮಾ ಸೆಟ್ಟೇರಿದಾಗ ರಣ್‌ಬೀರ್ ಕಪೂರ್ ಜೊತೆ ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಕಾರಣಾಂತರಗಳಿಂದ ಪರಿಣಿತಿ ಈ ಚಿತ್ರತಂಡದಿಂದ ಹೊರ ನಡೆದಿದ್ದಾರೆ. ಪರಿಣಿತಿ ಛೋಪ್ರಾ ಜಾಗಕ್ಕೆ ಇದೀಗ ರಶ್ಮಿಕಾ ಮಂದಣ್ಣ ಬಂದಿದ್ದು, ರಣ್‌ಬೀರ್ ಕಪೂರ್ ಹೆಂಡತಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೇನು ಕೆಲವೇ ತಿಂಗಳುಗಳ ಒಳಗೆ ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಲಿರುವ 'ಅನಿಮಲ್' ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ಕಬೀರ್ ಸಿಂಗ್‌ಗೆ ಆಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್

ಕಬೀರ್ ಸಿಂಗ್‌ಗೆ ಆಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್

'ಅನಿಮಲ್' ಚಿತ್ರವನ್ನು ಸಂದೀಪ್ ವಂಗಾ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ ಈ ಹಿಂದೆ ತೆಲುಗಿನಲ್ಲಿ ಅರ್ಜುನ್ ರೆಡ್ಡಿ ಮತ್ತು ಹಿಂದಿಯಲ್ಲಿ ಕಬೀರ್ ಸಿಂಗ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣನ್ ಕುಮಾರ್ (ಟಿ-ಸಿರೀಸ್), ಪ್ರಣಯ್ ರೆಡ್ಡಿ ವಂಗಾ (ಭದ್ರಕಾಳಿ ಪಿಕ್ಚರ್ಸ್) ಮತ್ತು ಮುರಾದ್ ಖೇತಾನಿ (ಸಿನಿ 1 ಸ್ಟುಡಿಯೋಸ್) ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 'ಅನಿಮಲ್' ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ಅನಿಲ್ ಕಪೂರ್, ಬಾಬಿ ಡಿಯೊಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ರಣ್‌ಬೀರ್ ಪಾತ್ರದ ಹೈಲೈಟ್ ಏನು?

ರಣ್‌ಬೀರ್ ಪಾತ್ರದ ಹೈಲೈಟ್ ಏನು?

ಇನ್ನು ಈ ಸಿನಿಮಾದಲ್ಲಿ ರಣ್‌ಬೀರ್ ಪಾತ್ರ ಕೂಡ ವಿಶೇಷವಾಗಿ ಇರಲಿದೆ. ರಶ್ಮಿಕಾ ಮಂದಣ್ಣ ಜೊತೆಗೆ ರೊಮ್ಯಾನ್ಸ್ ಸೀನ್ ಸೇರಿದಂತೆ ಹಲವು ಇಂಟ್ರೆಸ್ಟಿಂಗ್ ಸೀಕ್ವೆನ್ಸ್ ಕೂಡ ಇರಲಿದೆಯಂತೆ. ಹೀಗಾಗಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಇದ್ದು, ಅಭಿಮಾನಿಗಳು ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಹೇಗೆ ವರ್ಕ್‌ಔಟ್ ಆಗಲಿದೆ ಅನ್ನೋದನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

More from Filmibeat

English summary
Rashmika Mandanna comes on board Animal alongside Ranbir Kapoor.Here is more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X