For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ವೇದಿಕೆಯಲ್ಲಿ 'ಸಾಮಿ ಸಾಮಿ' ಎಂದು ಸಲ್ಲುನ ಕುಣಿಸಿದ ಶ್ರೀವಲ್ಲಿ: ರಶ್ಮಿಕಾ ಫೇವರಿಟ್ ಸ್ಪರ್ಧಿ ಯಾರು ಗೊತ್ತಾ?

  |

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯ ರೋಶ್ ನಟನೆಯ ಹಿಂದಿ ಸಿನಿಮಾ 'ಗುಡ್‌ಬೈ' ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಮತ್ತೊಂದ್ಕಡೆ ಸದ್ದಿನಲ್ಲೇ ಹಿಂದಿ ಬಿಗ್‌ಬಾಸ್ ಶೋಗೆ ಹೋಗಿ ಬಂದಿದ್ದಾರೆ. ಬಿಗ್‌ಬಾಸ್ 16 'ಶನಿವಾರ್ ಕಾ ವಾರ್' ಎಪಿಸೋಡ್‌ನಲ್ಲಿ ಭಾಗಿಯಾಗಿ 'ಗುಡ್‌ಬೈ' ಸಿನಿಮಾ ಪ್ರಚಾರ ಮಾಡಿದ್ದಾರೆ.

  ಹಿರಿಯ ನಟಿ ನೀನಾ ಗುಪ್ತಾ ಜೊತೆಗೆ ರಶ್ಮಿಕಾ ಮಂದಣ್ಣ ಬಿಗ್‌ಬಾಸ್ ಶನಿವಾರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ರಶ್ಮಿಕಾ ಮಂದಣ್ಣನ ನೋಡಿ ಖುಷಿಯಾಗಿದ್ದಾರೆ. ರಶ್ಮಿಕಾ, ಸಲ್ಲು ಜೊತೆ 'ಸಾಮಿ ಸಾಮಿ' ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. 'ಪುಷ್ಪ' ಸಿನಿಮಾ ಡೈಲಾಗ್‌ಗಳನ್ನು ಹೇಳಿದ್ದಾರೆ. ಇನ್ನು ಸಲ್ಲು, ನೀನಾ, ರಶ್ಮಿಕಾ ಒಂದಷ್ಟು ಫನ್ನಿ ಗೇಮ್ಸ್ ಕೂಡ ಆಡಿದ್ದಾರೆ. ವೀಕ್ಷಕರು ಹಿಂದಿ ಬಿಗ್‌ಬಾಸ್ ಶನಿವಾರದ ಎಪಿಸೋಡ್ ನೋಡಿ ಖುಷಿಯಾಗಿದ್ದಾರೆ.

  ರಣಬೀರ್‌ ಕಪೂರ್‌ ಮಾಡಿದ ಈ ಕೆಲಸದಿಂದ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣರಣಬೀರ್‌ ಕಪೂರ್‌ ಮಾಡಿದ ಈ ಕೆಲಸದಿಂದ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ

  'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸುವ ಮೂಲಕ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆದರೆ ಅದಕ್ಕಿಂತ ಮೊದಲು 'ಗುಡ್‌ಬೈ' ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಶ್ಮಿಕಾ ತಂದೆ ಮಗಳಾಗಿ ನಟಿಸಿದ್ದಾರೆ. ವಿಕಾಸ್ ಬೇಹ್ಲ್ ನಿರ್ದೇಶನದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ.

  'ಸಾಮಿ ಸಾಮಿ' ಎಂದು ಎಲ್ಲರನ್ನು ಕುಣಿಸಿದ ರಶ್ಮಿಕಾ

  'ಸಾಮಿ ಸಾಮಿ' ಎಂದು ಎಲ್ಲರನ್ನು ಕುಣಿಸಿದ ರಶ್ಮಿಕಾ

  ರಶ್ಮಿಕಾ ಮಂದಣ್ಣ ಎಲ್ಲೇ ಹೋದರೂ ಎಲ್ಲೇ ಬಂದರೂ 'ಪುಷ್ಪ' ಸಿನಿಮಾ ಬಗ್ಗೆ ಮಾತನಾಡುವಂತಾಗಿದೆ. ಹಿಂದಿ ಬೆಲ್ಟ್‌ನಲ್ಲೂ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಾಂಗ್ಸ್, ಡೈಲಾಗ್ಸ್ ಸಕತ್ ಸದ್ದು ಮಾಡಿತ್ತು. ಇತ್ತೀಚೆಗೆ ಹಿಂದಿ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ ಹಿರಿಯ ನಟ ಗೋವಿಂದ ಜೊತೆ 'ಸಾಮಿ ಸಾಮಿ' ಹಾಡಿಗೆ ಕುಣಿದಿದ್ದರು. ನಿನ್ನೆ (ಅಕ್ಟೋಬರ್ 8) ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ರಶ್ಮಿಕಾ 'ಸಾಮಿ ಸಾಮಿ' ಹಾಡಿಗೆ ಕುಣಿದು, ಸಲ್ಲುನ ಕುಣಿಸಿದ್ದಾರೆ. ನೀನಾ ಗುಪ್ತಾ ಕೂಡ ಸಲ್ಲು, ರಶ್ಮಿಕಾ ಜೊತೆ ಹೆಜ್ಜೆ ಹಾಕಿದ್ದಾರೆ.

  ವಿಜಯ್ ದೇವರಕೊಂಡಗೆ ಕಿಸ್‌ ಮಾಡಿ ಬಹಳ ಕಷ್ಟ ಅನುಭವಿಸಿದೆ: ರಶ್ಮಿಕಾ ಮಂದಣ್ಣವಿಜಯ್ ದೇವರಕೊಂಡಗೆ ಕಿಸ್‌ ಮಾಡಿ ಬಹಳ ಕಷ್ಟ ಅನುಭವಿಸಿದೆ: ರಶ್ಮಿಕಾ ಮಂದಣ್ಣ

  ಬಿಗ್‌ಬಾಸ್ ಮನೆಯಲ್ಲಿ 'ಪುಷ್ಪ' ಡೈಲಾಗ್ಸ್ ಹವಾ

  ಬಿಗ್‌ಬಾಸ್ ಮನೆಯಲ್ಲಿ 'ಪುಷ್ಪ' ಡೈಲಾಗ್ಸ್ ಹವಾ

  ವೇದಿಕೆಯಿಂದ ಬಿಗ್‌ಬಾಸ್ ಸ್ಪರ್ಧಿಗಳನ್ನು ಸಲ್ಮಾನ್ ಖಾನ್ ಮಾತನಾಡಿಸಿದ್ದರು. ಈ ವೇಳೆ 'ಪುಷ್ಪ' ಚಿತ್ರದ ಡೈಲಾಗ್‌ಗಳನ್ನು ಹೇಳಲು ಸ್ಪರ್ಧಿಗಳಿಗೆ ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಸ್ಟೈಲ್‌ನಲ್ಲಿ 'ಜುಕೇಗಾ ನಹೀ' ಎಂದು ಪುಷ್ಪರಾಜ್ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದಿದ್ದಾರೆ. ಅವರ ದಾಟಿ ನೋಡಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ತಮಾಷೆ ಮಾಡಿದ್ದಾರೆ.

  ರಶ್ಮಿಕಾ ನೆಚ್ಚಿನ ಬಿಗ್‌ಬಾಸ್ ಸ್ಪರ್ಧಿ ಯಾರು?

  ರಶ್ಮಿಕಾ ನೆಚ್ಚಿನ ಬಿಗ್‌ಬಾಸ್ ಸ್ಪರ್ಧಿ ಯಾರು?

  ಕಳೆದ ವಾರವಷ್ಟೆ ಹಿಂದಿ ಬಿಗ್‌ಬಾಸ್ ಸೀಸನ್ 16 ಆರಂಭವಾಗಿದೆ. ಬೇರೆ ಬೇರೆ ಕ್ಷೇತ್ರಗಳ ಸ್ಪರ್ಧಿಗಳು ಈ ಬಾರಿ ದೊಡ್ಮನೆಯ ಆಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಜಕಿಸ್ತಾನ್ ಗಾಯಕ ಅಬ್ದು ರೋಝಿಕ್ ಗಮನ ಸೆಳೆದಿದ್ದಾರೆ. ಕುಬ್ಜರಾಗಿರುವ ಅಬ್ದು ತಮ್ಮ ಗಾಯನದಿಂದ ಮೋಡಿ ಮಾಡಿದವರು. ಈತ 'ಪುಷ್ಪ' ಚಿತ್ರದ ಡೈಲಾಗ್ಸ್ ಹೇಳಿದ್ದು ನೋಡಿ ಖುಷಿಯಾದ ರಶ್ಮಿಕಾ ನೀವು ನನ್ನ ಫೇವರಿಟ್ ಸ್ಪರ್ಧಿ ಎಂದಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

  ವಿಜಯ್ ಜೊತೆ ರಶ್ಮಿಕಾ ರೊಮ್ಯಾಂಟಿಕ್ ಟೂರ್

  ವಿಜಯ್ ಜೊತೆ ರಶ್ಮಿಕಾ ರೊಮ್ಯಾಂಟಿಕ್ ಟೂರ್

  ನಿರಂತರ ಸಿನಿಮಾ ಶೂಟಿಂಗ್‌ನಿಂದ ಬೇಸತ್ತಿದ್ದ ರಶ್ಮಿಕಾ ಮಂದಣ್ಣ ಕೊಂಚ ಬಿಡುವು ಮಾಡಿಕೊಂಡು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದಾರೆ. ವಿಜಯ್ ದೇವರಕೊಂಡ ಕೂಡ ಜೊತೆಗೆ ಹೋಗಿದ್ದಾರೆ ಎನ್ನಲಾಗ್ತಿದ್ದು, ಮೊನ್ನೆ ಇಬ್ಬರು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ರಶ್ಮಿಕಾ ಮಂದಣ್ಣ ದ್ವೀಪ ರಾಷ್ಟ್ರದಲ್ಲಿ ಮೋಜು ಮಸ್ತಿ ಮಾಡ್ತಿದ್ದು, ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

  English summary
  Rashmika Mandanna enters Hindi Bigg Boss house Salman Khan Rashmika Mandanna dance on Saami Saami. Know More.
  Sunday, October 9, 2022, 9:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X