ಉರ್ಫಿ ಜಾವೇದ್‌ ಫಾಲೋ ಮಾಡ್ತಿದ್ದಾರಾ ರಶ್ಮಿಕಾ? ಈ ತರ ಎಕ್ಸ್‌ಪೋಸ್ ಎಲ್ಲಾ ಬೇಕಾ ಎಂದ ನೆಟ್ಟಿಗರು

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸೆಲೆಬ್ರೆಟಿಗಳು ಚೆನ್ನಾಗಿ ಕಂಡರೆ ಹೊಗಳುವುದು, ಅವರ ವೇಷಭೂಷಣ ಇಷ್ಟವಾಗದಿದ್ದರೆ ಟ್ರೋಲ್ ಮಾಡೋದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ನಟಿ ರಶ್ಮಿಕಾ ಮಂದಣ್ಣ ಇದೇ ಕಾರಣಕ್ಕೆ ಸಾಕಷ್ಟು ಬಾರಿ ಟ್ರೋಲ್‌ ಎದುರಿಸಿದ್ದರು. ಇದೀಗ ಮತ್ತೊಮ್ಮೆ ಅದೇ ಸಮಸ್ಯೆ ಶುರುವಾಗಿದೆ. ಜೀ ಸಿನಿ ಅವಾರ್ಡ್ಸ್ ಸಮಾರಂಭಕ್ಕೆ ಕಿರಿಕ್ ಬೆಡಗಿ ಶಾರ್ಟ್ ಡ್ರೆಸ್‌ನಲ್ಲಿ ಹಾಜರಾಗಿದ್ದರು.

ಲಾಂಗ್‌ ಟ್ರೆಲ್ ಇರೋ ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ರಶ್ಮಿಕಾ ದರ್ಶನ ಕೊಟ್ಟಿದ್ದಾರೆ. ಹೈ ಹೀಲ್ಡ್ ಚಪ್ಪಲಿ ಧರಿಸಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದಾರೆ. ತಮ್ಮ ಎಂದಿನ ಕ್ಯೂಟ್‌ ಕ್ಯೂಟ್ ಸ್ಮೈಲ್ ಮೂಲಕ ಪಾಪರಾಜಿಗಳ ಕಡೆ ಕೈ ಬೀಸಿದ್ದಾರೆ. ಸದ್ಯ ಈ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಶ್ಮಿಕಾ ಶಾರ್ಟ್ ಡ್ರೆಸ್ ಟ್ರೋಲ್‌ಗೆ ಆಹಾರವಾಗಿದೆ. ಕೊಡಗಿನ ಬೆಡಗಿಯ ಅವತಾರಕ್ಕೆ ಚಿತ್ರವಿಚಿತ್ರ ಕಾಮೆಂಟ್ಸ್ ಬರ್ತಿದೆ.

Rashmika Mandanna Gets Trolled For Her Dressing Sense, Netizens Compare Her With Urfi Javed

"ರಶ್ಮಿಕಾ ಉರ್ಫಿ ಜಾವೇದ್‌ನ ಫಾಲೋ ಮಾಡ್ತಿದ್ದಾರಾ? ಆಕೆ ಹೀಗೆಲ್ಲಾ ಮಾಡ್ತಾಳೆ ಎಂದು ಊಹಿಸಿರಲಿಲ್ಲ. ಇಂತಹವರನ್ನು ಬಾಯ್ಕಾಟ್ ಮಾಡ್ಬೇಕು. ಈಗಾಗ್ಲೇ ಫೇಮಸ್ ಆಗಿರುವವರಿಗೆ ಎಕ್ಸ್‌ಪೋಸ್ ಮಾಡುವ ಕರ್ಮ ಏನು? ಎಂದು ಒಬ್ಬರು ಕಾಮೆಂಟ್ ಮಾಡುತ್ತಿದ್ಧಾರೆ. ಮತ್ತೊಬ್ಬರು "ಉರ್ಫಿ 2.O" ಎಂದು ಬರೆದಿದ್ದಾರೆ. ಇನ್ನೊಬ್ಬರು "ಈ ಔಟ್ ಫಿಟ್ ನಿಜಕ್ಕೂ ಕೆಟ್ಟದಾಗಿದೆ. ಇವ್ರಿಗೆಲ್ಲಾ ಏನಾಗಿದೆ, ಇಂತಹ ಕಾಸ್ಟ್ಯೂಮ್ ಯಾಕಾದ್ರೂ ಹಾಕ್ತಾರೆ" ಎಂದಿದ್ದಾರೆ.

ಅಭಿಮಾನಿಗಳು ಮಾತ್ರ ರಶ್ಮಿಕಾ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಬಹುತೇಕ ಕಾಮೆಂಟ್‌ಗಳು ನೆಗೆಟಿವ್ ಆಗಿಯೇ ಇದೆ. ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಟ್ರೋಲ್‌ಗಳಿಗೆ ಕ್ಯಾರೆ ಎನ್ನುತ್ತಿಲ್ಲ. ತಾನಾಯ್ತು ತನ್ನ ಕೆಲಸ ಆಯಿತು. ಮಾತನಾಡುವವರು ಏನಾದರೂ ಮಾತನಾಡಲಿ, ನಾನು ಇರೋದೇ ಹೀಗೆ ಎನ್ನುವಂತೆ ಕಾಣಿಸಿಕೊಳ್ಳುತ್ತಿದ್ದಾರೆ.

Rashmika Mandanna Gets Trolled For Her Dressing Sense, Netizens Compare Her With Urfi Javed

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. 'ಪುಷ್ಪ'- 2 ಹಾಗೂ ಬಾಲಿವುಡ್‌ನ 'ಅನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶ್ರೀವಲ್ಲಿ ಆಗಿ ಮತ್ತೊಮ್ಮೆ ಪುಷ್ಪರಾಜ್‌ ಜೊತೆ ಕುಣಿಯಲಿದ್ದಾರೆ. ಜೊತೆಗೆ ರಣ್‌ಬೀರ್ ಕಪೂರ್ ಜೋಡಿಯಾಗಿ 'ಅನಿಮಲ್' ಚಿತ್ರದಲ್ಲಿ ಕಮಾಲ್ ಮಾಡೋಕೆ ಬರ್ತಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲೂ ಕೊಡಗಿನ ಬೆಡಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಗುಡ್‌ಬೈ' ಚಿತ್ರಕ್ಕಾಗಿ ನಟಿ ರಶ್ಮಿಕಾಗೆ ಬೆಸ್ಟ್ ಡೆಬ್ಯೂ ಜೀ ಸಿನಿ ಅವಾರ್ಡ್ ಸಿಕ್ಕಿದೆ. ಈ ವಿಚಾರವನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದಲ್ಲಿ ರಶ್ಮಿಕಾ, ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ.

More from Filmibeat

English summary
Rashmika Mandanna Gets Trolled For Her Dressing Sense, Netizens Compare Her With Urfi Javed. As of now, Rashmika Mandanna working in Puhapa 2 with Allu Arjun and Animal with Ranbir Kapoor. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X