For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣಗೆ ಬಾಲಿವುಡ್ ಅವಕಾಶ ದೊರತಿದ್ದು ಹೇಗೆ?

  |

  ನಟಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು, ತಮಿಳಿನ ಬಳಿಕ ಈಗ ಬಾಲಿವುಡ್‌ಗೆ ಹಾರಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಬಾಲಿವುಡ್‌ನಲ್ಲಿ ದೊಡ್ಡ ಬಜೆಟ್‌ ಸಿನಿಮಾಗಳನ್ನು ರಶ್ಮಿಕಾ ಬಾಚಿಕೊಂಡಿದ್ದಾರೆ.

  ಹಲವಾರು ವರ್ಷಗಳ ಕಾಲ ದಕ್ಷಿಣ ಭಾರತದಲ್ಲಿ ನಟಿಸಿದ ನಟಿಯರು ಕೆಲವರಿಗೆ ಇನ್ನೂ ಬಾಲಿವುಡ್‌ನಲ್ಲಿ ಒಂದೂ ಅವಕಾಶ ಸಿಗದೇ ಕಾಯುತ್ತಿದ್ದಾರೆ. ಆದರೆ ರಶ್ಮಿಕಾ ಕೆಲವೇ ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್‌ನಲ್ಲಿ ದೊಡ್ಡ ಅವಕಾಶವನ್ನೇ ಪಡೆದುಕೊಂಡಿದ್ದಾರೆ.

  ರಶ್ಮಿಕಾ ಅವರು ನಾಯಕಿಯಾಗಿ ಆಯ್ಕೆಯಾದ ಮೊದಲ ಬಾಲಿವುಡ್ ಸಿನಿಮಾ 'ಮಿಶನ್ ಮಜ್ನು'. ಆ ನಂತರ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್‌ ಬೈ' ಹೆಸರಿನ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾರನ್ನು 'ಮಿಶನ್ ಮಜ್ನು' ಸಿನಿಮಾಕ್ಕೆ ಆಯ್ಕೆ ಮಾಡಿದ್ದೇಕೆ ಎಂಬುದನ್ನು ಸಿನಿಮಾದ ನಿರ್ದೇಶಕ ಶಂತನು ಬಾಗ್ಚಿ ಹೇಳಿದ್ದಾರೆ.

  ಅಮಾಯಕ ಮುಖದ ಸುಂದರ ನಟಿಗಾಗಿ ಹುಡುಕಾಟ

  ಅಮಾಯಕ ಮುಖದ ಸುಂದರ ನಟಿಗಾಗಿ ಹುಡುಕಾಟ

  ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಂತನು ಬಾಗ್ಚಿ, 'ಅಮಾಯಕ ಮುಖದ, ಸುಂದರ ಯುವತಿಯನ್ನು ಸಿನಿಮಾದ ನಾಯಕಿ ಪಾತ್ರಕ್ಕೆ ಹುಡುಕುತ್ತಿದ್ದೆವು. ಹೊಸ ಮುಖವಾಗಿರುವ ಜೊತೆಗೆ ಪ್ರತಿಭೆಯೂ ಇರಬೇಕೆಂಬುದು ನಮ್ಮ ಅಗತ್ಯವಾಗಿತ್ತು' ಎಂದಿದ್ದಾರೆ ಶಂತನು.

  'ಡಿಯರ್ ಕಾಮ್ರೆಡ್‌'ನಲ್ಲಿ ಅವರ ನಟನೆ ಸೆಳೆಯಿತು: ಶಂತನು

  'ಡಿಯರ್ ಕಾಮ್ರೆಡ್‌'ನಲ್ಲಿ ಅವರ ನಟನೆ ಸೆಳೆಯಿತು: ಶಂತನು

  'ನಟಿಯ ಹುಡುಕಾಟದ ಪ್ರಕ್ರಿಯೆಯಲ್ಲಿ ರಶ್ಮಿಕಾ ಮಂದಣ್ಣ ಅವರ ಕೆಲವು ಸಿನಿಮಾಗಳನ್ನು ನೋಡಿದೆ. 'ಡಿಯರ್ ಕಾಮ್ರೆಡ್' ಸಿನಿಮಾದಲ್ಲಿ ರಶ್ಮಿಕಾರ ನಟನೆ ನನ್ನನ್ನು ಬಹುವಾಗಿ ಸೆಳೆಯಿತು. ಅವರಿಗೆ ಅಮಾಯಕ ಮುಖದ ಜೊತೆಗೆ ಸುಂದರತೆ ಹಾಗೂ ಪ್ರತಿಭೆಯೂ ಇದೆ. ರಶ್ಮಿಕಾ ರೂಪದಲ್ಲಿ ಭಾರತಕ್ಕೆ ಮತ್ತೊಬ್ಬ ಅದ್ಭುತ ನಟಿ ಸಿಗಲಿದ್ದಾರೆ ಎಂಬ ವಿಶ್ವಾಸವಿದೆ' ಎಂದು ಹೊಗಳಿದ್ದಾರೆ ಶಂತನು.

  'ತಮ್ಮ ಅನುಭವ, ಆತ್ಮವಿಶ್ವಾಸವನ್ನು ಧಾರೆ ಎರೆಯಲಿದ್ದಾರೆ'

  'ತಮ್ಮ ಅನುಭವ, ಆತ್ಮವಿಶ್ವಾಸವನ್ನು ಧಾರೆ ಎರೆಯಲಿದ್ದಾರೆ'

  'ಮಿಷನ್ ಮಜ್ನು' ಸಿನಿಮಾದ ನಿರ್ಮಾಪಕ ಅಮರ್ ಬಟುಲಾ ಮಾತನಾಡಿ, 'ನಾನು ರಶ್ಮಿಕಾ ಅವರೊಟ್ಟಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದೆ. ಲಾಕ್‌ಡೌನ್ ಅವಧಿಯಲ್ಲಿ ನಾವು ಅವರಿಗೆ ಚಿತ್ರಕತೆ ಹೇಳಿದೆವು. ಅವರು ನಮ್ಮ ಅನುಭವ ಹಾಗೂ ಆತ್ಮವಿಶ್ವಾಸವನ್ನು ನಮ್ಮ ಸಿನಿಮಾಕ್ಕೆ ಧಾರೆ ಎರೆಯಲಿದ್ದಾರೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.

  Rashmika Mandanna ಬಾಲಿವುಡ್ ಎಂಟ್ರಿ ಕೊಡೋದಕ್ಕೆ ಹೆಲ್ಪ್ ಮಾಡಿದ್ದು ಯಾರು ಗೊತ್ತಾ? | Filmibeat Kannada
  'ಡಿಯರ್ ಕಾಮ್ರೆಡ್' ಸಿನಿಮಾದಿಂದಾಗಿ ಬಾಲಿವುಡ್‌ ಪಾತ್ರ

  'ಡಿಯರ್ ಕಾಮ್ರೆಡ್' ಸಿನಿಮಾದಿಂದಾಗಿ ಬಾಲಿವುಡ್‌ ಪಾತ್ರ

  'ಡಿಯರ್ ಕಾಮ್ರೆಡ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರದ್ದು ಕ್ರಿಕೆಟ್ ಆಟಗಾರ್ತಿಯ ಪಾತ್ರ. ಈ ಸಿನಿಮಾ ಯಶಸ್ಸು ಗಳಿಸಲಿಲ್ಲ. ಆದರೆ ಇದೇ ಸಿನಿಮಾದ ನಟನೆಯಿಂದಾಗಿ ರಶ್ಮಿಕಾಗೆ ಬಾಲಿವುಡ್ ಅವಕಾಶ ದೊರಕಿದ್ದು ವಿಶೇಷ.

  English summary
  Actress Rashmika Mandanna got Bollywood movie chance because of Dear Comrade Telugu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X