'ಆ ನಟನ ಜೊತೆ ಸಿನಿಮಾ ಮಾಡ್ತೀನಿ ಅಂತ ಯಾವತ್ತು ಅಂದುಕೊಂಡಿರಲಿಲ್ಲ'- ರಶ್ಮಿಕಾ

ಸೌತ್ ಇಂಡಸ್ಟ್ರಿ ಪಾಲಿಗೆ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿ. ಕನ್ನಡ, ತೆಲುಗು ಹಾಗೂ ಈಗ ತಮಿಳು ಇಂಡಸ್ಟ್ರಿಯಲ್ಲಿ ರಶ್ಮಿಕಾ ಕಾಲ್‌ಶೀಟ್‌ಗಾಗಿ ಕಾಯುತ್ತಿರುವ ನಿರ್ಮಾಪಕರಿದ್ದಾರೆ. ರಶ್ಮಿಕಾ ಅವರನ್ನು ನಾಯಕಿಯನ್ನಾಗಿಸಿ ಎಂದು ಸೂಚಿಸುವ ಸ್ಟಾರ್ ನಟರಿದ್ದಾರೆ.

ಪುನೀತ್ ರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ತೆಲುಗಿನಲ್ಲಿ ವಿಜಯ್ ದೇವರಕೊಂಡ, ಮಹೇಶ್ ಬಾಬು, ಅಲ್ಲು ಅರ್ಜುನ್, ನಿತೀನ್, ಈಗ ತಮಿಳಿನಲ್ಲಿ ಕಾರ್ತಿ ಅಂತಹ ಸ್ಟಾರ್ ನಟರ ಜೊತೆ ರಶ್ಮಿಕಾ ಸಿನಿಮಾ ಮಾಡಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ರಶ್ಮಿಕಾ ಸಕ್ಸಸ್ ನಿಜಕ್ಕೂ ವಾಹ್ ಎನ್ನಿಸುವಂತಿದೆ. ಇದೀಗ, ಬಾಲಿವುಡ್‌ನಲ್ಲೂ ಆಫರ್ ಗಿಟ್ಟಿಸಿಕೊಂಡಿರುವ ನಟಿ ಎರಡು ಸಿನಿಮಾ ಮಾಡ್ತಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ಮತ್ತು ಅಮಿತಾಭ್ ಬಚ್ಚನ್ ಜೊತೆ ಇನ್ನೊಂದು ಸಿನಿಮಾ ಪ್ರಾರಂಭಿಸಿದ್ದಾರೆ.

ಬಾಲಿವುಡ್‌ನಲ್ಲಿ ಎರಡನೇ ಪ್ರಾಜೆಕ್ಟ್ ಆರಂಭಿಸಿರುವ ರಶ್ಮಿಕಾ 'ತಾನು ಯಾವತ್ತೂ ಆ ನಟನ ಜೊತೆ ಸಿನಿಮಾ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ' ಎಂದು ಸಂತಸ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಬಿಗ್-ಬಿ ಜೊತೆ ರಶ್ಮಿಕಾ ನಟನೆ

ಬಿಗ್-ಬಿ ಜೊತೆ ರಶ್ಮಿಕಾ ನಟನೆ

ವಿಕಾಸ್ ಭಾಲ್ ನಿರ್ದೇಶನದ 'ಗುಡ್ ಬೈ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇದು ರಶ್ಮಿಕಾಗೆ ಎರಡನೇ ಬಾಲಿವುಡ್ ಚಿತ್ರ. ಈ ಸಿನಿಮಾದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಬಿಗ್ ಬಿ ಜೊತೆ ರಶ್ಮಿಕಾ ತೆರೆಹಂಚಿಕೊಳ್ಳುವ ಅದೃಷ್ಟ ಪಡೆದಿದ್ದಾರೆ.

ನಾನು ಯಾವತ್ತು ಅಂದುಕೊಂಡಿರಲಿಲ್ಲ

ನಾನು ಯಾವತ್ತು ಅಂದುಕೊಂಡಿರಲಿಲ್ಲ

''ಅಮಿತಾಭ್ ಬಚ್ಚನ್ ಅವರೊಂದಿಗೆ ಕೆಲಸ ಮಾಡಲು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನನ್ನ ವೃತ್ತಿಜೀವನದಲ್ಲಿ ನಾನು ಬಿಗ್ ಬಿ ಜೊತೆ ಸಿನಿಮಾ ಮಾಡ್ತೀನಿ ಅಂತ ಎಂದಿಗೂ ಭಾವಿಸಿರಲಿಲ್ಲ. ಶೂಟಿಂಗ್ ಆರಂಭಿಸಲು ಎದುರು ನೋಡುತ್ತಿದ್ದೇನೆ. ನಾನು ಅವರಿಂದ ಬಹಳಷ್ಟು ಕಲಿಯುವುದು ಖಚಿತ'' ಎಂದು ರಶ್ಮಿಕಾ ಬಾಲಿವುಡ್ ಮಾಧ್ಯಮದ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ನನಗೆ ಸಿಕ್ಕಿರುವ ದೊಡ್ಡ ಅವಕಾಶ

ನನಗೆ ಸಿಕ್ಕಿರುವ ದೊಡ್ಡ ಅವಕಾಶ

''ನಿಜವಾಗಲೂ, ಅಮಿತಾಭ್ ಸರ್ ಜೊತೆ ಶೂಟಿಂಗ್ ಪ್ರಾರಂಭಿಸಲು ನರ್ವಸ್ ಆಗಿದ್ದೇನೆ. ಇದು ನನಗೆ ಸಿಕ್ಕಿರುವ ಅತಿ ದೊಡ್ಡ ಅವಕಾಶ, ಅದನ್ನು ನಾನು ಮಿಸ್ ಮಾಡಿಕೊಳ್ಳಲು ಇಷ್ಟಪಡಲ್ಲ. ಈ ಅವಕಾಶದಿಂದ ಹೆಚ್ಚು ಪಡೆದುಕೊಳ್ಳುತ್ತೇನೆ ಎಂಬ ನಂಬಿಕೆ ಇದೆ'' ಎಂದು ರಶ್ಮಿಕಾ ಹೇಳಿದ್ದಾರೆ.

ಮಿಷನ್ ಮಜ್ನು ಶೂಟಿಂಗ್

ಮಿಷನ್ ಮಜ್ನು ಶೂಟಿಂಗ್

ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಟಿಸುತ್ತಿರುವ 'ಮಿಷನ್ ಮಜ್ನು' ಚಿತ್ರೀಕರಣ ಆರಂಭವಾಗಿದೆ. ಮೊದಲ ಹಂತದ ಶೂಟಿಂಗ್‌ನಲ್ಲಿ ರಶ್ಮಿಕಾ ಭಾಗವಹಿಸಿದ್ದರು. ಇದು ರಶ್ಮಿಕಾಗೆ ಮೊದಲ ಹಿಂದಿ ಸಿನಿಮಾ. ಏಪ್ರಿಲ್ 1 ರಂದು 'ಗುಡ್ ಬೈ' ಸಿನಿಮಾದ ಮುಹೂರ್ತ ನಡೆದಿದೆ. ಆದರೆ, ರಶ್ಮಿಕಾ ಯಾವಾಗ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂಬುದಕ್ಕೆ ಸದ್ಯಕ್ಕೆ ಉತ್ತರ ಇಲ್ಲ.

More from Filmibeat

English summary
Kannada actress Rashmika Mandanna said that she had never thought she would get to work with the BIg B Amitabh bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X