For Quick Alerts
  ALLOW NOTIFICATIONS  
  For Daily Alerts

  ಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಹೈದರಾಬಾದ್‌ಗೆ ಹಾರಿದ ರಶ್ಮಿಕಾ

  |

  ಮಹಾರಾಷ್ಟ್ರದಲ್ಲಿ ಕರ್ಫ್ಯೂ ಘೋಷಣೆಯಾದ ಹಿನ್ನೆಲೆ ನಟಿ ರಶ್ಮಿಕಾ ಮಂದಣ್ಣ ಮುಂಬೈನಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆ.

  ಮುಂಬೈನಲ್ಲಿ ಅಮಿತಾಭ್ ಬಚ್ಚನ್ ಜೊತೆ 'ಗುಡ್ ಬೈ' ಸಿನಿಮಾ ಚಿತ್ರೀಕರಣದಲ್ಲಿ ರಶ್ಮಿಕಾ ತೊಡಗಿಕೊಂಡಿದ್ದರು. ರಾಜ್ಯದಲ್ಲಿ ಸೋಂಕು ಏರಿಕೆಯಾಗುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರ ಹದಿನೈದು ದಿನಗಳ ಕಾಲ ಸಂಪೂರ್ಣವಾಗಿ ಕರ್ಫ್ಯೂ ಜಾರಿ ಮಾಡಿದೆ.

  'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?

  ಈ ವೇಳೆ ಟಿವಿ ಶೂಟಿಂಗ್, ಸಿನಿಮಾ ಶೂಟಿಂಗ್ ಹಾಗೂ ಚಿತ್ರರಂಗದ ಯಾವುದೇ ಕಾರ್ಯಕ್ರಮ ಮಾಡಲು ಅನುಮತಿ ಇಲ್ಲ. ಹಾಗಾಗಿ, ಮುಂಬೈನಲ್ಲಿ ಹದಿನೈದು ದಿನಗಳ ಕಾಲ ಸುಮ್ಮನೆ ಸಮಯ ಕಳೆಯಲು ಸಾಧ್ಯವಾಗದ ಹಿನ್ನೆಲೆ ಹೈದರಾಬಾದ್‌ಗೆ ರಶ್ಮಿಕಾ ತೆರಳಿದ್ದಾರೆ.

  ಈ ವೇಳೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ನಟಿ ''ಕರ್ಫ್ಯೂ ಮುಗಿದ ಮೇಲೆ ಮತ್ತೆ ಮುಂಬೈಗೆ ಬರ್ತೇನೆ, ನಿಮ್ಮ ಆರೋಗ್ಯ ನೋಡಿಕೊಳ್ಳಿ'' ಎಂದು ಛಾಯಾಗ್ರಾಹಕರಿಗೆ ತಿಳಿಸಿದರು.

  ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಎರಡು ಸಿನಿಮಾ ಮಾಡ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಮಿಷನ್ ಮಜ್ನು' ಚಿತ್ರದ ಮೂಲಕ ಬಿಟೌನ್ ಪ್ರವೇಶಿಸಿದ್ದಾರೆ. ಈ ಸಿನಿಮಾದ ಜೊತೆಗೆ 'ಗುಡ್ ಬೈ' ಸಿನಿಮಾನೂ ಕೈಗೆತ್ತಿಕೊಂಡಿದ್ದು, ಚಿತ್ರೀಕರಣ ಆರಂಭಿಸಿದೆ.

  ಮರ ಕಡಿದು ಹೆಲಿ ಟೂರಿಸಂ ಮಾಡೋ ಸರ್ಕಾರದ ಯೋಜನೆಗೆ ದುನಿಯಾ ವಿಜಯ್ ಆಕ್ಷೇಪ | Filmibeat Kannada

  ಸೌತ್ ಇಂಡಸ್ಟ್ರಿಯಲ್ಲಿ 'ಪುಷ್ಪ' ಸಿನಿಮಾ ಮುಗಿಸಿರುವ ರಶ್ಮಿಕಾ ಮಂದಣ್ಣ ರಿಲೀಸ್‌ಗಾಗಿ ಕಾಯ್ತಿದ್ದಾರೆ. ಈ ನಡುವೆ ಶರ್ವಾನಂದ್ ಜೊತೆ ಒಂದು ಸಿನಿಮಾ ಮಾಡ್ತಿದ್ದು, ಅದನ್ನು ಬಿಟ್ಟರೆ ಸದ್ಯಕ್ಕೆ ಬೇರೆ ಯಾವ ಚಿತ್ರವೂ ಘೋಷಿಸಿಲ್ಲ.

  English summary
  Actress Rashmika Mandanna Head to Hyderabad From Mumbai Due to maharashtra Lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X